ಶಿವಮೊಗ್ಗದಲ್ಲಿ ಬಂದೋಬಸ್ತ್‌ ವೇಳೆ ಮಹಿಳಾ ಪೊಲೀಸ್‌ ಅಧಿಕಾರಿಯ ಚಿನ್ನದ ಸರ ನಾಪತ್ತೆ

 ಶಿವಮೊಗ್ಗ  LIVE 

ಶಿವಮೊಗ್ಗ: ಕಾಂಗ್ರೆಸ್‌ ಕಾರ್ಯಕರ್ತರು ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕುವ ವೇಳೆ ಮಹಿಳಾ ಪೊಲೀಸ್‌ ಅಧಿಕಾರಿಯೊಬ್ಬರ ಚಿನ್ನದ ಸರ ನಾಪತ್ತೆ ಆಗಿದೆ. ಪ್ರತಿಭಟನೆ ನಂತರ ಪೊಲೀಸ್‌ ಅಧಿಕಾರಿಗೆ ಚಿನ್ನದ ಸರ (Gold Chain) ನಾಪತ್ತೆಯಾಗಿರುವುದು ಗೊತ್ತಾಗಿದೆ.

ಕೋಟೆ ಪೊಲೀಸ್‌ ಠಾಣೆಯ ಎಎಸ್‌ಐ ಅಮೃತಾ ಬಾಯಿ ಅವರ ಕೊರಳಲ್ಲಿದ್ದ 60 ಗ್ರಾಂ ತೂಕದ ಚಿನ್ನದ ಸರ ನಾಪತ್ತೆಯಾಗಿದೆ.

Police-Officer-gold-chain-missing

ಇದನ್ನೂ ಓದಿ » ಶಿವಮೊಗ್ಗ ಬಿಜೆಪಿ ಕಚೇರಿಗೆ ಮುತ್ತಿಗೆ ಯತ್ನ, ಕಾಂಗ್ರೆಸ್‌ ಕಾರ್ಯಕರ್ತರು ಪೊಲೀಸ್‌ ವಶಕ್ಕೆ, ಕಾರಣವೇನು?

ಪ್ರತಿಭಟನೆ ವೇಳೆ ನೂಕುನುಗ್ಗಲು ಉಂಟಾಗಿತ್ತು. ನಂತರ ಕಾಂಗ್ರೆಸ್‌ ಕಾರ್ಯಕರ್ತರನ್ನು ವಶಕ್ಕೆ ಪಡೆದು ಪೊಲೀಸ್‌ ವಾಹನಕ್ಕೆ ಹತ್ತಿಸಲಾಯಿತು. ಪ್ರತಿಭಟನೆ ಮುಗಿದು ಬ್ಯಾರಿಕೇಡ್‌ಗಳ ತೆರವು ಮಾಡುವ ಸಂದರ್ಭ ಎಎಸ್‌ಐ ಅಮೃತಾ ಬಾಯಿ ಅವರ ಕೊರಳಲ್ಲಿದ್ದ ಚಿನ್ನದ ಸರ ನಾಪತ್ತೆ ಆಗಿರುವುದು ಗೊತ್ತಾಗಿದೆ. ಕಣ್ಣೀರು ಹಾಕುತ್ತಲೆ ಹಿರಿಯ ಅಧಿಕಾರಿಗಳಿಗೆ ಅಮೃತಾ ಬಾಯಿ ಮಾಹಿತಿ ನೀಡಿದರು.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment