ವಿದ್ಯುತ್ ಕಂಬದಿಂದ ಬಿದ್ದು ಸೊಂಟ ಮುರಿದುಕೊಂಡ ಕಾರ್ಮಿಕ, ಗುತ್ತಿಗೆದಾರನ ವಿರುದ್ಧ ಕೇಸ್

ಶಿವಮೊಗ್ಗ ಲೈವ್.ಕಾಂ | ELECTRIC POLE | 7 MAY 2022

ಉಂಬೈಬೈಲ್-ಲಿಂಗಾಪುರದಲ್ಲಿ ಎಲೆಕ್ಟ್ರಿಕ್ ಕೆಲಸ ಮಾಡುವಾಗ ವಿದ್ಯುತ್ ಕಂಬದಿಂದ ಬಿದ್ದು ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾನೆ.

ಶಿಕಾರಿಪುರದ ಹುಚ್ಚರಾಯಪ್ಪ ಗಾಯಾಳು, ಫೆ.3ರಂದು ಶಿರಾಳಕೊಪ್ಪದ ಎಲೆಕ್ಟ್ರಿಕಲ್ ಗುತ್ತಿಗೆದಾರ ಸಚಿನ್ ಉಂಬೈಬೈಲ್-ಲಿಂಗಾಪುರ ಗ್ರಾಮಕ್ಕೆ ವಿದ್ಯುತ್ ಕಾಮಗಾರಿಗೆ ಹುಚ್ಚರಾಯಪ್ಪನನ್ನು ಕರೆದೊಯ್ದಿದ್ದ ಎಂದು ಆರೋಪಿಸಲಾಗಿದೆ.

ಸುರಕ್ಷಿತ ಕ್ರಮವಿಲ್ಲ

ಯಾವುದೇ ಸುರಕ್ಷಿತಾ ಕ್ರಮ ಅನುಸರಿಸದೆ ಹುಚ್ಚರಾಯಪ್ಪನನ್ನು ವಿದ್ಯುತ್ ಕಂಬ ಹತ್ತಿಸಲಾಗಿತ್ತು. ಈ ವೇಳೆ ವಿದ್ಯುತ್ ಕಂಬದಿಂದ ಬಿದ್ದು ಹುಚ್ಚರಾಯಪ್ಪ ಸೊಂಟ ಮುರಿದುಕೊಂಡಿದ್ದ. ತಕ್ಷಣವೇ ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದ ಗುತ್ತಿಗೆದಾರ ಸಚಿನ್ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಭರವಸೆ ನೀಡಿದ್ದ.

Kalleshwara-Enterprises.webp

Shimoga Nanjappa Hospital

ಇದುವರೆಗೆ ಗುತ್ತಿಗೆದಾರ ಚಿಕಿತ್ಸಾ ವೆಚ್ಚ ಭರಿಸುವಲ್ಲಿ ವಿಫಲನಾಗಿದ್ದಾನೆ. ಹಾಗಾಗಿ ಹುಚ್ಚರಾಯಪ್ಪನ ತಂದೆ ವಿಜಯಕುಮಾರ್ ಅವರು ತುಂಗಾನಗರ ಠಾಣೆಯಲ್ಲಿ ಸಚಿನ್ ವಿರುದ್ಧ ದೂರು ನೀಡಿದ್ದಾರೆ.

ಇದನ್ನೂ ಓದಿ – ಡ್ರಾಪ್ ಕೇಳಿದವನೆ ಬೈಕ್ ಕದ್ದೊಯ್ದ, ಶಿವಮೊಗ್ಗದ ಸಾಗರ ರಸ್ತೆಯಲ್ಲಿ ಪ್ರಕರಣ, ಹೇಗಾಯ್ತು ಕಳವು?

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment