ಶಿವಮೊಗ್ಗದ ಸಾಫ್ಟ್‌ವೇರ್‌ ಇಂಜಿನಿಯರ್‌ಗೆ 99 ಲಕ್ಷ ರೂ. ಪಂಗನಾಮ, ಮ್ಯಾಟ್ರಿಮೋನಿ ಯುವತಿಯೆ ಕಾರಣ, ಹೇಗದು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 23 SEPTEMBER 2023

SHIMOGA : ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಪರಿಚಯವಾದ ಯುವತಿ ಕಳುಹಿಸಿದ ಲಿಂಕ್‌ ಕ್ಲಿಕ್‌ ಮಾಡಿ ಶಿವಮೊಗ್ಗ ಜಿಲ್ಲೆಯ ಸಾಫ್ಟ್‌ವೇರ್‌ ಇಂಜಿನಿಯರ್‌ (Software Engineer) ಒಬ್ಬರು 99 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ.

ಹೇಗಾಯ್ತು ಘಟನೆ?

ಸಾಫ್ಟ್‌ವೇರ್‌ ಇಂಜಿನಿಯರ್‌ (ಹೆಸರು ಗೌಪ್ಯ) ಅವರಿಗೆ ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಸ್ವಪ್ನಾ ಎಂಬಾಕೆಯ ಪರಿಚಯವಾಗಿದೆ. ಇಬ್ಬರು ವಾಟ್ಸಪ್‌ ಮೂಲಕ ಚಾಟಿಂಟ್‌ ಮಾಡಿದ್ದಾರೆ. ಸ್ವಪ್ನಾ ತಾನು ಲಂಡನ್‌ನಲ್ಲಿ ವಾಸವಾಗಿದ್ದು, ತನ್ನ ಚಿಕ್ಕಪ್ಪ ವಾಲ್‌ಸ್ಟ್ರೀಟ್‌ನಲ್ಲಿ ಮಾರ್ಕೆಟ್‌ ಅನಾಲಿಸ್ಟ್‌ ಎಂದು ತಿಳಿಸಿದ್ದಳು. ಚಿಕ್ಕಪ್ಪನ ಮಾರ್ಗದರ್ಶನದಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಹಣ ಸಂಪಾದಿಸಬಹುದು ಎಂದು ನಂಬಿಸಿದ್ದಳು.

ಲಿಂಕ್‌ ಕಳುಹಿಸಿದ ಸ್ವಪ್ನಾ

ಹೆಚ್ಚು ಸಂಪಾದನೆ ಆಸೆ ಮೂಡಿಸಿ ಸಾಫ್ಟ್‌ವೇರ್‌ ಇಂಜಿನಿಯರ್‌ಗೆ (Software Engineer) ಒಂದು ಲಿಂಕ್‌ ಕಳುಹಿಸಿದ್ದಳು. ಅದರಲ್ಲಿ ಹಣ ಹೂಡಿಕೆ ಮಾಡುವಂತೆ ತಿಳಿಸಿ, ಕಸ್ಟಮರ್‌ ಸಪೋರ್ಟ್‌ ನಂಬರ್‌ ಎಂದು ದೂರವಾಣಿ ಸಂಖ್ಯೆಯನ್ನು ನೀಡಿದ್ದಳು. ಕಸ್ಟಮರ್‌ ಸಪೋರ್ಟ್‌ ನಂಬರ್‌ಗೆ ವಿಚಾರಿಸಿದಾಗ ಅಪರಿಚಿತ ವ್ಯಕ್ತಿಯು ಹಣ ಹೂಡಿಕೆ ಕುರಿತು ತಿಳಿಸಿದ್ದ. ಅದರಂತೆ ಸಾಫ್ಟ್‌ವೇರ್‌ ಇಂಜಿನಿಯರ್‌, ವಿವಿಧ ಬ್ಯಾಂಕ್‌ ಖಾತೆಯಿಂದ 99,03,000 ರೂ. ಹಣ ಹೂಡಿಕೆ ಮಾಡಿ ವಂಚನೆಗೊಳಗಾಗಿದ್ದಾರೆ. ಈ ಸಂಬಂಧ ಶಿವಮೊಗ್ಗದ ಸಿಇಎನ್‌ ಠಾಣೆಯಲ್ಲಿದ ದೂರು ನೀಡಿದ್ದಾರೆ.

