ಶಿವಮೊಗ್ಗದ ಮಹಿಳೆಗೆ 10 ದಿನದಲ್ಲಿ ₹11,46,273 ಮೋಸ, ಆಗಿದ್ದೇನು?

ಶಿವಮೊಗ್ಗ: ನ್ಯಾಷನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌ ಸಂಸ್ಥೆಯಲ್ಲಿ ವರ್ಕ್‌ ಫ್ರಂ ಹೋಮ್‌ ಅವಕಾಶವಿದ್ದು, ವಿವಿಧ ಟಾಸ್ಕ್‌ ಪೂರೈಸಿದರೆ ಅತ್ಯಧಿಕ ಲಾಭ ಗಳಿಸಬಹುದು ಎಂದು ನಂಬಿಸಿ ಶಿವಮೊಗ್ಗದ ಮಹಿಳೆಯೊಬ್ಬರಿಗೆ ₹11,46,273 ವಂಚಿಸಲಾಗಿದೆ.➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಇನ್‌ಸ್ಟಾಗ್ರಾಂನಲ್ಲಿ ಬಲೆಗೆ ಕೆಡವಿಕೊಂಡರು

ಶಿವಮೊಗ್ಗದ ಮಹಿಳೆ ಇನ್‌ಸ್ಟಾಗ್ರಾಂ ವಿಕ್ಷಿಸುತ್ತಿದ್ದಾಗ ನ್ಯಾಷನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌ನಲ್ಲಿ ವರ್ಕ್‌ ಫ್ರಂ ಹೋಮ್‌ ಅವಕಾಶವಿದೆ ಎಂಬ ಜಾಹೀರಾತು ಗಮನಿಸಿದ್ದರು. ಇದನ್ನು ಕ್ಲಿಕ್‌ ಮಾಡಿದಾಗ ವಿವಿಧ ಟಾಸ್ಕ್‌ ಪೂರೈಸಿ ಲಾಭ ಗಳಿಸಬಹುದು ಎಂದು ತಿಳಿಸಲಾಗಿತ್ತು. ನಂಬಿದ ಮಹಿಳೆ ಹಣ ಪಾವತಿಸಿ ವಿವಿಧ ಟಾಸ್ಕ್‌ ಪೂರೈಸಿದ್ದಾರೆ. ಹತ್ತು ದಿನದಲ್ಲಿ ವಿವಿಧ ಬ್ಯಾಂಕ್‌ ಖಾತೆಗಳಿಗೆ ಒಟ್ಟು ₹11,46,273 ಹೂಡಿಕೆ ಮಾಡಿದ್ದರು ಎಂದು ಆರೋಪಿಸಲಾಗಿದೆ.

ಹಣ ಕೇಳಿದಾಗ ಅಸಲಿ ರೂಪ ಬಯಲು

ಹೂಡಿಕೆ ಮತ್ತು ಲಾಭಾಂಶದ ಹಣವನ್ನು ಮಹಿಳೆ ವಾಪಸ್‌ ಕೇಳಿದ್ದರು. ಟಾಸ್ಕ್‌ ನೀಡಿದ್ದವರು, ‘ತಾವು ಸೂಚಿಸಿದ ಬ್ಯಾಂಕ್‌ ಖಾತೆಗಳಿಗೆ ಮತ್ತಷ್ಟು ಹಣ ವರ್ಗಾಯಿಸಿದರೆ ನಿಮ್ಮ ಹಣ ಹಿಂತಿರುಗಲಿದೆ’ ಎಂದು ತಿಳಿಸಿದ್ದರು. ಆಗ ಮಹಿಳೆಗೆ ತಾನು ವಂಚನೆಗೊಳಗಾಗಿರುವುದು ಗೊತ್ತಾಗಿದೆ.

ಘಟನೆ ಸಂಬಂಧ ಶಿವಮೊಗ್ಗದ ಸಿ.ಇ.ಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಅಡ್ಡಗಟ್ಟಿ ಚಿನ್ನ, ನಗದು ಕಸಿದವನು ಅರೆಸ್ಟ್‌, ರಂಗೋಲೆ ಹಾಕುತ್ತಿದ್ದ ಮಹಿಳೆ ಸರ ಕಿತ್ತುಕೊಂಡವನು ಜೈಲಿಗೆ

Leave a Comment