ಮೆಗ್ಗಾನ್‌ ಆಸ್ಪತ್ರೆಯಿಂದ ಹೊರ ಬಂದು ಆಟೋ ಹತ್ತಿದ್ದ ಮಹಿಳೆಗೆ ಆಘಾತ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 1 DECEMBER 2024

ಶಿವಮೊಗ್ಗ : ಮೆಗ್ಗಾನ್‌ ಆಸ್ಪತ್ರೆಯಲ್ಲಿ (Hospital) ಜನ ದಟ್ಟಣೆ ಹೆಚ್ಚಿದ್ದ ಸಂದರ್ಭ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ನ ಜಿಪ್‌ ತೆಗೆದು ಒಳಗಿದ್ದ 2.20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳುವ ಮಾಡಲಾಗಿದೆ. ಈ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ತಡವಾಗಿ ಪ್ರಕರಣ ದಾಖಲಾಗಿದೆ.

ತಬಸುಮ್‌ ಎಂಬುವರ ಬ್ಯಾಗ್‌ನಿಂದ ಚಿನ್ನಾಭರಣ ಕಳ್ಳತನವಾಗಿದೆ. ತಬಸುಮ್‌ ತಮ್ಮ ತಾಯಿಯನ್ನು ವೈದ್ಯರ ಬಳಿ ಪರೀಕ್ಷೆಗೆ ಕರೆತಂದಿದ್ದರು. ಈ ಸಂದರ್ಭ ಮೆಗ್ಗಾನ್‌ ಆಶ್ಪತ್ರೆಯಲ್ಲಿ ಜನ ದಟ್ಟಣೆ ಹೆಚ್ಚಿತ್ತು. ವೈದ್ಯಕೀಯ ಪರೀಕ್ಷೆ ಮುಗಿಸಿ ಆಟೋದಲ್ಲಿ ಮೆನೆಗೆ ಹೊರಟಾಗ ವ್ಯಾನಿಟಿ ಬ್ಯಾಗ್‌ ಜಿಪ್‌ ತೆಗೆದಿರುವುದು ಗಮನಕ್ಕೆ ಬಂದಿತ್ತು.

Mc-Gann-Hospital-Shimoga

ವ್ಯಾನಿಟಿ ಬ್ಯಾಗ್‌ ಪರಿಶೀಲಿಸಿದಾಗ ಚಿನ್ನಾಭರಣ ನಾಪತ್ತೆಯಾಗಿದ್ದವು. ಸೆ.18ರಂದು ಘಟನೆ ಸಂಭವಿಸಿತ್ತು. ತಬಸುಮ್‌ ಅವರ ಪತಿಗೆ ಹುಷಾರಿಲ್ಲದ ಕಾರಣ ಅವರು ಊರಿಗೆ ತೆರಳಿದ್ದು, ತಡವಾಗಿ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಡಿಕ್ಯಾತ್‌ಲಾನ್‌ 7K ಮ್ಯಾರಥಾನ್‌, ಈಗಲೆ ಹೆಸರು ನೋಂದಾಯಿಸಿ

Mc Gann Hospital

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment