ಒಂದೇ ಒಂದು ವಾಟ್ಸಪ್‌ ಮೆಸೇಜ್‌ನಿಂದಾಗಿ ₹3,65,892 ಹಣ ನಾಪತ್ತೆ, ಆಗಿದ್ದೇನು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ: ಟ್ರಾಫಿಕ್ ಚಲನ್ (Traffic Challan) ಪಾವತಿಸುವ ನೆಪದಲ್ಲಿ ಮೊಬೈಲ್‌ಗೆ ಎಪಿಕೆ (APK) ಫೈಲ್ ಕಳುಹಿಸಿ, ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂಪಾಯಿ ಹಣವನ್ನು ದೋಚಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. ಈ ಸಂಬಂಧ ಶಿವಮೊಗ್ಗ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗದ ನಿವೃತ್ತ ಉದ್ಯೋಗಿಯೊಬ್ಬರು ವಂಚನೆಗೆ ಒಳಗಾಗಿದ್ದಾರೆ. ನಿವೃತ್ತ ಉದ್ಯೋಗಿಯ ವಾಟ್ಸಾಪ್ ನಂಬರ್‌ಗೆ ಅಪರಿಚಿತ ನಂಬರ್‌ನಿಂದ Traffic Challan ಹೆಸರಿನ ಪಿಡಿಎಫ್ ಮಾದರಿಯ ಎಪಿಕೆ ಫೈಲ್ ಬಂದಿತ್ತು. ಚಲನ್ ಮಾಹಿತಿಗಾಗಿ ದೂರುದಾರರು ಆ ಫೈಲ್ ಕ್ಲಿಕ್ ಮಾಡಿದಾಗ ಒಂದು ಅಪ್ಲಿಕೇಶನ್ ಇನ್‌ಸ್ಟಾಲ್ ಆಗಿತ್ತು. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

SMS-Fraud-Shimoga-CEN-Police-Station.

ಇದಾದ ನಂತರ ವಿವಿಧ ಅಪರಿಚಿತ ನಂಬರ್‌ಗಳಿಂದ ಇವರಿಗೆ ವಾಟ್ಸಾಪ್ ಕರೆಗಳು ಬಂದಿದ್ದವು. ಜನವರಿ 31ರಂದು ನಿವೃತ್ತ ಉದ್ಯೋಗಿಯ ಗಮನಕ್ಕೆ ಬಾರದೆ ಅವರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಖಾತೆಯಿಂದ ಎರಡು ಹಂತದಲ್ಲಿ ಒಟ್ಟು ₹3,65,892 ಹಣ ವರ್ಗಾವಣೆಯಾಗಿದೆ. ಆರೋಪಿಗಳು ಕಳುಹಿಸಿದ್ದ ಅಪ್ಲಿಕೇಶನ್ ಮೂಲಕ ದೂರುದಾರರ ವೈಯಕ್ತಿಕ ಮಾಹಿತಿಯನ್ನು ಕದ್ದು, ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಮೋಸದಿಂದ ವರ್ಗಾಯಿಸಿಕೊಳ್ಳಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

whatsapp-general-image

ಇದನ್ನೂ ಓದಿ – ಕರೆಂಟ್‌ ಇದ್ದರು ಅಡಿಕೆ ತೋಟದ ಮೋಟರ್‌ ಆನ್‌ ಆಗಲಿಲ್ಲ, ಪರಿಶೀಲಿಸಿದ ರೈತನಿಗೆ ಕಾದಿತ್ತು ಆಘಾತ

ಸಿ.ಇ.ಎನ್‌ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

JNNCE-COLLEGE-ADVT.

Leave a Comment