ಮನೆಯವರೆಲ್ಲ ನಿದ್ದೆಯಲ್ಲಿದ್ದಾಗ ಒಳ ನುಗ್ಗಿ ಕಳ್ಳತನ ಮಾಡಿ ಹೋದ ಖದೀಮರು, ಹೇಗಾಯ್ತು ಕೃತ್ಯ?

ಶಿವಮೊಗ್ಗ: ನಗರದ ಮದಾರಿಪಾಳ್ಯದಲ್ಲಿ ರಾತ್ರಿ ಕುಟುಂಬದವರೆಲ್ಲ ಮನೆಯೊಳಗೆ ಮಲಗಿದ್ದಾಗಲೇ ಒಳಗೆ ನುಗ್ಗಿದ ಕಳ್ಳರು (thieves) ಹಣ, ಮೊಬೈಲ್‌ ಕದ್ದಿದ್ದಾರೆ.

ಕಳ್ಳರು ನುಗ್ಗಿದ್ದು ಮನೆಯವರಿಗೆ ಗೊತ್ತಾಗಿಲ್ಲವಾ?

ಮದಾರಿಪಾಳ್ಯದ 1ನೇ ಅಡ್ಡರಸ್ತೆಯ ಮೊಹಮ್ಮದ್ ಸಲೇಹ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಮೊಹಮ್ಮದ್ ಸಲೇಹ ಅವರು ಕುಟುಂಬದೊಂದಿಗೆ ರಾತ್ರಿ ಮಲಗಿದ್ದರು. ಈ ಸಂದರ್ಭ ಕಳ್ಳರು ಮನೆಯ ಬಾಗಿಲಿನ ಕರ್ಟನ್‌ ಎಳೆದು ಬೋಲ್ಟ್ ತೆಗೆದ ಒಳ ನುಗ್ಗಿದ್ದಾರೆ ಎಂದು ಆರೋಪಿಸಲಾಗಿದೆ.  

Shivamogga-Police-Jeep

Shivamogga-Police-Jeep

ಹಣ, ಮೊಬೈಲ್‌ ದೋಚಿದ ಕಳ್ಳರು

ಕಳ್ಳರು ಅಡುಗೆ ಮನೆಯಲ್ಲಿದ್ದ ₹6,000 ಹಾಗೂ ಪ್ಯಾಂಟ್ ಜೇಬಿನಲ್ಲಿದ್ದ ₹4,000 ಸೇರಿ ಒಟ್ಟು ₹10,000 ರೂಪಾಯಿ ನಗದು ದೋಚಿದ್ದಾರೆ. ಜೊತೆಗೆ ₹8,000 ಮೌಲ್ಯದ ಮೊಬೈಲ್ ಫೋನ್ ಕೂಡ ಕದ್ದೊಯ್ದಿದ್ದಾರೆ. ಬೆಳಗಿನ ಜಾವ 3:30ಕ್ಕೆ ಮೊಹಮ್ಮದ್ ಸಲೇಹ ಅವರು ಎಚ್ಚರವಾದಾಗ ಮನೆಯ ಬಾಗಿಲು ತೆರೆದಿರುವುದು ಗೊತ್ತಾಗಿದೆ. ಪರಿಶೀಲಿಸಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ತಡವಾಗಿ ದಾಖಲಾಯ್ತು ಕೇಸ್‌

ಮೊಹಮ್ಮದ್ ಸಲೇಹ ಅವರು ಮೊಬೈಲ್‌ ಕಳುವಾಗಿರುವ ಕುರಿತು ಮೊದಲು ಆನ್‌ಲೈನ್‌ನಲ್ಲಿ ದೂರು ನೀಡಿದ್ದರು. ಆದರೆ ಹಣ ಮತ್ತು ಮೊಬೈಲ್ ಪತ್ತೆಯಾಗದ ಹಿನ್ನೆಲೆ ಒಂದು ತಿಂಗಳು ತಡವಾಗಿ ದೂರು ನೀಡಿದ್ದಾರೆ. ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಆಯನೂರು ಸಂತೆ; ನಂಬರ್‌ ಪ್ಲೇಟ್‌ ಇಲ್ಲದ ಬೈಕ್‌ನಲ್ಲಿ ಬಂದವರಿಂದ ಮಾಂಗಲ್ಯ ಸರ ಅಪಹರಣ

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Shivamogga-Live-Number-1-Promotion
Shivamogga-Live-Number-1-Promotion

Leave a Comment