ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | HOSANGARA NEWS | 13 ಡಿಸೆಂಬರ್ 2021
ಅಡಕೆ ತುಂಬಿದ್ದ ಚೀಲ ಸಾಗಿಸುವಾಗ ಉಕ್ಕಡ ಮಗುಚಿ ಶರಾವತಿ ನದಿಯಲ್ಲಿ ಮುಳುಗಿ, ಇಬ್ಬರ ಪೈಕಿ ಒಬ್ಬ ನೀರು ಪಾಲಾಗಿದ್ದಾರೆ. ಹೊಸನಗರ ತಾಲೂಕು ನಿಟ್ಟೂರು ಸಮೀಪದ ಕೋಸ್ನಾಡಿ ಬಳಿ ಘಟನೆ ಸಂಭವಿಸಿದೆ.
ನಿಟ್ಟೂರಿನ ಮಾವಿನಗುಡ್ಡೆಯ ಸ್ವಾಮಿ ಮತ್ತು ಚಂಗೊಳ್ಳಿ ನಾರಾಯಣ ಅವರು ಭಾನುವಾರ ಮಧ್ಯಾಹ್ನ ಅಡಕೆ ಚೀಲಗಳನ್ನು ಉಕ್ಕಡಕ್ಕೆ ತುಂಬಿಕೊಂಡು ಹೊಳೆ ದಾಟುತ್ತಿದ್ದರು. ಈ ಸಂದರ್ಭ ಉಕ್ಕಡ ಮುಳುಗಿದೆ.
ಈಜಲಾಗದ ಮುಳುಗಿದರು
ನಾರಾಯಣ ತಕ್ಷಣ ಈಜಿ ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ವಾಮಿ (45) ಅವರಿಗೆ ಈಜಿಲು ಸಾಧ್ಯವಾಗದೆ ನೀರಿನಲ್ಲಿ ಮುಳುಗಿದ್ದಾರೆ.
ವಿಚಾರ ತಿಳಿದು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಸ್ವಾಮಿ ಹುಡುಕಲು ಕಾರ್ಯಾಚರಣೆ ನಡೆಸಿದರು. ಈ ಸಂದರ್ಭ ನೀರಿನಲ್ಲಿ ಮುಳುಗಿದ್ದ ಉಕ್ಕಡ ಮತ್ತು ಅಡಕೆ ಚೀಲಗಳನ್ನು ಮೇಲೆತ್ತಲಾಗಿದೆ. ಸಂಜೆವರೆಗೆ ಕಾರ್ಯಾರಣೆ ನಡೆಸಿದರೂ ಸ್ವಾಮಿ ಪತ್ತೆಯಾಗಿಲ್ಲ.
ಇವತ್ತು ಬೆಳಗ್ಗೆಯಿಂದ ಪುನಃ ಕಾರ್ಯಾಚರಣೆ ನಡೆಸಿ ಸ್ವಾಮಿ ಪತ್ತೆ ಕಾರ್ಯ ನಡೆಸಲಾಗುತ್ತದೆ. ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
LATEST NEWS
- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

- ಬೆಟ್ಟೆ, ರಾಶಿ ರೇಟ್ ಇವತ್ತು ಎಷ್ಟಿದೆ? ಸರಕು ದರ ಮತ್ತೆ ಹೆಚ್ಚಾಯ್ತಾ? – 3 ಮಾರ್ಚ್ 2026

- ಶಿವಮೊಗ್ಗದಲ್ಲಿ ರಂಗ ಹಬ್ಬ, ನಾಲ್ಕು ದಿನ ನಾಟಕೋತ್ಸವ, ಯಾವ್ಯಾವ ದಿನ ಯಾವ ನಾಟಕವಿದೆ?

- ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಗೆ ಬಿಸಿ ಮುಟ್ಟಿಸಿದ ಅಕ್ಕ ಪಡೆ, ಆಗಿದ್ದೇನು?

- ದುರ್ಗಿಗುಡಿಯಲ್ಲಿ ವೈಭವದ ರಥೋತ್ಸವ, ಈ ಬಾರಿ ಉತ್ಸವ ಬೆಳಗ್ಗೆ ನಡೆದಿದ್ದೇಕೆ?

About The Editor
ನಿತಿನ್ ಆರ್.ಕೈದೊಟ್ಲು






