ಶಿವಮೊಗ್ಗದಲ್ಲಿ ನಡುರಾತ್ರಿ ಚೆಕ್‌ಪೋಸ್ಟ್‌ ಬಳಿ ಕಾರು ಬಿಟ್ಟು ಇಬ್ಬರು ಎಸ್ಕೇಪ್, ಡೋರ್ ತೆಗೆದ ಪೊಲೀಸರಿಗೆ ಶಾಕ್

Published On : ಏಪ್ರಿಲ್ 7, 2023

Published By : ನಿತಿನ್‌ ಆರ್‌.ಕೈದೊಟ್ಲು 

SHIVAMOGGA LIVE NEWS | 7 APRIL 2023

SHIMOGA : ವಿಧಾನಸಭೆ ಚುನಾವಣೆ ಹಿನ್ನೆಲೆ ಚೆಕ್ ಪೋಸ್ಟ್ (checkpost) ಒಂದರಲ್ಲಿ ವಾಹನ ತಪಾಸಣೆ ವೇಳೆ ಕಾರಿನಲ್ಲಿ ಗೋವುಗಳ ಕಳ್ಳಸಾಗಣೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಕಾರಿನಲ್ಲಿ ಎರಡು ಎತ್ತುಗಳಿದ್ದು ಒಂದು ಸಾವನ್ನಪ್ಪಿದೆ. ಮೊತ್ತೊಂದು ಎತ್ತನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.

Police-Jeep-With-Light-New.

ಸೋಮಿನಕೊಪ್ಪದ ಚೆಕ್‍ಪೋಸ್ಟ್‌ನಲ್ಲಿ (checkpost) ರಾತ್ರಿ 1 ಗಂಟೆ ಹೊತ್ತಿಗೆ ವಾಹನ ತಪಾಸಣೆ ವೇಳೆ ರಿಟ್ಜ್‌ ಕಾರೊಂದು ಚೆಕ್‍ಪೋಸ್ಟ್‌ ಬಳಿ ಬಂದಿದೆ. ಪೊಲೀಸರನ್ನು ಗಮನಿಸುತ್ತಿದ್ದಂತೆ ಕಾರಿನೊಳಗೆ ಇದ್ದ ಇಬ್ಬರು ಕಾರು ಬಿಟ್ಟು ಪರಾರಿಯಾಗಿದ್ದಾರೆ.

ತಪಾಸಣೆ ವೇಳೆ ಎತ್ತುಗಳು ಪತ್ತೆ

ಕಾರು ಬಿಟ್ಟು ಇಬ್ಬರು ಪರಾರಿಯಾಗುವುದನ್ನು ಗಮನಿಸಿದ ಪೊಲೀಸರು ಕೂಡಲೆ ಕಾರ್ ಬಳಿ ಹೋಗಿ ತಪಾಸಣೆ ನಡೆಸಿದ್ದಾರೆ. ಆಗ ಕಾರಿನಲ್ಲಿ ಎರಡು ಎತ್ತುಗಳು ಇರುವುದು ಗಮನಕ್ಕೆ ಬಂದಿದೆ. ಕಾಲುಗಳನ್ನು ಕಟ್ಟಿ, ಒಂದರ ಮೇಲೆ ಒಂದು ಎತ್ತನ್ನು ಇಡಲಾಗಿತ್ತು. ಕೂಡಲೆ ಪೊಲೀಸರು ಎತ್ತುಗಳ ರಕ್ಷಣೆ ಮಾಡಿದ್ದಾರೆ. ಈ ಹೊತ್ತಿಗಾಗಲೆ ಒಂದು ಎತ್ತು ಸಾವನ್ನಪ್ಪಿತ್ತು. ಮತ್ತೊಂದನ್ನು ರಕ್ಷಿಸಲಾಗಿದೆ.

Nammur-News-Whatsapp

ಎತ್ತುಗಳ ಕಳ್ಳತನ ಮಾಡಿ ಅವುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿರುವ ಶಂಕೆ ಇದೆ. ವಿನೋಬನಗರ ಠಾಣೆ ಪೊಲೀಸರು ಕಾರನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ – ನಟ ಸುದೀಪ್‌ಗೆ ಸಂಕಷ್ಟ, ಶಿವಮೊಗ್ಗದಲ್ಲಿ ಚುನಾವಣಾ ಆಯೋಗಕ್ಕೆ ದೂರು ನೀಡಿದ ವಕೀಲ, ಕಾರಣವೇನು?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಏಪ್ರಿಲ್ 7, 2023

Leave a Comment