ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಲೇಔಟ್ (Layout) ಒಂದರಲ್ಲಿ ಕಳೆದ ರಾತ್ರಿ ಆರು ದುಷ್ಕರ್ಮಿಗಳು ಶಸ್ತ್ರಾಸ್ತ್ರ ಹಿಡಿದು ಹೊಂಚು ಹಾಕುವಂತೆ ಓಡಾಡಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಬಡಾವಣೆ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.
ಇದನ್ನೂ ಓದಿ » ಮಲೆನಾಡು ಭಾಗದಲ್ಲಿ ಇದೇ ಮೊದಲು, ನಂಜಪ್ಪ ಆಸ್ಪತ್ರೆಯಲ್ಲಿ ಅಪರೂಪದ ಆಪರೇಷನ್, ಒಂದೇ ದಿನಕ್ಕೆ ರೋಗಿ ಗುಣ
ರಾತ್ರಿ 1 ಗಂಟೆ ಹೊತ್ತಿಗೆ ಆರು ಮಂದಿ ದುಷ್ಕರ್ಮಿಗಳು ಮನೆಗಳತ್ತ ಓಡಾಡಿದ್ದಾರೆ. ಶಿವಮೊಗ್ಗದ ಒಡ್ಡಿನಕೊಪ್ಪದ ಸಮೀಪದ ಪುಟ್ಟಪ್ಪ ಕ್ಯಾಂಪ್ ಬಡಾವಣೆಯಲ್ಲಿ ಘಟನೆ ಸಂಭವಿಸಿದೆ.
ಸಿಸಿಟಿವಿಯಲ್ಲಿ ಏನೇನಿದೆ?

ಸುಮಾರು ಎರಡೂವರೆ ನಿಮಿಷದ ಸಿಸಿಟಿವಿ ದೃಶ ಲಭ್ಯವಾಗಿದೆ. ಆರು ದುಷ್ಕರ್ಮಿಗಳು ಸಾಲಾಗಿ ಬಡಾವಣೆ ರಸ್ತೆಗಳಲ್ಲಿ ನಡೆದು ಸಾಗುವುದು ಸೆರೆಯಾಗಿದೆ. ದುಷ್ಕರ್ಮಿಗಳು ಜೀನ್ಸ್ ಪ್ಯಾಂಟ್, ಬನಿಯನ್ ಮಾತ್ರ ಧರಿಸಿದ್ದಾರೆ. ಸೊಂಟದಲ್ಲಿ ಶಸ್ತ್ರಾಸ್ತ್ರ ಇಟ್ಟುಕೊಂಡಿದ್ದರು. ಗುರುತು ಮರೆ ಮಾಡಲು ಎಲ್ಲರು ಮುಖಕ್ಕೆ ಬಟ್ಟೆ ಕೊಟ್ಟಿಕೊಂಡಿದ್ದರು. ಕೈಯಲ್ಲಿ ಟಾರ್ಚ್ ಇದೆ. ಒಬ್ಬಾತ ಕೈಗೆ ಗ್ಲೌಸ್ ಧರಿಸಿದ್ದಾನೆ. ಮತ್ತೊಬ್ಬ ಬ್ಯಾಗ್ ಹಾಕಿದ್ದಾನೆ.

ಆರು ಮಂದಿ ಪುಟ್ಟಪ್ಪ ಕ್ಯಾಂಪ್ ಬಡಾವಣೆಯ ಎಲ್ಲ ರಸ್ತೆಗಳಲ್ಲಿಯು ನಡೆದು ಹೋಗಿದ್ದಾರೆ. ಈ ವಿಷಯ ಬಹಿರಂಗಗೊಳ್ಳುತ್ತಿದ್ದಂತೆ ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ. ತುಂಗಾ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಸ್ಥಳೀಯರು ಪೊಲೀಸರಿಗು ಮಾಹಿತಿ ನೀಡಿದ್ದಾರೆ.
LATEST NEWS
- ಮೇ 1ರಿಂದ ಶಿವಮೊಗ್ಗ – ಬೆಂಗಳೂರು ಇಂಡಿಗೋ ವಿಮಾನ ರದ್ದು, ಕಾರಣವೇನು?

- ದುರ್ಗಿಗುಡಿಯಲ್ಲಿ ಅಂಗಡಿಯೊಳಗೆ ಹೋಗಿ ಬಂದ ಮಾಲೀಕನಿಗೆ ಆಘಾತ, ದಾಖಲಾಯ್ತು ಪ್ರಕರಣ, ಆಗಿದ್ದೇನು?

- ಶಿವಮೊಗ್ಗ JNNCEಯಲ್ಲಿ ಹ್ಯಾಕ್‌ಫೆಸ್ಟ್, ತಮಿಳುನಾಡು, ಮೈಸೂರು, ದಾವಣಗೆರೆ ಕಾಲೇಜುಗಳಿಗೆ ಬಹುಮಾನ

- ಬಟ್ಟೆಯೊಳಗೆ ಚೇಳು ನುಗ್ಗಿದೆ ಅಂತಾ ಗೆಳತಿ ಮನೆಗೆ ಹೋದ ಮಹಿಳೆ, ಆಮೇಲೆ ಗೆಳತಿಗೆ ಕಾದಿತ್ತು ಶಾಕ್

- ಸೋಮಿನಕೊಪ್ಪದಲ್ಲಿ ಜಾನಪದ ಸಮ್ಮೇಳನ, ಅಹೋರಾತ್ರಿ ಕಾರ್ಯಕ್ರಮ, ಏನೇನೆಲ್ಲ ಇರಲಿದೆ?

About The Editor
ನಿತಿನ್ ಆರ್.ಕೈದೊಟ್ಲು















