ಜೋಗಕ್ಕೆ ಬಂದಿದ್ದ ಯುವಕ ನಾಪತ್ತೆ | ಸಕ್ರೆಬೈಲು ಬಳಿ ಲಾರಿ ಪಲ್ಟಿ – 3 ಅಪರಾಧ ಸುದ್ದಿಗಳು ಫಟಾಫಟ್‌

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 22 JULY 2024

CRIME NEWS : ಬೆಂಗಳೂರಿನಿಂದ ಜೋಗ ಜಲಪಾತಕ್ಕೆ (FALLS) ಬಂದಿದ್ದ ಯುವಕನೊಬ್ಬ ನಾಪತ್ತೆಯಾಗಿದ್ದಾನೆ. ಶಿವಮೊಗ್ಗ – ತೀರ್ಥಹಳ್ಳಿ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ ರಸ್ತೆಗೆ ಉರುಳಿದೆ. ಮೂರು ಅಪರಾಧ ಸುದ್ದಿಗಳು ಫಟಾಫಟ್‌

ಜೋಗಕ್ಕೆ ಬಂದಿದ್ದ ಯುವಕ ನಾಪತ್ತೆ

FATAFAT-1-NEW.webpಶಿವಮೊಗ್ಗ ಲೈವ್.ಕಾಂ : ಜೋಗ ಜಲಪಾತ ವೀಕ್ಷಣೆಗೆ ಆಗಮಿಸಿದ್ದ ಯುವಕನೊಬ್ಬ ಕಾಣೆಯಾಗಿದ್ದಾನೆ. ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಬೆಂಗಳೂರಿನಲ್ಲಿ ಟೀ ಕ್ಯಾಂಟೀನ್‌ ನಡೆಸುತ್ತಿದ್ದ ಗದಗ ಮೂಲದ ಆನಂದ್‌ (24) ಕಣ್ಮರೆಯಾಗಿದ್ದಾನೆ. ಜು.15ರಂದು ಜೋಗ ವೀಕ್ಷಣೆಗಾಗಿ ಆಗಮಿಸಿದ್ದ. ಆತನ ಬ್ಯಾಗ್‌ ಪತ್ತೆಯಾಗಿದೆ. ಯುವಕನಿಗಾಗಿ ಕಾರ್ಗಲ್‌ ಠಾಣೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಸಕ್ರೆಬೈಲು ಬಳಿ ಲಾರಿ ಪಲ್ಟಿ

truck mishap at sakrebyle

FATAFAT-2-NEW.webpಶಿವಮೊಗ್ಗ ಲೈವ್.ಕಾಂ : ಸಕ್ರೆಬೈಲು ಬಳಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಮಂಗಳೂರಿನಿಂದ ಬಳ್ಳಾರಿಗೆ ಕಲ್ಲಿದ್ದಲು ತುಂಬಿಕೊಂಡು ಹೋಗುತ್ತಿದ್ದ ಲಾರಿ ಅಪಘಾತಕ್ಕೀಡಾಗಿದೆ. ಲಾರಿಯಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ. ರಸ್ತೆ ಬಿಟ್ಟು ಪಕ್ಕದ ಚರಂಡಿಗೆ ಲಾರಿ ಪಲ್ಟಿಯಾಗಿದೆ. ತುಂಗಾ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ರಾತ್ರಿ ಇದ್ದ ಬೈಕ್‌ ಬೆಳಗ್ಗೆ ನಾಪತ್ತೆ

FATAFAT-3-NEW.webpಶಿವಮೊಗ್ಗ ಲೈವ್.ಕಾಂ : ವಿನೋಬನಗರದ ಕೆಂಚಪ್ಪ ಬಡಾವಣೆಯ ಲಕ್ಷ್ಮಿಪುರ ಮುಖ್ಯ ರಸ್ತೆಯಲ್ಲಿ ಶ್ರೀಧರ್‌ ಎಂಬುವವರ ಆರ್‌.ಎಕ್ಸ್‌.135 ಬೈಕ್‌ ಕಳ್ಳತನವಾಗಿದೆ. ರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಬೈ ಬೆಳಗಾಗುವುದರಲ್ಲಿ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಿದ ಬಳಿಕ ಶ್ರೀಧರ್‌ ಅವರು ವಿನೋಬನಗರ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ ⇓

ತುಂಗಾ ಡ್ಯಾಂ ಒಳ ಹರಿವು ಕುಸಿತ, ಭದ್ರಾಗೆ ತುಸು ಹೆಚ್ಚಳ, ಲಿಂಗನಮಕ್ಕಿಯಲ್ಲಿ ನೀರಿನ ಮಟ್ಟ ಎಷ್ಟಿದೆ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment