ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗ: ಅಧಿಕಾರಿಗಳ ವಸತಿಗೃಹದ ಬಳಿ ಮತ್ತೊಂದು ಶ್ರೀಗಂಧದ (Sandalwood) ಮರ ತುಂಡು ಮಾಡಿ ಕಳ್ಳತನ ಮಾಡಲಾಗಿದೆ. ಬಸವನಗುಡಿಯಲ್ಲಿರುವ ವಸತಿ ಗೃಹಗಳ ಮನೆಯೊಂದರ ಆವರಣದಲ್ಲಿದ್ದ ಶ್ರೀಗಂಧದ ಮರವನ್ನು ರಾತ್ರೋರಾತ್ರಿ ತುಂಡು ಮಾಡಿ ಕಳ್ಳತನ ಮಾಡಲಾಗಿದೆ.
ಜಿಲ್ಲಾ ಪಂಚಾಯಿತಿಯಲ್ಲಿ ಚಾಲಕರಾಗಿರುವ ಲೋಕೇಶ್ ಎಂಬುವವರ ಮನೆ ಆವರಣದಲ್ಲಿದ್ದ ಶ್ರೀಗಂಧದ ಮರಕ್ಕೆ ನಡುರಾತ್ರಿ ಕೊಡಲಿ ಹಾಕಲಾಗಿದೆ. ಬೆಳಗಿನ ಜಾವ ಲೋಕೇಶ್ ಮನೆಯಿಂದ ಹೊರ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ.
ಮಹಿಳಾ ಅಧಿಕಾರಿ ಗಾಡಿ ಚಕ್ರ ಕಳ್ಳತನ
ಇನ್ನು ಮನೆ ಮುಂದೆ ನಿಲ್ಲಿಸಿದ್ದ ಮಹಿಳಾ ಅಧಿಕಾರಿಯೊಬ್ಬರ ದ್ವಿಚಕ್ರ ವಾಹನದ ಚಕ್ರ ಕಳವು ಮಾಡಲಾಗಿದೆ. ಜಿಲ್ಲಾಧಿಕಾರಿ ಕಚೇರಿಯ ಎಫ್‌ಡಿಎ ಸಂಧ್ಯಾ ಅವರ ಮನೆ ಮುಂದೆ ಬೈಕ್ ನಿಲ್ಲಿಸಿದ್ದರು. ನಡುರಾತ್ರಿ ಹಿಂಬದಿಯ ಚಕ್ರ ಕಳ್ಳತನ ಮಾಡಲಾಗಿದೆ. ಸಂಧ್ಯಾ ಅವರಿಗೆ ಬೆಳಗ್ಗೆ ವಿಷಯ ಗೊತ್ತಾಗಿದೆ.

ಗಂಧದ ಮರ ಕಳ್ಳತನ ಇದೇ ಮೊದಲಲ್ಲ
ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಅವರ ಮನೆ ಹಿಂಭಾಗದಲ್ಲಿಯೇ ಅಧಿಕಾರಿಗಳ ಕ್ವಾರ್ಟರ್ಸ್ ಇದೆ. ಇಲ್ಲಿ ಹಲವು ಶ್ರೀಗಂಧದ ಮರಗಳಿದ್ದವು. ಕಳೆದ ಕೆಲವು ಸಮಯದಿಂದ ಇಲ್ಲಿ ರಾತ್ರೋರಾತ್ರಿ ಶ್ರೀಗಂಧದ ಮರಗಳ ಕಳ್ಳತನ ಮಾಡಲಾಗುತ್ತಿದೆ. ಹದಿನೈದು ದಿನದ ಹಿಂದೆಯಷ್ಟೆ ಎರಡು ಶ್ರೀಗಂಧದ ಮರಗಳಿಗೆ ಕೊಡಲಿ ಹಾಕಲಾಗಿತ್ತು. ಒಂದು ಮರ ಕದ್ದೊಯ್ದಿದ್ದ ಕಳ್ಳರು, ಮತ್ತೊಂದು ಮರಕ್ಕೆ ಹಾನಿ ಮಾಡಿದ್ದರು.
ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಇದನ್ನೂ ಓದಿ » ಶಿವಮೊಗ್ಗದ ‘ಎರಡು ರುಪಾಯಿ ಡಾಕ್ಟರ್’ ಹೃದಯಾಘಾತದಿಂದ ನಿಧನ
Sandalwood






