ಶಿವಮೊಗ್ಗ ಲೈವ್
SORABA NEWS, 17 NOVEMBER 2024 : ಪಟ್ಟಣದ ಚಿಕ್ಕಪೇಟೆಯಲ್ಲಿ ಈಚೆಗೆ ನಡೆದ ಜಾನುವಾರು ಕಳವು ಪ್ರಕರಣ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ (Arrest). (ಈ ಸುದ್ದಿಯನ್ನು ಇನ್ನು 28 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಶಿವಮೊಗ್ಗದ ಮೊಹಮ್ಮದ್ ಶಾಹೀದ್ ಮತ್ತು ಮೊಹಮ್ಮದ್ ಸಲ್ಮಾನ್ ಬಂಧಿತರು. ಇವರ ವಿರುದ್ಧ ಸಾಗರ ಪೊಲೀಸ್ ಠಾಣೆಯಲ್ಲಿಯೂ ಜಾನುವಾರು ಕಳವು ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚಿಕ್ಕಪೇಟೆಯಲ್ಲಿ ಜಾನುವಾರನ್ನು ಕಳ್ಳರು ಹೊತ್ತೊಯ್ಯುವ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಬಗ್ಗೆ ಜಾನುವಾರು ಮಾಲೀಕ ಸತೀಶ್ ದೂರು ದಾಖಲಿಸಿದ್ದರು. ಸೊರಬ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ » ಖಾಸಗಿ ಬಸ್ ನಿಲ್ದಾಣ, ಪಾರ್ಸಲ್ ಕೊಟ್ಟು ಹಿಂತಿರುಗಿದ ಯುವಕನಿಗೆ ಕಾದಿತ್ತು ಶಾಕ್
arrest
