ಶಿವಮೊಗ್ಗದ ಲೈವ್.ಕಾಂ | SHIMOGA NEWS | 18 ಫೆಬ್ರವರಿ 2022
ಮನೆ ಜಾಗದ ವಿಚಾರವಾಗಿ ಶಿವಮೊಗ್ಗ ಮಹಾನಗರ ಪಾಲಿಕೆ ಮಾಜಿ ಸದಸ್ಯೆ ಮತ್ತು ಅವರ ಮಗನ ಮೇಲೆ ಹಲ್ಲೆ ನಡೆಸಲಾಗಿದೆ. ಈ ಸಂಬಂಧ ದೂರು, ಪ್ರತಿದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಮಾಜಿ ಕಾರ್ಪೊರೇಟರ್ ಸೀತಾಲಕ್ಷ್ಮಿ ಮತ್ತು ಅವರ ಮಗ ಪರಶುರಾಮ ಹಲ್ಲೆಗೊಳಗಾಗಿದ್ದಾರೆ.
ಮನೆ ಜಾಗದ ವಿಚಾರವಾಗಿ ಜಗಳವಾಗಿದೆ. ತಮ್ಮ ಜಾಗವನ್ನು ಅತಿಕ್ರಮ ಮಾಡಿ ಮನೆ ಕಟ್ಟಲಾಗುತ್ತಿದೆ ಎಂದು ಪಕ್ಕದ ಮನೆಯ ಕುಟುಂಬದವರು ಆರೋಪಿಸಿ ದಾಳಿ ಮಾಡಿ, ಹಲ್ಲೆ ನಡೆಸಿದ್ದಾರೆ. ಜೀವ ಬೆದರಿಕೆಯನ್ನು ಒಡ್ಡಿದ್ದಾರೆ ಎಂದು ಮಾಜಿ ಕಾರ್ಪೊರೇಟರ್ ಸೀತಾಲಕ್ಷ್ಮಿ ಅವರು ದೂರಿನಲ್ಲಿ ತಿಳಿಸಿದ್ದಾರೆ.
ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದ್ದಾರೆ.