ಮಲೆನಾಡು ಭಾಗದಲ್ಲಿ ಇದೇ ಮೊದಲು, ನಂಜಪ್ಪ ಆಸ್ಪತ್ರೆಯಲ್ಲಿ ಅಪರೂಪದ ಆಪರೇಷನ್‌, ಒಂದೇ ದಿನಕ್ಕೆ ರೋಗಿ ಗುಣ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ: ತಲೆನೋವಿನಿಂದ ಬಳಲುತ್ತಿದ್ದ 21 ವರ್ಷದ ಯುವತಿಯನ್ನು ಪರೀಕ್ಷಿಸಿ ಎಂಆರ್‌ಐ ಸ್ಕ್ಯಾನ್ ಮಾಡಿದಾಗ ಮಿದುಳಿನ ಎಡಭಾಗದ ಪ್ರಮುಖ ರಕ್ತನಾಳದಲ್ಲಿ ಬಲೂನ್ ತರಹದ ಊತ (Aneurysm) ಕಂಡುಬಂದಿತ್ತು. ನಂಜಪ್ಪ ಲೈಫ್‌ ಕೇರ್‌ ಆಸ್ಪತ್ರೆಯಲ್ಲಿ ಸಣ್ಣ ರಂಧ್ರದ ಮೂಲಕ, ಅಪರೂಪದ ಕಾರ್ಯವಿಧಾನದಲ್ಲಿ ಅದನ್ನು ತೆಗೆದು ಆಕೆಯ ಜೀವ ಉಳಿಸಲಾಗಿದೆ. ಮಲೆನಾಡು ಭಾಗದಲ್ಲಿ ಇದೇ ಮೊದಲ ಬಾರಿಗೆ ಇಂತಹ ಶಸ್ತ್ರಚಿಕಿತ್ಸೆ ನಡೆದಿದೆ. ಸುದ್ದಿಯ ಮುಂದಿನ 12 ಪ್ಯಾರಾಗಳು ಕೆಳಗಿವೆ.

ಇದನ್ನೂ ಓದಿ » ಗೂಗಲ್‌ ಪೇ, ಫೋನ್‌ ಪೇಗೆ ನೊಟೀಸ್‌, ಶಿವಮೊಗ್ಗದ ವ್ಯಾಪಾರಿಗಳಿಗೆ ಢವಢವ, ಸದ್ಯ ಹೇಗಿದೆ ಪರಿಸ್ಥಿತಿ?

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಂಜಪ್ಪ ಲೈಫ್‌ ಕೇರ್‌ ಆಸ್ಪತ್ರೆಯ ಇಂಟರ್‌ವೆನ್ಷನಲ್‌ ರೇಡಿಯಾಲಜಿಸ್ಟ್‌ ಡಾ. ನಿಶಿತಾ, ವೈದ್ಯಕೀಯ ಪರಿಭಾಷೆಯಲ್ಲಿ ‘ಡಿಸ್ಸೆಕ್ಟಿಂಗ್ ಅನ್ಯೂರಿಸಮ್’ ಎಂದು ಕರೆಯಲಾಗುವ ಈ ರೀತಿಯ ಊತವು ಗಂಭೀರ ಸಮಸ್ಯೆ ಉಂಟುಮಾಡುತ್ತದೆ. ಇದು ಯುವತಿಯ ಮೆದುಳಿನಲ್ಲಿ 9 ಮಿಲಿ ಮೀಟರ್‌ನಷ್ಟು ದೊಡ್ಡ ಗಾತ್ರದಲ್ಲಿ ಬೆಳೆದು ಅಪಾಯ ತಂದೊಡ್ಡುವ ಸಾಧ್ಯತೆ ಇತ್ತು. ಬಲೂನ್ ರೀತಿ ಊದಿರುವ ಈ ಊತವನ್ನು ಸರಿಪಡಿಸದಿದ್ದರೆ ಮಿದುಳಿನಲ್ಲಿ ತೀವ್ರ ರಕ್ತಸ್ರಾವವಾಗಿ ಜೀವಕ್ಕೆ ಎರವಾಗುತ್ತಿತ್ತು. ಇಲ್ಲವೇ ಶಾಶ್ವತ ಅಂಗವೈಕಲ್ಯಕ್ಕೆ ಕಾರಣ ಆಗುತ್ತಿತ್ತು ಎಂದ ತಿಳಿಸಿದರು.

Nanjappa-Hospital-dissecting-aneurysm-operation.

ಹೇಗೆ ನಡೆಯಿತು ಆಪರೇಷನ್‌?

#f1f1f1 - POINT 1ಎಂಆರ್‌ಐ ಸ್ಕ್ಯಾನ್ ರಿಪೋರ್ಟ್ ನೋಡಿದ ಬಳಿಕ ಈ ಸಮಸ್ಯೆಗೆ ತಕ್ಷಣದ ಚಿಕಿತ್ಸೆ ಅಗತ್ಯವೆಂದು ಮನದಟ್ಟಾಯಿತು. ಆದರೆ ರಕ್ತನಾಳದಲ್ಲಿರುವ ಊತದ ಆಕಾರ ಮತ್ತು ಸ್ಥಳದಿಂದಾಗಿ ತೆರೆದ ಮಿದುಳಿನ ಶಸ್ತ್ರಚಿಕಿತ್ಸೆ (ಓಪನ್ ನ್ಯೂರೋಸರ್ಜರಿ) ಸರಿಯಾದ ಆಯ್ಕೆಯಲ್ಲ ಎಂದು ತೀರ್ಮಾನಿಸಿಲಾಯಿತು.