ಇದನ್ನೂ ಓದಿ – ಶಿವಮೊಗ್ಗಕ್ಕೆ ಪ್ರಧಾನ ಮಂತ್ರಿ ಇ-ಬಸ್‌, ಎಲ್ಲ ಬಡಾವಣೆಗು ಕನೆಕ್ಷನ್‌, ಏನಿದು ಯೋಜನೆ?

ಹೂಡಿಕೆ ಮುನ್ನ ಎಚ್ಚರ

ಗುರುತು ಪರಿಚಯ ಇಲ್ಲದವರ ಜೊತೆಗಿನ ವ್ಯವಹಾರ, ಸಮಸ್ಯೆ ಸೃಷ್ಟಿಸುತ್ತದೆ. ಆನ್‌ಲೈನ್‌ನಲ್ಲಿ ಹಣ ಹೂಡಿಕೆ ಮತ್ತು ವರ್ಗಾವಣೆಗು ಮುನ್ನ ಹಲವು ಬಾರಿ ಯೋಚಿಸಬೇಕಿದೆ. ಇಲ್ಲವಾದಲ್ಲಿ ವಂಚನೆಗೊಳಗಾಗುವುದು ನಿಶ್ಚಿತ. ಹೂಡಿಕೆ, ಉದ್ಯೋಗದ ನೆಪದಲ್ಲಿ ಆನ್‌ಲೈನ್‌ ಮೂಲಕ ಹಲವರಿಂದ ಹಣ ಹಾಕಿಸಿಕೊಂಡು ವಂಚನೆ ಮಾಡುವ ದೊಡ್ಡ ಜಾಲವೆ ಇದೆ. ಅಮಾಯಕರನ್ನು ಗುರಿಯಾಗಿಸಿಕೊಂಡು ಆಸೆ ಮೂಡಿಸಿ ದೊಡ್ಡ ಮೊತ್ತವನ್ನು ವಂಚಿಸುತ್ತಿದ್ದಾರೆ. ಇಂತಹ ಸಂದರ್ಭ ತಕ್ಷಣ ಶಿವಮೊಗ್ಗದ ಸಿಇಎನ್‌ ಠಾಣೆಯನ್ನು ಸಂಪರ್ಕಿಸಿ ನೆರವು ಪಡೆಯಬಹುದಾಗಿದೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಜನತಾ ದರ್ಶನಕ್ಕೆ ದಿನಾಂಕ, ಸ್ಥಳ ನಿಗದಿ, ಸಮಸ್ಯೆ ಹೇಳಿಕೊಳ್ಳಲು ಜನರಿಗಿದೆ ಮುಕ್ತ ಅವಕಾಶ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : September 23, 2023

ಇವತ್ತು ಸರಕು ಅಡಿಕೆ ಎಷ್ಟಿದೆ? ರಾಶಿ, ಗೊರಬಲು ಧಾರಣೆ ಹೇಗಿದೆ? – 23 ಮಾರ್ಚ್‌ 2026

ಇವತ್ತು ಸರಕು ಅಡಿಕೆ ಎಷ್ಟಿದೆ? ರಾಶಿ, ಗೊರಬಲು ಧಾರಣೆ ಹೇಗಿದೆ? – 23 ಮಾರ್ಚ್‌ 2026

ಗಾಂಧಿ ಬಜಾರ್‌ ಉದ್ಯಮಿಗೆ ಬೆದರಿಕೆ ಕರೆ, ₹5,00,000 ಹಣಕ್ಕೆ ಡಿಮಾಂಡ್‌, ಏನಿದು ಕೇಸ್‌?

ಗಾಂಧಿ ಬಜಾರ್‌ ಉದ್ಯಮಿಗೆ ಬೆದರಿಕೆ ಕರೆ, ₹5,00,000 ಹಣಕ್ಕೆ ಡಿಮಾಂಡ್‌, ಏನಿದು ಕೇಸ್‌?

ಸೋಮಿನಕೊಪ್ಪದಲ್ಲಿ ಕಣ್ಮನ ಸೆಳೆದ ಜಾನಪದ ಸಮ್ಮೇಳನ, ಹೇಗಿತ್ತು? ಯಾರೆಲ್ಲ ಭಾಗವಹಿಸಿದ್ದರು?

