BHADRAVATHI NEWS, 8 OCTOBER 2024 : ವಿಐಎಸ್‌ಎಲ್ ಕಾರ್ಖಾನೆಯಲ್ಲಿ ತಾಮ್ರದ ತಂತಿ (COPPER WIRE) ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಒಂದು ಬೈಕ್, ಆಟೋ ಮತ್ತು ತಾಮ್ರದ ತಂತಿಯನ್ನು ವಶಕ್ಕೆ ಪಡೆಯಲಾಗಿದೆ.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಕಾರ್ಖಾನೆಯ ಸೆಂಟ್ರಲ್ ಎಲೆಕ್ಟ್ರಿಕ್ ವರ್ಕ್ ಶಾಪ್ ರಿಪೇರಿಗೆ ತರಿಸಲಾಗಿದ್ದ ವೆಲ್ಡಿಂಗ್ ಮೆಷಿನ್‌ನಲ್ಲಿದ್ದ 50 ಕೆ.ಜಿ ತೂಕದ ತಾಮ್ರದ ತಂತಿ ಕಳುವಾಗಿತ್ತು. ಈ ಸಂಬಂಧ ವಿಐಎಸ್‌ಎಲ್ ಕಾರ್ಖಾನೆಯ ಭದ್ರತಾ ಸಿಬ್ಬಂದಿ ನೀಡಿದ್ದ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಭದ್ರಾವತಿಯ ದೇವನರಸೀಪುರದ ಹೊಸ ಕೋಡಿಹಳ್ಳಿ ಗ್ರಾಮದ ವೆಂಕಟೇಶ ಅಲಿಯಾಸ್ ಬುಡ್ಡಾ, ಎಕಿನ್ಸಾ ಕಾಲೋನಿಯ ಮುನೀರ್ ಜಾನ್ ಅಲಿಯಾಸ್ ತಿಕಲ ಬಂಧಿತರು. 36,500 ರೂ. ಬೆಲೆಯ ತಾಮ್ರದ ತಂತಿ, ಕೃತ್ಯಕ್ಕೆ ಬಳಸಿದ್ದ ಬೈಕ್ ಮತ್ತು ಪ್ಯಾಸೆಂಜರ್ ಆಟೋವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಭದ್ರಾವತಿ ಇನ್ಸ್‌ಪೆಕ್ಟರ್ ಶ್ರೀಶೈಲಕುಮಾರ್, ನ್ಯೂ ಟೌನ್ ಠಾಣೆ ಪಿಎಸ್‌ಐ ಟಿ.ರಮೇಶ್, ಎಎಸ್‌ಐ ಮಂಜಪ್ಪ, ಸಿಬ್ಬಂದಿ ನವೀನ್, ಪ್ರಸನ್ನ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ » ಶಿವಮೊಗ್ಗ ದಸರಾ ವೇದಿಕೆಯಲ್ಲಿ ನಟಿ ಉಮಾಶ್ರೀ ಗರಂ, ಕಾರಣವೇನು?
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು






