SHIMOGA NEWS, 3 OCTOBER 2024 : ಬಟ್ಟೆ ಅಂಗಡಿಯೊಂದರ (Shop) ಮೇಲಿನ ಅಂತಸ್ಥಿನ ಷಟರ್ ಬಾಗಿಲಿನ ಬೀಗ ಮುರಿದು ನಗದು ಮತ್ತು ಸಿಸಿಟಿವಿ ಡಿವಿಆರ್‌ನ ಹಾರ್ಡ್ ಡಿಸ್ಕ್ ಕಳವು ಮಾಡಲಾಗಿದೆ. ಶಿವಮೊಗ್ಗ ನೆಹರು ರಸ್ತೆಯ ಸುಭಾಷಿತ ಫ್ಯಾಷನ್ ರೆಡಿಮೇಡ್ ಬಟ್ಟೆ ಅಂಗಡಿಯಲ್ಲಿ ಘಟನೆ ಸಂಭವಿಸಿದೆ.
ಬೆಳಗ್ಗೆ ಅಂಗಡಿಯ ಬಾಗಿಲು ತೆಗೆದು ಒಳ ಹೋದಾಗ ಕ್ಯಾಶ್ ಡ್ರಾ ತೆರೆದಿರುವುದನ್ನು ಗಮನಿಸಿದ ಅಂಗಡಿ ಮಾಲೀಕರು ಗಾಬರಿಯಾಗಿದ್ದಾರೆ. ಪರಿಶೀಲಿಸಿದಾಗ ಮೊದಲ ಅಂತಸ್ಥಿನ ಷಟರ್ ಬೀಗ ಮುರಿದಿರುವುದು ಗೊತ್ತಾಗಿದೆ. ಸಿಸಿಟಿವಿ ಪರಿಶೀಲಿಸಿದಾಗ ಡಿವಿಆರ್‌ನ ಹಾರ್ಡ್ ಡಿಸ್ಕ್ ಕಳುವಾಗಿರುವುದು ಅರಿವಿಗೆ ಬಂದಿದೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಇನ್ನು, ಕ್ಯಾಶ್ ಡ್ರಾದಲ್ಲಿ ಇಟ್ಟಿದ್ದ 75,700 ರೂ. ನಗದು, ಮತ್ತೊಂದು ಡ್ರಾನಲ್ಲಿಟ್ಟಿದ್ದ 650 ರೂ. ನಗದು ಕಳುವಾಗಿದೆ ಎಂದು ಅಂಗಡಿ ಮಾಲೀಕ ಪ್ರವೀಣ್ ದೂರು ನೀಡಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಬೆಳಗ್ಗೆ ವರ್ಕ್‌ಶಾಪ್ ಬಳಿ ಬಂದ ಮಾಲೀಕನಿಗೆ ಕಾದಿತ್ತು ಶಾಕ್