ಸೋಮಿನಕೊಪ್ಪದಲ್ಲಿ ಕಣ್ಮನ ಸೆಳೆದ ಜಾನಪದ ಸಮ್ಮೇಳನ, ಹೇಗಿತ್ತು? ಯಾರೆಲ್ಲ ಭಾಗವಹಿಸಿದ್ದರು?

ಅಧಿಕಾರಿಗಳು, ಪೊಲೀಸರ ಜಂಟಿ ಕಾರ್ಯಾಚರಣೆ, ಶಿವಮೊಗ್ಗದ ಮಂಡ್ಲಿಯಲ್ಲಿ ದಾಳಿ, ದಾಖಲಾಯ್ತು ಕೇಸ್‌

ಅಧಿಕಾರಿಗಳು, ಪೊಲೀಸರ ಜಂಟಿ ಕಾರ್ಯಾಚರಣೆ, ಶಿವಮೊಗ್ಗದ ಮಂಡ್ಲಿಯಲ್ಲಿ ದಾಳಿ, ದಾಖಲಾಯ್ತು ಕೇಸ್‌

ಶಿವಮೊಗ್ಗ ಸಿಟಿಯಲ್ಲಿ ಶೆಟ್ಟರ ಸಂತೆ, ಶ್ರೀನಿವಾಸ ಕಲ್ಯಾಣೋತ್ಸವ, ಯಾವಾಗ? ಎಲ್ಲಿ ನಡೆಯಲಿದೆ?

ಶಿವಮೊಗ್ಗ ಸಿಟಿಯಲ್ಲಿ ಶೆಟ್ಟರ ಸಂತೆ, ಶ್ರೀನಿವಾಸ ಕಲ್ಯಾಣೋತ್ಸವ, ಯಾವಾಗ? ಎಲ್ಲಿ ನಡೆಯಲಿದೆ?

ರಾತ್ರಿ 11:45ಕ್ಕೆ ಅಮೀರ್‌ ಅಹಮದ್‌ ಸರ್ಕಲ್‌ಗೆ ಬಂದ ವ್ಯಕ್ತಿಗೆ ಕಾದಿತ್ತು ಆಘಾತ, ಆಗಿದ್ದೇನು?

ರಾತ್ರಿ 11:45ಕ್ಕೆ ಅಮೀರ್‌ ಅಹಮದ್‌ ಸರ್ಕಲ್‌ಗೆ ಬಂದ ವ್ಯಕ್ತಿಗೆ ಕಾದಿತ್ತು ಆಘಾತ, ಆಗಿದ್ದೇನು?

ಕೂಡ್ಲಿಯಲ್ಲಿ ಸಾವಿರ ಸಾವಿರ ಜನರಿಂದ ಪುಣ್ಯ ಸ್ನಾನ, ಹೇಗಿದೆ ಈ ಬಾರಿ ಜಾತ್ರೆ?

ಕೂಡ್ಲಿಯಲ್ಲಿ ಸಾವಿರ ಸಾವಿರ ಜನರಿಂದ ಪುಣ್ಯ ಸ್ನಾನ, ಹೇಗಿದೆ ಈ ಬಾರಿ ಜಾತ್ರೆ?

ಶಿವಮೊಗ್ಗದಲ್ಲಿ ಯುಗಾದಿ ಚಂದ್ರ ದರ್ಶನ, ಜನರಿಂದ ಪೂಜೆ, ಶುಭಾಶಯ ವಿನಿಮಯ

ಶಿವಮೊಗ್ಗದಲ್ಲಿ ಯುಗಾದಿ ಚಂದ್ರ ದರ್ಶನ, ಜನರಿಂದ ಪೂಜೆ, ಶುಭಾಶಯ ವಿನಿಮಯ

ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್‌ | 20 ಮಾರ್ಚ್‌ 2026 | ಅಡಿಕೆ ಧಾರಣೆ

ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್‌ | 20 ಮಾರ್ಚ್‌ 2026 | ಅಡಿಕೆ ಧಾರಣೆ

ಕಾರು, ಬೈಕ್‌ ಡಿಕ್ಕಿ, ಯುವಕ ದಾರುಣ ಸಾವು, ಹೇಗಾಯ್ತು ಘಟನೆ?

ಕಾರು, ಬೈಕ್‌ ಡಿಕ್ಕಿ, ಯುವಕ ದಾರುಣ ಸಾವು, ಹೇಗಾಯ್ತು ಘಟನೆ?

Leave a Comment