ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA NEWS, 18 NOVEMBER 2024 : ಕರ್ಕಶ ಹಾರನ್ (Horn) ಬಳಸುತ್ತಿದ್ದ ಖಾಸಗಿ ಬಸ್ ಚಾಲಕರಿಗೆ ಸಂಚಾರ ಠಾಣೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಖಾಸಗಿ ಬಸ್ ನಿಲ್ದಾಣದಲ್ಲಿ ದಿಢೀರ್ ದಾಳಿ ನಡೆಸಿದ ಸಂಚಾರ ಪೊಲೀಸರು, ಕರ್ಕಶ ಹಾರನ್ ಹೊಂದಿದ್ದ 15ಕ್ಕೂ ಹೆಚ್ಚು ಬಸ್‌ಗಳಿಗೆ ದಂಡ ವಿಧಿಸಿದ್ದಾರೆ.
ಸಂಚಾರ ಠಾಣೆ ಇನ್ಸ್‌ಪೆಕ್ಟರ್ ಸಂತೋಷ್ ಕುಮಾರ್ ಮಾರ್ಗದರ್ಶನದಲ್ಲಿ ಪಶ್ಚಿಮ ಸಂಚಾರ ಠಾಣೆಯ ಪಿಎಸ್‌ಐ ತಿರುಮಲೇಶ್, ಎಎಸ್‌ಐಗಳಾದ ಕೃಷ್ಣಪ್ಪ, ಮೋಹನ್ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದರು. ಕರ್ಕಶ ಹಾರನ್ ಬಳಕೆ ಮಾಡುತ್ತಿದ್ದ ಬಸ್ಸುಗಳ ಶೋಧ ನಡೆಸಲಾಯಿತು. ಸ್ಥಳದಲ್ಲೇ ಹಾರನ್ ಬಳಸಿ, ದಂಡ ವಿಧಿಸಲಾಯಿತು.
ಇಲ್ಲಿದೆ ವಿಡಿಯೋ
ಇದನ್ನೂ ಓದಿ » ಲಕ್ಷ ಲಕ್ಷ ಮೌಲ್ಯದ ಅಡಿಕೆ ಕದ್ದ ಐವರು ಅರೆಸ್ಟ್, ಏನೇನೆಲ್ಲ ಸಿಕ್ಕಿದೆ?
ಇನ್ಮುಂದೆ ಕರ್ಕಶ ಹಾರನ್ ಬಳಕೆ ಮಾಡುವಂತಿಲ್ಲ ಎಂದು ಬಸ್ ಚಾಲಕರು, ನಿರ್ವಾಹಕರು ಮತ್ತು ಮಾಲೀಕರಿಗೆ ಸಂಚಾರ ಪೊಲೀಸರು ಎಚ್ಚರಿಕೆ ನೀಡಿದರು. ಕರ್ಕಶ ಹಾರನ್ ಬಳಕೆ ಮಾಡಿದ ಬಸ್‌ಗಳಿಗೆ ತಲಾ 500 ರೂ. ದಂಡ ವಿಧಿಸಲಾಗಿದೆ.
Shill Horn
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422