ಸೋಮಿನಕೊಪ್ಪ ಫ್ಲೈ ಓವರ್‌ ಕೆಳಗೆ ಸಾಫ್ಟ್‌ವೇರ್‌ ಇಂಜಿನಿಯರ್‌ಗೆ ಮೇಲೆ ಅಟ್ಯಾಕ್‌, ಆಗಿದ್ದೇನು?

ಶಿವಮೊಗ್ಗ: ಸಾಫ್ಟ್‌ವೇರ್‌ ಇಂಜಿನಿಯರ್‌ (Engineer) ಮೇಲೆ ಸೋಮಿನಕೊಪ್ಪ ಫ್ಲೈಓವರ್‌ ಅಡಿ ಹಲ್ಲೆ ನಡೆಸಲಾಗಿದೆ. ಅವರ ಕಾರಿನ ಗಾಜನ್ನು ಒಡೆಯಲಾಗಿದೆ. ಈ ಸಂಬಂಧ ವಿನೋಬನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನ ಸಾಫ್ಟ್‌ವೇರ್‌ ಕಂಪನಿಯ ಇಂಜಿನಿಯರ್‌ ಲೋಕೇಶ್‌ ಎಂಬುವವರ ಮೇಲೆ ಹಲ್ಲೆಯಾಗಿದೆ. ‌

ಹಿಂಬಾಲಿಸಿ ಬಂದು ಅಟ್ಯಾಕ್‌

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಜಾಹೀರಾತಿನ ಮೇಲೆ ಕ್ಲಿಕ್‌ ಮಾಡಿ

ನಗರದ ಕ್ಲಬ್‌ ಒಂದರಲ್ಲಿ ಐಪಿಎಲ್‌ ಫೈನಲ್‌ ಪಂದ್ಯ ವೀಕ್ಷಿಸಿ ಲೋಕೇಶ್‌ ಮತ್ತು ಅವರ ಸ್ನೇಹಿತ ಕಾರಿನಲ್ಲಿ ವಿನೋಬನಗರದ ಮನೆಗೆ ತೆರಳುತ್ತಿದ್ದರು. ಗೋಪಿ ಸರ್ಕಲ್‌ನಲ್ಲಿ ವಿಜಯೋತ್ಸವ ನಡೆಯುತ್ತಿತ್ತು. ರಸ್ತೆಯಲ್ಲಿ ಯುವಕರ ಇದ್ದಿದ್ದರಿಂದ ಅಲ್ಲಿಂದ ಹಾದು ಹೋಗುವಾಗ ಲೋಕೇಶ್‌ ಅವರು ಚಲಿಸುತ್ತಿದ್ದ ಕಾರು ಹಾರನ್‌ ಹೊಡೆದಿದ್ದರು. ಆಗ ಕೆಲವು ಯುವಕರು ಲೋಕೇಶ್‌ ಮತ್ತು ಅವರ ಸ್ನೇಹಿತನ ಜೊತೆಗೆ ಜಗಳವಾಡಿದ್ದರು ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ » ಆಪರೇಷನ್‌ ಸಿಂಧೂರ, ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಯೋಧನ ಕುಟುಂಬಕ್ಕೆ ಅದ್ಧೂರಿ ಸ್ವಾಗತ, ಹೇಗಿತ್ತು? ಯಾರೆಲ್ಲ ಇದ್ದರು?

ಲೋಕೇಶ್‌ ಅವರ ಕಾರು ಸೋಮಿನಕೊಪ್ಪದ ಫ್ಲೈಓವರ್‌ ಕೆಳಗೆ ತೆರಳುವಾಗ ಇನ್ನೊಂದು ಕಾರಿನಲ್ಲಿ ಹಿಂಬಾಲಿಸಿ ಬಂದ ಯುವಕರು ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಗೊಂಡಿದ್ದ ಲೋಕೇಶ್‌ ನಂಜಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಘಟನೆ ಸಂಬಂಧ ವಿನೋಬನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://chat.whatsapp.com/JPJ0lTQsTKf365Fqu6Q7cd

ಇದನ್ನೂ ಓದಿ » ಭದ್ರಾವತಿ ಸಮೀಪ ರೈಲಿಗೆ ಸಿಲುಕಿ ವ್ಯಕ್ತಿ ಸಾವು, ಪತ್ತೆಯಾಗದ ಗುರುತು

crime name image

Leave a Comment