SHIVAMOGGA LIVE NEWS | 9 JANUARY 2025
ಶಿವಮೊಗ್ಗ : ಮನೆಯೊಂದರ ಮುಂದೆ ನಿಲ್ಲಿಸಿದ್ದ ಬೈಕ್ ರಾತ್ರೋರಾತ್ರಿ ಕಳ್ಳತನವಾಗಿದೆ. ಶಿವಮೊಗ್ಗದ ಅಶೋಕ ನಗರದಲ್ಲಿ ಪ್ರಭಾಕರ ಎಂಬುವವರ ಬೈಕ್ ಕಳುವಾಗಿದೆ. ರಾತ್ರಿ ಮನೆ ಮುಂದೆ ನಿಲ್ಲಿಸಿದ್ದು, ಬೆಳಗ್ಗೆ ತರಕಾರಿ ತರಲು ಮನೆಯಿಂದ ಹೊರ ಬಂದಾಗ ಬೈಕ್ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಿದ ಪ್ರಭಾಕರ್ ಅವರು ದೊಡ್ಡಪೇಟೆ ಠಾಣೆಗೆ ದೂರು ನೀಡಿದ್ದಾರೆ.ರಾತ್ರೋರಾತ್ರಿ ಬೈಕ್ ಕಳ್ಳತನ
ಸೊರಬ : ರಸ್ತೆಯಲ್ಲಿ ದಿಢೀರ್ ಅಡ್ಡಬಂದ ನಾಯಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಬೈಕ್ ಅಪಘಾತಕ್ಕೀಡಾಗಿದೆ. ತುಡಿನೀರು ಗ್ರಾಮದಲ್ಲಿ ಘಟನೆ ಸಂಭವಿಸಿದ್ದು, ಅದೇ ಗ್ರಾಮದ ಬೈಕ್ ಸವಾರ ಸಾಧಿಕ್ (27) ಗಂಭೀರವಾಗಿ ಗಾಯಗೊಂಡಿದ್ದಾನೆ. ಸಾಧಿಕ್‌ಗೆ ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎನಪೋಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆನವಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನಾಯಿಗೆ ಡಿಕ್ಕಿ ತಪ್ಪಿಸಲು ಹೋಗಿ ಅಪಘಾತ
ಶಿರಾಳಕೊಪ್ಪ : ಎತ್ತಿನಗಾಡಿಗೆ ಹಿಂದಿನಿಂದ ಬಂದ ಗೂಡ್ಸ್ ವಾಹನ ಡಿಕ್ಕಿ ಹೊಡದಿದೆ. ಸುಣ್ಣದಗೊಪ್ಪ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಎತ್ತಿನಗಾಡಿಯನ್ನು ಚಲಾಯಿಸುತ್ತಿದ್ದ ಚಂದ್ರಪ್ಪ (45) ಗಾಯಗೊಂಡಿದ್ದಾರೆ. ಒಂದು ಎತ್ತು ಕೂಡ ಗಂಭೀರವಾಗಿ ಗಾಯಗೊಂಡಿದೆ. ಚಂದ್ರಪ್ಪ ಅವರನ್ನು ಶಿರಾಳಕೊಪ್ಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಗೂಡ್ಸ್ ವಾಹನ ಚಾಲಕನ ವಿರುದ್ಧ ಶಿರಾಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಎತ್ತಿನಗಾಡಿಗೆ ಗೂಡ್ಸ್ ವಾಹನ ಡಿಕ್ಕಿ
ಇದನ್ನೂ ಓದಿ » ಅಮೆರಿಕದಿಂದಲೇ ಆನ್‌ಲೈನ್ ಮೀಟಿಂಗ್, ಜವಾಬ್ದಾರಿ ಮೆರೆದ ಮಿನಿಸ್ಟರ್, ಯಾವೆಲ್ಲ ಸಭೆ ನಡೆಸಿದ್ದಾರೆ?
ಶಿವಮೊಗ್ಗ : ನೆಹರು ರಸ್ತೆಯ ಗುರುವೈಭವ್ ಹೊಟೇಲ್ ಮುಂಭಾಗ ನಿಲ್ಲಿಸಿದ್ದ ಟಿವಿಎಸ್ ಎಕ್ಸ್‌ಎಲ್ ದ್ವಿಚಕ್ರ ವಾಹನ ಕಳ್ಳತನವಾಗಿದೆ. ಚಂದ್ರಶೇಖರ್ ಶೇಟ್ ಎಂಬುವವರಿಗೆ ಸೇರಿದ ದ್ವಿಚಕ್ರ ವಾಹನ ಕಳುವಾಗಿದೆ. ರಾತ್ರಿ 9.40ರ ಹೊತ್ತಿಗೆ ಟಿವಿಎಸ್ ಎಕ್ಸ್‌ಎಲ್ ದ್ವಿಚಕ್ರ ವಾಹನ ನಿಲ್ಲಿಸಿದ್ದರು. ಸ್ವಲ್ಪ ಹೊತ್ತಿನ ಬಳಿಕ ಪಾರ್ಕಿಂಗ್ ಸ್ಥಳಕ್ಕೆ ಮರಳಿದಾಗ ದ್ವಿಚಕ್ರ ವಾಹನ ಕಾಣೆಯಾಗಿತ್ತು. ಘಟನೆ ಸಂಬಂಧ ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನೆಹರು ರಸ್ತೆಯಲ್ಲಿ ಟಿವಿಎಸ್ ಎಕ್ಸ್‌ಎಲ್ ಕಳವು
ಇದನ್ನೂ ಓದಿ » ಸಾವಿರ ಮೂಟೆ ಸಿಮೆಂಟ್ ಆರ್ಡರ್ ಮಾಡಿದ್ದ ಗುತ್ತಿಗೆದಾರನಿಗೆ ಕೊನೆಗೆ ಕಾದಿತ್ತು ಶಾಕ್, ಆಗಿದ್ದೇನು?
ಶಿವಮೊಗ್ಗ : ಬಿ.ಹೆಚ್.ರಸ್ತೆಯ ಬಾರ್ ಒಂದರ ಮುಂದೆ ನಿಲ್ಲಿಸಿದ್ದ ಹೀರೋ ಹೋಂಡ ಸ್ಪ್ಲೆಂಡರ್ ಬೈಕ್ ಕಳ್ಳತನವಾಗಿದೆ. ಉಲ್ಲಾಸ್ ಎಂಬುವವರು ಬಾರ್ ಮುಂದೆ ಬೈಕ್ ನಿಲ್ಲಿಸಿದ್ದರು. ರಾತ್ರಿ 11.15ಕ್ಕೆ ಪಾರ್ಕಿಂಗ್ ಸ್ಥಳಕ್ಕೆ ಬಂದಾಗ ಬೈಕ್ ಕಳ್ಳತನವಾಗಿತ್ತು. ಘಟನೆ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬಾರ್ ಮುಂದೆ ಬೈಕ್ ಕಳವು
ಇದನ್ನೂ ಓದಿ » ತ್ಯಾವರೆಕೊಪ್ಪ ಸಫಾರಿಯ ಹುಲಿ ಅಂಜನಿ ಸಾವು, ಕಾರಣವೇನು?