ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗ: ‘ಎರಡು ರುಪಾಯಿ ಡಾಕ್ಟರ್ʼ (Doctor) ಎಂದೇ ಖ್ಯಾತರಾಗಿದ್ದ ಡಾ. ಬಿ.ಎಲ್.ಸುರೇಶ್ ತಲ್ಯಾಳ (72) ನಿಧನರಾಗಿದ್ದಾರೆ. ಜ್ಯೋತಿನಗರದ ಮನೆಯಲ್ಲಿ ಕಳೆದ ರಾತ್ರಿ ಹೃದಯಾಘಾತ ಸಂಭವಿಸಿತ್ತು.
ಹರಿಗೆ, ಒಡ್ಡಿನಕೊಪ್ಪ, ಮಲವಗೊಪ್ಪ, ಜ್ಯೋತಿನಗರ, ವಿದ್ಯಾನಗರ ಸೇರಿದಂತೆ ವಿವಿಧೆಡೆಯ ಜನರು ಡಾ. ಸುರೇಶ್ ತಲ್ಯಾಳ ಅವರ ಅಂತಿಮ ದರ್ಶನ ಪಡೆದರು. ಜ್ಯೋತಿನಗರದಲ್ಲಿ ಪಾರ್ವತಿ ಕ್ಲಿನಿಕ್ ನಡೆಸುತ್ತಿದ್ದ ಡಾ. ಸುರೇಶ್ ತಲ್ಯಾಳ ಅವರು ಎರಡು ರುಪಾಯಿ ಡಾಕ್ಟರ್ ಎಂದೇ ಖ್ಯಾತರಾಗಿದ್ದರು. ಹರಿಗೆ ಮತ್ತು ಸುತ್ತಮುತ್ತಲ ಭಾಗದ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಕೆಲವು ವರ್ಷದಿಂದ ಹಣವನ್ನೇ ಪಡೆಯದೆ ಚಿಕಿತ್ಸೆ ನೀಡುತ್ತಿದ್ದರು.
ಹಲವು ಜನಪ್ರತಿನಿಧಿಗಳು, ಸುತ್ತಮುತ್ತಲ ಬಡಾವಣೆ ನಿವಾಸಿಗಳು ವೈದ್ಯರಿಗೆ ಅಂತಿಮ ನಮನ ಸಲ್ಲಿಸಿದರು. ಡಾ. ಸುರೇಶ್ ತಲ್ಯಾಳ ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ನೆರವೇರಿತು.

ಇದನ್ನೂ ಓದಿ » ₹49 ಲಕ್ಷ ಹೂಡಿಕೆ ಮಾಡಿದ ಮಹಿಳೆಗೆ ₹3 ಕೋಟಿ ಲಾಭ, ಆಮೇಲೆ ಕಾದಿತ್ತು ದೊಡ್ಡ ಆಘಾತ
Doctor






