ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA, 11 AUGUST 2024 : ಮುಂಬರುವ ಗೌರಿ, ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಹಿನ್ನೆಲೆ ಕಾನೂನು ಸುವ್ಯವಸ್ಥೆ (law and order) ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆ ಶಿವಮೊಗ್ಗದಲ್ಲಿ ರೌಡಿಗಳ ಪರೇಡ್ ನಡೆಸಲಾಯಿತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಡಿಎಆರ್ ಮೈದಾನದಲ್ಲಿ ನಡೆದ ರೌಡಿ ಪರೇಡ್‌ನಲ್ಲಿ 110 ರೌಡಿಗಳು ಹಾಜರಿದ್ದರು. ಪೊಲೀಸ್ ಠಾಣೆವಾರು ಪ್ರತಿ ರೌಡಿ ಶೀಟರ್ ಬಳಿ ತೆರಳಿ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಎಚ್ಚರಿಕೆ ನೀಡಿದರು.
ಎಸ್‌ಪಿ ನೀಡಿದ ನಾಲ್ಕು ಖಡಕ್ ವಾರ್ನಿಂಗ್
» ವಾರ್ನಿಂಗ್ 1 : ವಾರದಲ್ಲಿ 2 ಬಾರಿ ಕಡ್ಡಾಯವಾಗಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಹೋಗಿ ಹಾಜರಾತಿ ಹಾಕಬೇಕು.
» ವಾರ್ನಿಂಗ್ 2 : ನಿಮ್ಮ ಚಟುವಟಿಕೆ ಮತ್ತು ಚಲನವಲನಗಳ ಮೇಲೆ ನಿಗಾ ಇಡಲಾಗಿದೆ. ಒಂದು ವೇಳೆ ಕಾನೂನು ಬಾಹಿರ ಚಟುವಟಿಕೆ ಮತ್ತು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವುದು ಕಂಡು ಬಂದಲ್ಲಿ, ಗಡಿಪಾರು ಮತ್ತು ಗೂಂಡಾ ಕಾಯ್ದೆ ಅಡಿ ಕಠಿಣ ಕ್ರಮ ಜರುಗಿಸಲಾಗುತ್ತದೆ.
» ವಾರ್ನಿಂಗ್ 3 : ನಿಮ್ಮ ಆದಾಯದ ಮೂಲ ಮತ್ತು ಸ್ನೇಹಿತರ ಕುರಿತು ಪೊಲೀಸ್ ಇಲಾಖೆಯಿಂದ ನಿರಂತರವಾಗಿ ನಿಗಾ ಇಡಲಾಗುತ್ತದೆ. ಒಂದು ವೇಳೆ ನೀವು ಗುಂಪು ಕಟ್ಟಿಕೊಂಡು ಅಡ್ಡಗಳನ್ನು ಮಾಡಿಕೊಳ್ಳುವುದು, ರಾತ್ರಿ ವೇಳೆ ಮನೆಯಲ್ಲಿರದೇ ಅನಾವಶ್ಯಕವಾಗಿ ಹೊರಗಡೆ ಸುತ್ತಾಡುವುದು ಕಂಡು ಬಂದಲ್ಲಿ ಕಾನೂನಾತ್ಮಕ ಕಠಿಣ ಕ್ರಮ ಜರುಗಿಸಲಾಗುವುದು.
» ವಾರ್ನಿಂಗ್ 4 : ಹೇರ್ ಕಟಿಂಗ್ ಮತ್ತು ಶೇವಿಂಗ್ ಮಾಡಿಸಿಕೊಂಡು, ಶಿಸ್ತಾಗಿ ಕಾಣುವಂತಹ ಉಡುಪು ಧರಿಸಬೇಕು. ಕಾನೂನನ್ನು ಗೌರವಿಸಿ ಹಾಗೂ ಕಾನೂನನ್ನು ಪಾಲನೆ ಮಾಡುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಜೀವಿಸಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಜರುಗಿಸುತ್ತದೆ.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರಡ್ಡಿ, ಡಿವೈಎಸ್‌ಪಿಗಳಾದ ಸುರೇಶ್ ಎಂ, ಬಾಬು ಆಂಜನಪ್ಪ, ವಿವಿಧ ಠಾಣೆಗಳ ಪೊಲೀಸ್ ಇನ್ಸ್‌ಪೆಕ್ಟರ್‌ಗಳು, ಸಬ್ ಇನ್ಸ್‌ಪೆಕ್ಟರ್‌ಗಳು, ಸಿಬ್ಬಂದಿ ಇದ್ದರು.
ಇದನ್ನೂ ಓದಿ ⇒ ಶಿವಮೊಗ್ಗದಲ್ಲಿ ನೇಣು ಬಿಗಿದು ವ್ಯಕ್ತಿ ಸಾವು, ಜೇಬಲ್ಲಿತ್ತು ಡೆತ್ ನೋಟ್, ಪತ್ರಕರ್ತ ಸೇರಿ ಇಬ್ಬರು ಅರೆಸ್ಟ್