ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್ಗೆ ಪ್ರವೇಶಾತಿ ಆರಂಭ
ಶಿವಮೊಗ್ಗ: ಷೇರು ಮಾರುಕಟ್ಟೆಯಲ್ಲಿ (Share Market) ಹೂಡಿಕೆ ಮಾಡಿದ ಹಣ ಮೂರು ಕೋಟಿ ರುಪಾಯಿ ಲಾಭಾಂಶ ಗಳಿಸಿದೆ ಎಂದು ನಂಬಿಸಿ ಶಿವಮೊಗ್ಗ ಜಿಲ್ಲೆಯ ಮಹಿಳೆಯೊಬ್ಬರಿಗೆ ₹49.15 ಲಕ್ಷ ವಂಚಿಸಲಾಗಿದೆ.
ವಂಚನೆ ಆಗಿದ್ದು ಹೇಗೆ?
ಷೇರು ವ್ಯವಹಾರ ಕುರಿತು ಯುಟ್ಯೂಬ್ ವಿಡಿಯೋದ ಕೆಳಗಿದ್ದ ಲಿಂಕ್ ಕ್ಲಿಕ್ ಮಾಡಿ ವಾಟ್ಸಪ್ ಗ್ರೂಪ್ ಒಂದಕ್ಕೆ ಮಹಿಳೆ ಸೇರ್ಪಡೆಯಾಗಿದ್ದರು. ಅಲ್ಲಿ ಅವರು ಸೂಚಿಸಿದಂತೆ ಲಿಂಕ್ ಕ್ಲಿಕ್ ಮಾಡಿ ತಮ್ಮ ಹೆಸರು ಮತ್ತು ಮಾಹಿತಿ ಹಂಚಿಕೊಂಡಿದ್ದರು. ಸ್ಟಾಕ್ ಟ್ರೇಡಿಂಗ್ ಕಂಪನಿಯ ಮ್ಯಾನೇಜರ್ ಅಲೋಕ್ ಕುಮಾರ್ ಎಂದು ವಾಟ್ಸಪ್ ಮಾಡಿದ ವ್ಯಕ್ತಿಯೊಬ್ಬ, ಮಹಿಳೆಗೆ ಹಣ ಹೂಡಿಕೆ ಮಾಡುವಂತೆ ಸೂಚಿಸಿದ.
ಮ್ಯಾನೇಜರ್ ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಮಹಿಳೆಯು ತನ್ನ ಪತಿಯ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಹಣ ವರ್ಗಾಯಿಸಿದ್ದರು. ಸ್ಟಾಕ್ ಟ್ರೇಡಿಂಗ್ ಕಂಪನಿಯವರು ಒದಗಿಸಿದ್ದ ಮೊಬೈಲ್ ಆಪ್‌ನಲ್ಲಿ ಮಹಿಳೆಯು ಮೂರು ಕೋಟಿ ರುಪಾಯಿ ಲಾಭಾಂಶ ಗಳಿಸಿರುವುದಾಗಿ ತಿಳಿಸಿತ್ತು. ಆ ಹಣವನ್ನು ಹಿಂಪಡೆಯಲು ಮುಂದಾದಾಗ ಶೇ.15ರಷ್ಟು ಶುಲ್ಕ ಪಾವತಿಸಬೇಕು ಎಂದು ಕಂಪನಿಯವರು ತಿಳಿಸಿದರು.
ಅನುಮಾನಗೊಂಡು ವಿಚಾರಿಸಿದಾಗಿ ಮೋಸ ಹೋಗಿರುವುದು ಗೊತ್ತಾಗಿದೆ. ಈ ವೇಳೆಗಾಗಲೆ ಮಹಿಳೆ ₹49.15 ಲಕ್ಷವನ್ನು ವಂಚಕರ ಖಾತೆಗೆ ವರ್ಗಾಯಿಸಿದ್ದರು. ಘಟನೆ ಸಂಬಂಧ ಶಿವಮೊಗ್ಗದ ಸಿ.ಇ.ಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಶಿವಮೊಗ್ಗದಲ್ಲಿ ರಂಗೋಲೆ ಹಾಕುತ್ತಿದ್ದ ಮಹಿಳೆ ಚಿನ್ನದ ಸರ ಅಪಹರಣ, ಆಗಿದ್ದೇನು?
Share Market