#f1f1f1 - POINT 2‘ಫ್ಲೋ ಡ್ರೈವರ್ಟರ್ ಬಳಸಿ ಪ್ರಮುಖ ರಕ್ತನಾಳದ ಪುನರ್‌ ನಿರ್ಮಾಣ’ ಎಂಬ ವಿಶೇಷ, ಸುಧಾರಿತ ವಿಧಾನದಲ್ಲಿ ಶಸ್ತ್ರಚಿಕಿತ್ಸೆ ನಡೆಲಸಲು ನಿರ್ಧರಿಸಲಾಯಿತು.

Nanjappa-Hospital-dissecting-aneurysm-operation.

#f1f1f1 - POINT 3ಸುಸಜ್ಜಿತ, ಉನ್ನತ ಮತ್ತು ಆಧುನಿಕ ತಂತ್ರಜ್ಞಾನ ಒಳಗೊಂಡ ಅನುಭವಿ ನ್ಯೂರೊ ತಜ್ಞರನ್ನು ಹೊಂದಿರುವ ಆಸ್ಪತ್ರೆಯಲ್ಲಿ ಮಾತ್ರ ಇಂತಹ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ.

#f1f1f1 - POINT 4‘ಫ್ಲೋ ಡ್ರೈವರ್ಟರ್’ ಎಂಬುದು ಒಂದು ಸಣ್ಣ, ಮೃದು ಜಾಲರಿಯ (ಮೆಶ್) ಕೊಳವೆ (ಅತ್ಯಂತ ಸೂಕ್ಷ್ಮವಾದ ಜಾಲದಂತೆ). ಇದನ್ನು ಮುಖ್ಯ ರಕ್ತನಾಳದೊಳಗೆ ಅಂದರೆ ಊತವಿರುವ ಜಾಗದ ಪಕ್ಕದಲ್ಲಿ ಇರಿಸಲಾಗುತ್ತದೆ.

#f1f1f1 - POINT 5ಊತದ ಕಡೆಗೆ ಸಂಚರಿಸುವ ರಕ್ತವನ್ನು ತಡೆದು ಬೇರೆ ರಕ್ತನಾಳಕ್ಕೆ ಸಂಚರಿಸಲು ಅನುವು ಮಾಡಿಕೊಡುತ್ತದೆ. ಇದರಿಂದಾಗಿ ಊತವಿರುವ ರಕ್ತನಾಳದ ಮೇಲಿನ ಒತ್ತಡ ಕಡಿಮೆ ಆಗುತ್ತದೆ.

#f1f1f1 - POINT 6ಇದು ಊತವಿರುವ ರಕ್ತನಾಳಕ್ಕೆ ರಕ್ತ ಸಂಚರಿಸುವುದನ್ನು ನಿಲ್ಲಿಸಿ, ಅದು ನೈಸರ್ಗಿಕವಾಗಿ ಗುಣವಾಗಲು ಸಹಾಯ ಮಾಡಿದೆ.

ಮಿದುಳನ್ನು ಓಪನ್‌ ಮಾಡದೆ, ದೊಡ್ಡ ಶಸ್ತ್ರಚಿಕಿತ್ಸೆ ಇಲ್ಲದೆ, ಸಣ್ಣ ಗಾತ್ರದ ಪಿನ್‌ ಹೋಲ್‌ ಸರ್ಜರಿ ನಡೆಸಲಾಯಿತು. ಯುವತಿಯ ತೊಡೆ ಭಾಗದಲ್ಲಿ ರಕ್ತನಾಳದ ಮೂಲಕ ಸೂಜಿಯನ್ನು ಹಾಕಿ, ಶಸ್ತ್ರಚಿಕಿತ್ಸೆ ಮಾಡಿದ್ದೇವೆ. ಇನ್ನು, ಶಸ್ತ್ರಚಿಕಿತ್ಸೆಯಾದ ಮರುದಿನವೆ ಯುವತಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾಳೆ.ಡಾ.ನಿಶಿತಾ, ಇಂಟರ್‌ವೆನ್ಷನಲ್‌ ರೇಡಿಯಾಲಜಿಸ್ಟ್‌

June-2025-Report-Shivamogga-Live-New-New.

ಮಲೆನಾಡು ಭಾಗದಲ್ಲಿ ಇದೇ ಮೊದಲು

ಪಿನ್‌ ಹೋಲ್‌ ಮೂಲಕ ಸರ್ಜರಿ ಮಾಡುವ ಈ ವಿಧಾನ ಅತ್ಯಂತ ಅಪರೂಪದ್ದು. ಬೆಂಗಳೂರು, ಬೆಳಗಾವಿಯ ಕೆಲವು ಆಸ್ಪತ್ರೆಗಳು ಹೊರತು ಇನ್ನೆಲ್ಲು ಇಂತಹ ಶಸ್ತ್ರಚಿಕಿತ್ಸೆ ಆಗಿಲ್ಲ. ಮಲೆನಾಡು ಇದೇ ಮೊದಲ ಬಾರಿ ನಂಜಪ್ಪ ಲೈಫ್‌ ಕೇರ್‌ ಆಸ್ಪತ್ರೆಯಲ್ಲಿ ಈ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಡಾ. ನಿಶಿತಾ ತಿಳಿಸಿದರು.

Nanjappa-Hospital-dissecting-aneurysm-operation.

ಸುದ್ದಿಗೋಷ್ಠಿಯಲ್ಲಿ ಅರವಳಿಕೆ ಮತ್ತು ನೋವು ಉಪಶಮನ ಆರೈಕೆ ತಜ್ಞ ಡಾ.ಪ್ರವೀಣ್‌ ಕುಮಾರ್‌.ಕೆ.ಆರ್‌, ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತ್ರಿವೇಣಿ ಶೆಟ್ಟಿ ಇದ್ದರು.

Nanjappa-Hospital-dissecting-aneurysm-operation.

Leave a Comment