ಶಿವಮೊಗ್ಗದ ಲೈವ್.ಕಾಂ | SHIMOGA NEWS | 2 ಫೆಬ್ರವರಿ 2022
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಬಾರ್ ಒಂದರಲ್ಲಿ ಮದ್ಯ ಸೇವಿಸಿದ ಯುವಕರು ಇತರೆ ಗ್ರಾಹಕರ ಜೊತೆಗೆ ಜಗಳವಾಡಿದ್ದಾರೆ. ಬಾರ್ ಮುಂದೆ ನಿಂತು ಕಲ್ಲು ತೂರಾಟ ಮಾಡಿದ್ದಾರೆ. ಇದನ್ನು ಪ್ರಶ್ನಿಸಲು ಹೋದ ಬಾರ್ ಸಿಬ್ಬಂದಿಯತ್ತಲೂ ಕಲ್ಲು ತೂರಿ, ಹೊಡೆದಿದ್ದಾರೆ.
ಸೋಮಿನಕೊಪ್ಪದ ಬ್ಲೂ ಸ್ಟಾರ್ ಬಾರ್ ಅಂಡ್ ರೆಸ್ಟೋರೆಂಟ್’ನಲ್ಲಿ ಘಟನೆ ಸಂಭವಿಸಿದೆ. ಈ ಸಂಬಂಧ ಬಾರ್ ಮಾಲೀಕರು ಯುವಕರ ವಿರುದ್ಧ ದೂರು ನೀಡಿದ್ದಾರೆ.
ಏನಿದು ಬಾರ್ ಗಲಾಟೆ ಕೇಸ್?
ಜನವರಿ 26ರಂದು ಅನಿಲ್ ಎಂಬಾತ ಬಾರ್ ಮುಂದೆ ಬಂದು ಗಲಾಟೆ ಮಾಡಿದ್ದಾನೆ. ಗ್ರಾಹಕರ ಜೊತೆ ಕ್ಯಾತೆ ತೆಗೆದಿದ್ದಾನೆ. ಬಾರ್ ಮಾಲೀಕ ವೆಂಕಟೇಶ್ ಶೆಟ್ಟಿ ಅವರಿಗೆ ಚಾಕು ತೋರಿಸಿ ಜೀವ ಬೆದರಿಕೆ ಒಡ್ಡಿದ್ದ ಎಂದು ಆರೋಪಿಸಲಾಗಿದೆ. ಪೊಲೀಸರಿಗೆ ವಿಚಾರ ತಿಳಿದು ಅನಿಲನನ್ನು ಠಾಣೆ ಎಳೆದೊಯ್ದಿದ್ದರು.
ಜನವರಿ 30ರಂದು ಅನಿಲ, ಮುನ್ನಾ ಮತ್ತಿತರೆ ಯುವಕರನ್ನು ಇದೆ ಬಾರ್’ಗೆ ಕರೆದುಕೊಂಡು ಬಂದಿದ್ದ. ಎಲ್ಲರೂ ಮದ್ಯ ಸೇವಿಸಿ ಬಾರ್’ನಲ್ಲಿ ಗಲಾಟೆ ಆರಂಭಿಸಿದ್ದಾರೆ. ಗ್ರಾಹಕರ ಜೊತೆಗೂ ಜಗಳ ಮಾಡಿದ್ದಾರೆ. ಬಳಿಕ ಬರ್ ಮುಂದೆ ನಿಂತು ದಾರಿಯಲ್ಲಿ ಹೋಗಿ ಬರುವವರು ಮತ್ತು ಬಾರ್’ನಿಂದ ಹೊರಗೆ ಹೋಗುತ್ತಿದ್ದ ಗ್ರಾಹಕರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನು ಪ್ರಶ್ನಿಸಲು ಹೋದ ಬಾರ್ ಸಿಬ್ಬಂದಿ ಮೇಲೂ ಕಲ್ಲು ತೂರಿದ್ದಾರೆ. ಅಲ್ಲದೆ ಕೆಲವರ ಮೇಲೆ ಕೈ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Shimoga Police | About Shivamogga Live
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು






