ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA NEWS, 2 OCTOBER 2024 : ವರ್ಕ್‌ಶಾಪ್‌ನ (Work Shop) ಬಾಗಿಲಿನ ಬೀಗ ಮುರಿದು ಒಳಗಿದ್ದ ಕಾರು ಕಳ್ಳತನ ಮಾಡಲಾಗಿದೆ. ಶಿವಮೊಗ್ಗದ ಬೈಪಾಸ್ ರಸ್ತೆಯಲ್ಲಿರುವ ವರ್ಕ್‌ಶಾಪ್‌ನಲ್ಲಿ ಘಟನೆಯಾಗಿದೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಸಯ್ಯದ್ ಜಮಾಲ್ ಇಮ್ತಿಯಾಜ್ ಎಂಬುವವರಿಗೆ ಸೇರಿದ ವೋಕ್ಸ್‌ವ್ಯಾಗನ್ ಕಾರು ಕಳುವಾಗಿದೆ. ರಿಪೇರಿ ಇದ್ದಿದ್ದರಿಂದ ತಮ್ಮ ಸಂಬಂಧಿಗೆ ಸೇರಿದ ವರ್ಕ್‌ಶಾಪ್‌ನಲ್ಲಿ ಕಾರು ಬಿಟ್ಟಿದ್ದರು. ವರ್ಕ್‌ಶಾಪ್‌ನವರು ಕಾರನ್ನು ಒಳಗೆ ನಿಲ್ಲಿಸಿ ರಾತ್ರಿ ಬೀಗ ಹಾಕಿ ತೆರಳಿದ್ದರು. ಮರುದಿನ ಬೆಳಗ್ಗೆ ಬಂದಾಗ ವರ್ಕ್‌ಶಾಪ್‌ನ ಬಾಗಿಲಿನ ಬೀಗ ಮುರಿದು ಕಾರನ್ನು ಕಳವು ಮಾಡಲಾಗಿತ್ತು. ಘಟನೆ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಇದನ್ನೂ ಓದಿ » ಬ್ಯಾಟರಿ ಲೈಟ್ ಬಿಟ್ಟ ವಿಚಾರ, ಕೈ ಕೈ ಮಿಲಾಯಿಸಿದ ಕುಟುಂಬಗಳು