ಪೂಜೆ ಮಾಡಿ ದೇಗುಲದ ಮುಂದೆ ನಿಲ್ಲಿಸಿದ್ದ ಟ್ರಾಕ್ಟರ್‌ ಮಾಯ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIMOGA NEWS, 14 OCTOBER 2024 : ವಿಜಯ ದಶಮಿಯಂದು ಪೂಜೆ ಸಲ್ಲಿಸಿ ಊರಿನ ದೇಗುಲದ ಮುಂದೆ ನಿಲ್ಲಿಸಿದ್ದ ಟ್ರಾಕ್ಟರ್‌ (Tractor) ಕಳುವಾಗಿದೆ. ಶಿವಮೊಗ್ಗ ತಾಲೂಕು ಆಯನೂರು – ಹಾರನಹಳ್ಳಿ ರಸ್ತೆಯ ನರಸಿಂಹ ದೇವಸ್ಥಾನದ ಮುಂಭಾಗ ಘಟನೆ ಸಂಭವಿಸಿದೆ.

ಚನ್ನಹಳ್ಳಿಯ ರೈತ ಪಾಲಾಕ್ಷಪ್ಪ ಅವರು ಟ್ರಾಕ್ಟರ್‌ಗೆ ಪೂಜೆ ಸಲ್ಲಿಸಿ ದೇಗುಲದ ಮುಂದೆಯೇ ಟ್ರಾಕ್ಟರ್‌ ಅನ್ನು ರಾತ್ರಿ ನಿಲ್ಲಿಸಿದ್ದರು. ಮರುದಿನ ಬೆಳಗ್ಗೆ 8 ಗಂಟೆ ಹೊತ್ತಿಗೆ ದೇಗುಲದ ಬಳಿ ಹೋದಾಗ ಟ್ರಾಕ್ಟರ್‌ ಕಾಣಿಸಲಿಲ್ಲ. ಎಲ್ಲೆಡೆ ಹುಡುಕಿದ ಪಾಲಾಕ್ಷಪ್ಪ ಅವರು ಬಳಿಕ ದೂರು ನೀಡಿದ್ದಾರೆ. ಟ್ರಾಕ್ಟರ್‌ ಮತ್ತು ಟ್ರಾಲಿ ಕಳುವಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಕುಂಸಿ ಠಾಣೆಯಲ್ಲಿ ಪಕರಣ ದಾಖಲಾಗಿದೆ.

ಇದನ್ನೂ ಓದಿ » ಸಿಗಂದೂರಿಗೆ ತೆರಳುತ್ತಿದ್ದ ಕಾರು ಅಪಘಾತ, ಬೆಂಗಳೂರಿನ ಯುವಕ ಸಾವು

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment