ಶಿವಮೊಗ್ಗದಲ್ಲಿ ತಳ್ಳುಗಾಡಿಯನ್ನೂ ಬಿಡದ ಖದೀಮರು, ಎಲ್ಲಿ? ಆಗಿದ್ದೇನು?

 ಶಿವಮೊಗ್ಗ  LIVE 

ಶಿವಮೊಗ್ಗ: ಸಾಗರ ರಸ್ತೆಯ ಮಲ್ಲಿಗೇನಹಳ್ಳಿ ಬಳಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ತಳ್ಳುವ ಗಾಡಿಯೊಂದನ್ನು (Pushcart) ಕಳ್ಳರು ಕಳ್ಳತನ ಮಾಡಿದ್ದಾರೆ.

ಇದನ್ನೂ ಓದಿ » ಶಿವಮೊಗ್ಗದ ರೈಸ್‌ ಮಿಲ್‌ ಮಾಲೀಕನಿಗೆ ಹಾಸನದ ವ್ಯಕ್ತಿಯಿಂದ ಲಕ್ಷ ಲಕ್ಷ ವಂಚನೆ, ಆಗಿದ್ದೇನು?

ರಾಘವೇಂದ್ರ ನಾಯ್ಕ ಎಂಬುವವರು ವ್ಯಾಪಾರ ಮುಗಿಸಿ ರಾತ್ರಿ ಎಂದಿನಂತೆ ಗಾಡಿಯನ್ನು ನಿಲ್ಲಿಸಿ ಮನೆಗೆ ಹೋಗಿದ್ದರು. ಮರುದಿನ ಬೆಳಿಗ್ಗೆ ಬಂದು ನೋಡಿದಾಗ ಗಾಡಿಯು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಈ ತಳ್ಳುವ ಗಾಡಿಯು ಕಬ್ಬಿಣದ ಚಾವಣಿ ಮತ್ತು ಬೈಕ್ ಚಕ್ರಗಳನ್ನು ಹೊಂದಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಕಳುವಾದ ಈ ತಳ್ಳುವ ಗಾಡಿಯ ಮೌಲ್ಯ ಸುಮಾರು ₹30,000 ಎಂದು ಉಲ್ಲೇಖಿಸಲಾಗಿದೆ. ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment