ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ
ಪುರದಾಳು ರಸ್ತೆಯಲ್ಲಿ ಸ್ನೇಹಿತೆಯರಿಗಾಗಿ ಕಾರು ನಿಲ್ಲಿಸಿ ಕಾಯುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬರ ಮೇಲೆ ದುಷ್ಕರ್ಮಿಯೊಬ್ಬ ದಾಳಿ ನಡೆಸಿ, ಕುತ್ತಿಗೆಯಲ್ಲಿದ್ದ ಬಂಗಾರದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದಾನೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಕಾಲೇಜು ವಿದ್ಯಾರ್ಥಿನಿ ತನ್ನ ಸ್ನೇಹಿತೆಯರೊಂದಿಗೆ (ಹೆಸರು ಗೌಪ್ಯ) ಪುರದಾಳು ಡ್ಯಾಂ ಕಡೆಗೆ ತೆರಳುತ್ತಿದ್ದರು. ವಿದ್ಯಾರ್ಥಿನಿ ತಮ್ಮ ಕಾರಿನಲ್ಲಿ ತೆರಳಿದ್ದರು. ಸ್ನೇಹಿತೆಯರು ಸ್ಕೂಟಿಯಲ್ಲಿ ಹಿಂದೆ ಬರುತ್ತಿದ್ದರು. ಅವರು ಬರುವವರೆಗೆ ಕಾಯಲು ವಿದ್ಯಾರ್ಥಿನಿ ರಸ್ತೆ ಬದಿಯಲ್ಲಿ ಕಾರನ್ನು ನಿಲ್ಲಿಸಿದ್ದರು.

ಕೋಲಿನಿಂದ ಗ್ಲಾಸ್‌ಗೆ ಹೊಡೆದ
ರಸ್ತೆ ಬದಿ ಕಾರು ನಿಲ್ಲಿಸಿದ್ದ ಸಂದರ್ಭ ಅಪರಿಚಿತ ವ್ಯಕ್ತಿಯೊಬ್ಬ ಕಾರಿನ ಡ್ರೈವರ್ ಸೈಡ್ ಗ್ಲಾಸ್ ಅನ್ನು ಕೋಲಿನಿಂದ ಹೊಡೆದು ಒಡೆದಿದ್ದಾನೆ. ಅಲ್ಲದೆ ಅದೇ ಕೋಲಿನಿಂದ ವಿದ್ಯಾರ್ಥಿನಿಗೆ ಬೆದರಿಕೆ ಹಾಕಿ, ಅವರ ಕುತ್ತಿಗೆಯಲ್ಲಿದ್ದ ಸುಮಾರು 15 ಗ್ರಾಂ ತೂಕದ ₹1,40,000 ಮೌಲ್ಯದ ಬಂಗಾರದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.