ಶಿವಮೊಗ್ಗ ಲೈವ್.ಕಾಂ |SHIMOGA NEWS | 14 NOVEMBER 2020
ಜನ ಶತಾಬ್ದಿ ರೈಲಿನಲ್ಲಿ ಶಿವಮೊಗ್ಗಕ್ಕೆ ಬರುವಾಗ ಆಯಾತಪ್ಪಿ ತುಂಗಾ ನದಿಗೆ ಬಿದ್ದ ಯುವತಿ ಶೋಧ ಕಾರ್ಯ ಮುಂದುವರೆದಿದೆ. ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಗಳು ಶೋಧ ಕಾರ್ಯದಲ್ಲಿ ನಡೆಸುತ್ತಿದ್ದಾರೆ.
ಯುವತಿ ಬಿದ್ದಿದ್ದು ಹೇಗೆ?
ಬೆಂಗಳೂರಿನಿಂದ ಗುರುವಾರ ರಾತ್ರಿ ಜನ ಶತಾಬ್ದಿ ರೈಲು ಶಿವಮೊಗ್ಗಕ್ಕೆ ಬರುತ್ತಿತ್ತು. ತುಂಗಾ ಸೇತುವೆ ಮೇಲೆ ರೈಲು ಬರುತ್ತಿದ್ದಾಗ ಬಾಗಿಲ ಬಳಿ ನಿಂತಿದ್ದ ಯುವತಿಯೊಬ್ಬಳು ಆಯಾತಪ್ಪಿ ಹೊಳೆಗೆ ಬಿದ್ದಿದ್ದಾಳೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ನೀಡಿದ್ದಾರೆ.
ಯುವತಿ ಬಾಗಿಲ ಬಳಿ ಬಂದಿದ್ದೇಕೆ?
ಗಾಡಿಕೊಪ್ಪದ ಸಹನಾ (24), ದೀಪಾವಳಿ ಹಬ್ಬಕ್ಕಾಗಿ ಪೋಷಕರ ಜೊತೆಗೆ ಬೆಂಗಳೂರಿನಿಂದ ಜನ ಶತಾಬ್ದಿ ರೈಲಿನಲ್ಲಿ ಬರುತ್ತಿದ್ದರು. ತಾಯಿ ಶೌಚಗೃಹಕ್ಕೆ ತೆರಳಿದ್ದರಿಂದ ಮೊಬೈಲ್‍ನಲ್ಲಿ ಮಾತನಾಡುತ್ತ ಸಹನಾ ರೈಲಿನ ಬಾಗಿಲ ಬಳಿ ಬಂದಿದ್ದರು. ಈ ವೇಳೆ ರೈಲು ತುಂಗಾ ನದಿ ಸೇತುವೆ ಮೇಲೆ ಸಂಚರಿಸುತ್ತಿತ್ತು.
ಸಹನಾ ಬಿದ್ದಿದ್ದನ್ನು ನೋಡಿದ್ಯಾರು?
ರೈಲಿನಿಂದ ಆಯಾತಪ್ಪಿ ರೈಲಿನಿಂದ ಕೆಳಗೆ ಬಿದ್ದಿದ್ದನ್ನು ಸಮೀಪದಲ್ಲಿದ್ದ ಮಗುವೊಂದು ನೋಡಿದೆ ಎಂದು ಹೇಳಲಾಗುತ್ತಿದೆ. ಆ ಮಗು ಜೋರಾಗಿ ಕಿರುಚಿಕೊಂಡಿದೆ. ಬೋಗಿಯಲ್ಲಿದ್ದವರು ಕೂಡಲೆ ಬಾಗಿಲ ಬಳಿಗೆ ಬಂದಿದ್ದಾರೆ. ಚೈನ್ ಎಳೆದು ರೈಲು ನಿಲ್ಲಿಸುವ ಯತ್ನ ನಡೆಯಿತು. ಆ ಹೊತ್ತಿಗಾಗಲೇ ರೈಲು ನಿಲ್ದಾಣದ ತಲುಪಿತ್ತು.
ಶೋಧ ಕಾರ್ಯಾಚರಣೆ ಶುರು
ವಿಚಾರ ತಿಳಿಯುತ್ತಿದ್ದಂತೆ ಗುರುವಾರ ರಾತ್ರಿಯಿಂದಲೇ ಶೋಧ ಕಾರ್ಯಾಚರಣೆ ಆರಂಭಿಸಲಾಯಿತು. ರೈಲ್ವೆ ಸೇತುವೆಯ ಆಚೀಚೆ ಹೊಳೆಯಲ್ಲಿ ಶೋಧ ನಡೆಸಲಾಯಿತು. ಎಲ್ಲಿಯೂ ಸಹನಾ ಪತ್ತೆ ಆಗಿಲ್ಲ. ಶುಕ್ರವಾರವು ಶೋಧ ಕಾರ್ಯ ನಡೆಸಲಾಯಿತು.
ಮುಂದಿನ ವಾರ ಪರೀಕ್ಷೆ ಇತ್ತು
ಸಹನಾ ಬೆಂಗಳೂರಿನಲ್ಲಿ ಎಂಸಿಎ ಓದುತ್ತಿದ್ದರು. ಲೆಕ್ಕ ಪರಿಶೋಧಕ (ಸಿಎ) ಪರೀಕ್ಷೆ ಬರೆಯಬೇಕಿತ್ತು. ನವೆಂಬರ್ 22ರಂದು ಶಿವಮೊಗ್ಗದ ಎನ್‍ಇಎಸ್ ಕಾಲೇಜಿನಲ್ಲಿ ಪರೀಕ್ಷೆ ಇತ್ತು. ದೀಪಾವಳಿ ಹಬ್ಬ ಮತ್ತು ಪರೀಕ್ಷೆ ಇದ್ದ ಕಾರಣ ಸಹನಾ, ಪೋಷಕರ ಜೊತೆಗೆ ಶಿವಮೊಗ್ಗಕ್ಕೆ ಬರುತ್ತಿದ್ದರು.
ಸೇತುವೆ ಮೇಲೆ ಜನವೋ ಜನ
ಯುವತಿಯೊಬ್ಬಳು ರೈಲಿನಿಂದ ಹೊಳೆಗೆ ಬಿದ್ದ ವಿಚಾರ ತಿಳಿದು, ಹಲವರು ತುಂಗಾ ನದಿ ಸೇತವೆ ಮೇಲೆ ನಿಂತು ಶೋಧ ಕಾರ್ಯಾಚರಣೆಯನ್ನು ವೀಕ್ಷಿಸುತ್ತಿದ್ದರು. ಇವತ್ತು ಕೂಡ ಶೋಧ ಕಾರ್ಯಾಚರಣೆ ನಡೆಯುವ ಸಾಧ್ಯತೆ ಇದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200