ಶಿವಮೊಗ್ಗ ಲೈವ್.ಕಾಂ | BHADRAVATHI NEWS | 17 ಡಿಸೆಂಬರ್ 2021
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ ಬೈಕ್ ಸವಾರರನ್ನು ಹಿಡಿದು, ಕೈಯಲ್ಲಿದ್ದ ಬ್ಯಾಗ್ ತಪಾಸಣೆಗೆ ಒಳಪಡಿಸಿದಾಗ ರಾಶಿ ರಾಶಿ ಮೊಬೈಲ್ ಪತ್ತೆಯಾಗಿವೆ. ಕಳ್ಳರನ್ನು ಬಂಧಿಸಿದ ಪೊಲೀಸರು ಮೊಬೈಲ್’ಗಳನ್ನು ವಶಕ್ಕೆ ಪಡೆದಿದ್ದಾರೆ.
ಭದ್ರಾವತಿ ಹೊಸಮನೆ ಬಡಾವಣೆಯ ಸಿ.ಶ್ರೀನಿವಾಸ್ (26) ಮತ್ತು ದುರ್ಗಿನಗರದ ಅಜಾಮ್ ಅಲಿಯಾಸ್ ಬಾಬು (38) ಬಂಧಿತರು.
ಬ್ಯಾಗ್’ನಲ್ಲಿತ್ತು ರಾಶಿ ರಾಶಿ ಮೊಬೈಲ್
ಮೊಬೈಲ್ ಕಳ್ಳರ ಕುರಿತು ಖಚಿತ ಮಾಹಿತಿ ಮೇರೆಗೆ, ಪೊಲೀಸರು ಭದ್ರಾವತಿಯ ಸೀಗೆಬಾಗಿ ಗಣಪತಿ ದೇಗುಲದ ಬಳಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭ ಬೈಕ್’ನಲ್ಲಿ ಬಂದ ಇಬ್ಬರು ಯುವಕರು ಪೊಲೀಸರನ್ನು ಕಂಡು ಪರಾರಿಯಾಗಿಲು ಯತ್ನಿಸಿದ್ದಾರೆ. ಇವರನ್ನು ಹಿಡಿದ ಪೊಲೀಸರು ತಪಾಸಣೆ ನಡೆಸಿದ್ದಾರೆ. ಇವರ ಬಳಿ ಇದ್ದ ಬ್ಯಾಗ್ ಪರಿಶೀಲನೆ ನಡೆಸಿದಾಗ ರಾಶಿ ರಾಶಿ ಮೊಬೈಲ್ ಪತ್ತೆಯಾಗಿದೆ.
10 ಲಕ್ಷದ ಮೊಬೈಲ್, ಲ್ಯಾಪ್ ಟಾಪ್
ಬ್ಯಾಗ್’ನಲ್ಲಿ ವಿವಿಧ ಕಂಪನಿಗಳ 120ಕ್ಕೂ ಹೆಚ್ಚು ಮೊಬೈಲ್ ಪತ್ತೆಯಾಗಿವೆ. ಇವುಗಳ ಮೌಲ್ಯ 10 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಇನ್ನು, ಬ್ಯಾಗ್’ನಲ್ಲಿ ಸುಮಾರು 20 ಸಾವಿರ ಮೌಲ್ಯದ ಡೆಲ್ ಕಂಪನಿಯ ಲ್ಯಾಪ್ ಟಾಪ್ ಸಿಕ್ಕಿದೆ.

ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಕೃತ್ಯಕ್ಕೆ ಬಳಸಿದ ಡಿಯೋ ಬೈಕನ್ನು ವಶಕ್ಕೆ ಪಡೆದಿದ್ದಾರೆ.
ಸಿಪಿಐ ರಾಘವೇಂದ್ರ ಕಾಂಡಿಕೆ ಮಾರ್ಗದರ್ಶನದಲ್ಲಿ ಎ.ಎಸ್.ಐ ಮಹೇಶ್ವರ ನಾಯ್ಕ, ಸಿಬ್ಬಂದಿ ವಿಜಯಕುಮಾರ್, ಪ್ರಸನ್ನ ಸ್ವಾಮಿ, ನವೀನ್ ಪವಾರ್, ಹಾಲಪ್ಪ, ನಾರಾಯಣ ಸ್ವಾಮಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಓಲ್ಡ್ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

.
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು






