ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ವಶೀಕರಣದ ಮೂಲಕ ಗಂಡ – ಹೆಂಡತಿ (Wife) ಸಮಸ್ಯೆ ಪರಿಹಾರ ಮಾಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬ ಚಿನ್ನಾಭರಣ ಪಡೆದು ಪರಾರಿಯಾಗಿದ್ದಾನೆ.
‘ವಶೀಕರಣಕ್ಕೆ 61 ಗ್ರಾಂ ಚಿನ್ನ ತನ್ನಿʼ
ಶಿವಮೊಗ್ಗ ನಗರದ ಮಹಿಳೆಯೊಬ್ಬರು ತಮ್ಮ ಪತಿಯ ಸಮಸ್ಯೆ ಪರಿಹಾರಕ್ಕೆ ವಶೀಕರಣ ಜ್ಯೋತಿಷಿಯ ಮೊರೆ ಹೋಗಿದ್ದರು. ದುರ್ಗಿಗುಡಿಯಲ್ಲಿ ಕಚೇರಿ ಮಾಡಿಕೊಂಡಿದ್ದ ಈತ ಸಮಸ್ಯೆ ಪರಿಹಾರಕ್ಕೆ 61 ಗ್ರಾಂ ಚಿನ್ನಾಭರಣ ತರುವಂತೆ ತಿಳಿಸಿದ್ದ. ಅಂತೆಯೇ ಮಹಿಳೆ ತನ್ನ ಬಳಿ ಇದ್ದ 51 ಗ್ರಾಂ ಚಿನ್ನಾಭರಣ, ಆಕೆಯ ಸ್ನೇಹಿತೆ ಬಳಿಯಿಂದ 10 ಗ್ರಾಂ ಚಿನ್ನಾಭರಣ ಹೊಂದಿಸಿ ತಂದುಕೊಟ್ಟಿದ್ದರು.
ದಂಪತಿಯ ಫೋಟೊ, ಚಿನ್ನಾಭರಣವನ್ನು ಒಂದು ಮಡಿಕೆಯಲ್ಲಿ ಇರಿಸಿ, ಮಂತ್ರ ಪಠಿಸುವಂತೆ ಮಾಡಿ ಅದನ್ನು ಮುಚ್ಚಿ, ಕೆಂಪು ದಾರದಲ್ಲಿ ಕಟ್ಟಿದ ವಶೀಕರಣ ಜ್ಯೋತಿಷಿ ಸಾಹೇಬ್ ಸುಹಾನ್, ಅದನ್ನು ಮಹಿಳೆಯ ಕೈಗೆ ಕೊಟ್ಟಿದ್ದ. ಮಡಿಕೆಯನ್ನು ರಹಸ್ಯವಾಗಿ ಇಟ್ಟು ಐದು ದಿನ ಪೂಜೆ ಮಾಡಬೇಕು ಎಂದು ತಿಳಿಸಿದ್ದ. ಎರಡು ದಿನ ಪೂಜೆ ಬಳಿಕ ಅನುಮಾನಗೊಂಡು ಮಡಿಕೆ ತೆಗೆದ ಮಹಿಳೆಗೆ ಅದರೊಳಗೆ ಮಣ್ಣಿನ ಪೀಸುಗಳಿದ್ದವು. ಕೂಡಲೆ ಜ್ಯೋತಿಷ್ಯಾಲಯದ ಬಳಿ ಹೋದಾಗ ಕಚೇರಿಗೆ ಬೀಗ ಹಾಕಲಾಗಿತ್ತು ಎಂದು ಆರೋಪಿಸಲಾಗಿದೆ.
ವಶೀಕರಣ ಜ್ಯೋತಿಷಿ ನಾಪತ್ತೆ
ಜ್ಯೋತಿಷ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನು ವಿಚಾರಿಸಿದಾಗ ಜ್ಯೋತಿಷಿ ಸಾಹೇಬ್ ಸುಬಾನ್ ಲಕ್ನೋಗೆ ಹೋಗಿ ಬರುವುದಾಗಿ ಮೆಸೇಜ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ವಶೀಕರಣ, ಉದ್ಯೋಗ, ಪ್ರೇಮ ವಿಚಾರ, ಕೌಟುಂಬಿಕ ಕಲಹ ಪರಿಹಾರ ಎಂದು ನಂಬಿಸಿ ವಂಚಿಸಿದ್ದಾನೆ ಎಂದು ಆರೋಪಿಸಿ ಮಹಿಳೆ ದೂರು ನೀಡಿದ್ದಾರೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಕಾಣೆಯಾದ ನಾಯಕರು, ರಾರಾಜಿಸಿದವು ಖಾಲಿ ಖಾಲಿ ಚೇರುಗಳು, ಮಕ್ಕಳಿಗೆ ಇದೇನಾ ಮಾದರಿ?
House Wife
LATEST NEWS
- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

- ಬೆಟ್ಟೆ, ರಾಶಿ ರೇಟ್ ಇವತ್ತು ಎಷ್ಟಿದೆ? ಸರಕು ದರ ಮತ್ತೆ ಹೆಚ್ಚಾಯ್ತಾ? – 3 ಮಾರ್ಚ್ 2026

- ಶಿವಮೊಗ್ಗದಲ್ಲಿ ರಂಗ ಹಬ್ಬ, ನಾಲ್ಕು ದಿನ ನಾಟಕೋತ್ಸವ, ಯಾವ್ಯಾವ ದಿನ ಯಾವ ನಾಟಕವಿದೆ?

- ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಗೆ ಬಿಸಿ ಮುಟ್ಟಿಸಿದ ಅಕ್ಕ ಪಡೆ, ಆಗಿದ್ದೇನು?

- ದುರ್ಗಿಗುಡಿಯಲ್ಲಿ ವೈಭವದ ರಥೋತ್ಸವ, ಈ ಬಾರಿ ಉತ್ಸವ ಬೆಳಗ್ಗೆ ನಡೆದಿದ್ದೇಕೆ?

About The Editor
ನಿತಿನ್ ಆರ್.ಕೈದೊಟ್ಲು






