ಶಿವಮೊಗ್ಗದ 100 ಅಡಿ ರಸ್ತೆಯಲ್ಲಿ ಬೆಂಗಳೂರು ಪೊಲೀಸರ ಎದುರು ಚಾಕು ಇರಿದುಕೊಂಡ ರೌಡಿಶೀಟರ್‌

ಶಿವಮೊಗ್ಗ: ಬಂಧನಕ್ಕೆ ಬಂದ ಬೆಂಗಳೂರು ಸಿಸಿಬಿ ಪೊಲೀಸರ ಎದುರೇ ರೌಡಿಶೀಟರ್‌ ಒಬ್ಬ ತನಗೆ ತಾನೇ ಚಾಕು ಇರಿದುಕೊಂಡಿರುವ ಘಟನೆ ನಡೆದಿದೆ. 100 ಅಡಿ ರಸ್ತೆಯ ನಿರ್ಮಲಾ ನರ್ಸಿಂಗ್ ಹೋಂ ಇಂದು ಮಧ್ಯಾಹ್ನ ಘಟನೆ ಸಂಭವಿಸಿದೆ. (ಈ ಸುದ್ದಿಯನ್ನು ಇನ್ನು 34 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ರೌಡಿಶೀಟರ್ ಸಮೀರ್ ಅಲಿಯಾಸ್ ಬಚ್ಚನ್ ಬಂಧನಕ್ಕೆ ಬೆಂಗಳೂರು ಸಿಸಿಬಿ ಪೊಲೀಸರು ಶಿವಮೊಗ್ಗಕ್ಕೆ ಬಂದಿದ್ದರು. ಈ ವೇಳೆ ಪೊಲೀಸರನ್ನು ಕಂಡ ತಕ್ಷಣ ಆರೋಪಿ ಸಮೀರ್ ಚಾಕುವಿನಿಂದ ಸ್ವತಃ ತನಗೆ ಇರಿದುಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಕೂಡಲೇ ಸಮೀರ್‌ನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.

Mc-Gann-Hospital-Casualty-during-Bachan-Issue

ಚಿಕಿತ್ಸೆ ಪೂರ್ಣಗೊಂಡ ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ. ಇದೇ ವೇಳೆ ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿ ಆರೋಪಿ ಸಮೀರ್ ಕುಟುಂಬಸ್ಥರು ಪೊಲೀಸ್ ಕಾರ್ಯಾಚರಣೆಗೆ ಅಡ್ಡಿಪಡಿಸಿ ತೀವ್ರ ಹೈಡ್ರಾಮಾ ನಡೆಸಿದರು.

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ: