ಶಿವಮೊಗ್ಗದಲ್ಲಿ ಅರ್ಚಕನ ಮೇಲೆ ಕಲ್ಲು ಎತ್ತಿ ಹಾಕಲು ಯತ್ನ, ಬಹುದೂರ ಕಾರು ಹಿಂಬಾಲಿಸಿ ಆತಂಕ ಸೃಷ್ಟಿಸಿದ ಅಪರಿಚಿತರು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 ಅಕ್ಟೋಬರ್ 2021

ಅರ್ಚಕರೊಬ್ಬರ ಕಾರನ್ನು ಬೆನ್ನಟ್ಟಿದ ಅಪರಿಚಿತರು, ಅವರ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆಗೆ ಯತ್ನಿಸಿದ್ದಾರೆ. ಅಲ್ಲದೆ ಅರ್ಚಕರ ಮೊಬೈಲ್ ಫೋನನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಹೊಳೆಹೊನ್ನೂರು ನಿವಾಸಿ ಗುರುಮೂರ್ತಯ್ಯ ಅವರ ಕಾರನ್ನು ಬಹುದೂರ ಹಿಂಬಾಲಿಸಿದ ಇಬ್ಬರು ಅಪರಿಚತರು, ಅವರ ಹತ್ಯೆಗೆ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಏನಿದು ಘಟನೆ?

ದಸರಾ ಹಿನ್ನೆಲೆ ಹಳೆ ಮಂಡ್ಲಿಯ ವೀರಭದ್ರೇಶ್ವರ ದೇಸ್ಥಾನದಲ್ಲಿ ಪೂಜೆ ಆಯೋಜಿಸಲಾಗಿತ್ತು. ಇದಕ್ಕಾಗಿ ಸಿದ್ಧತೆಗಳನ್ನು ಪೂರ್ಣಗೊಳಿಸಿ ಗುರುಮೂರ್ತಯ್ಯ ಅವರು ಮನೆಗೆ ತೆರಳುತ್ತಿದ್ದರು. ಆಗ ಎನ್.ಟಿ.ರಸ್ತೆಯ ಅಮೃತ್ ರೈಸ್ ಮಿಲ್ ಬಳಿ ಇಬ್ಬರು ಅಪರಿಚಿತರು ಗುರುಮೂರ್ತಯ್ಯ ಅವರ ಕಾರನ್ನು ಅಡ್ಡಗಟ್ಟಿದ್ದಾರೆ. ಬಾರ್’ನಲ್ಲಿ ನಮ್ಮ ಮೇಲೆ ಹಲ್ಲೆ ಮಾಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಆತಂಕಗೊಂಡ ಗುರುಮೂರ್ತಯ್ಯ ಅವರು ಕಾರನ್ನು ಕಲ್ಲೂರು ಮಂಡ್ಲಿ ಕಡೆಗೆ ಕಾರು ತಿರುಗಿಸಿದ್ದಾರೆ. ಇಬ್ಬರು ಅಪರಿಚಿತರು ಗುರುಮೂರ್ತಯ್ಯ ಅವರ ಕಾರನ್ನು ಹಿಂಬಾಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ADVT JULY NANJAPPA HOSPITAL HOME LAB TESTING

ಚಾಕು ತೋರಿಸಿ ಬೆದರಿಕೆ

ಸಮೀಪದ ಅಂಗಡಿಯೊಂದರ ಬಳಿ ಜನರು ಇದ್ದುದರಿಂದ ಗುರುಮೂರ್ತಯ್ಯ ಅವರು ಕಾರು ನಿಲ್ಲಿಸಿ ನೆರವಿಗೆ ಮನವಿ ಮಾಡಿದ್ದಾರೆ. ಅಷ್ಟು ಹೊತ್ತಿಗೆ ಹತ್ತಿರ ಬಂದ ಅಪರಿಚಿತರು ಚಾಕು ತೋರಿಸಿ ಬೆದರಿಕೆ ಒಡ್ಡಿದ್ದಾರೆ. ಕಾಲ್ಲು ಎತ್ತಿ ಹಾಕಲು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ವೇಳೆ ಅಪರಿಚಿತರು ಗುರುಮೂರ್ತಯ್ಯ ಅವರ ಮೊಬೈಲ್ ಕಸಿದುಕೊಂಡಿದ್ದಾರೆ. ಕೂಡಲೆ ಕಾರು ಚಲಾಯಿಸಿಕೊಂಡು ಗುರುಮೂರ್ತಯ್ಯ ಅವರು ಸ್ಥಳದಿಂದ ಪರಾರಿಯಾಗಿದ್ದು, ಸಮೀಪದಲ್ಲೇ ಇದ್ದ ಅವರ ಮಾವನ ಮನೆಗೆ ಬಂದು ತಲುಪಿದ್ದಾರೆ.

1632381434119645 4

ಹಿಂಬಾಲಿಸಿ ಬಂದ ಅಪರಿಚಿತರು ಗುರುಮೂರ್ತಯ್ಯ ಅವರ ಮಾವನ ಮನೆ ಬಾಗಿಲು ತೆಗೆಸಲು ಯತ್ನಿಸಿದ್ದಾರೆ. ಕೆಲ ಹೊತ್ತಿನ ಬಳಿಕ ಸ್ಥಳದಿಂದ ತೆರಳಿದ್ದಾರೆ. ಬಹು ಹೊತ್ತಿನ ಬಳಿಕ ಬಾಗಿಲು ತೆಗೆದು ನೋಡಿದಾಗ ಸಮೀಪದಲ್ಲೇ ಬೈಕ್ ನಿಂತಿತ್ತು. ಆದರೆ ಅಪರಿಚಿತರು ತೆರಳಿದ್ದರು.

ಈ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

AVvXsEi8Ac5ZsMIgS4Jz30esQXnANsyqm9IIwg nufI lektr jUlKUuz2As55HIMKzaVCSA mvi3ziJYrT6bh95Gghl41xeUHT4DKu4p30aRUJoWqJ283zKAkt4M4 uZKs5Mhybj YH8TOh0wmuu1WMMkIOKf4JU7gM IC2 ZFBa4 KlGL6c0GU9JI9z46Bw=s1466

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್ ಮೂಲಕ ಸುದ್ದಿಗಾಗಿ 7411700200

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : October 13, 2021

ತೀರ್ಥಹಳ್ಳಿಯ ಕುಡುವಳ್ಳಿಯಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಸಚಿನ್‌ ಅಂತ್ಯಕ್ರಿಯೆ

ತೀರ್ಥಹಳ್ಳಿಯ ಕುಡುವಳ್ಳಿಯಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಸಚಿನ್‌ ಅಂತ್ಯಕ್ರಿಯೆ

ಇಂದಿನ ಪಂಚಾಂಗ, ಇವತ್ತು ಶುಭ ಸಮಯ ಎಷ್ಟೊತ್ತಿಗಿದೆ? ದಿನ ನಕ್ಷತ್ರ ಯಾವುದು?

ಇಂದಿನ ಪಂಚಾಂಗ, ಇವತ್ತು ಶುಭ ಸಮಯ ಎಷ್ಟೊತ್ತಿಗಿದೆ? ದಿನ ನಕ್ಷತ್ರ ಯಾವುದು?

ಶಿವಮೊಗ್ಗ ಜಿಲ್ಲೆಯ ರೈತರ ಮಕ್ಕಳಿಗೆ 10 ತಿಂಗಳು ತರಬೇತಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಶಿವಮೊಗ್ಗ ಜಿಲ್ಲೆಯ ರೈತರ ಮಕ್ಕಳಿಗೆ 10 ತಿಂಗಳು ತರಬೇತಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಹೊಂಬುಜದಲ್ಲಿ ಕುಂಕುಮೋತ್ಸವದ ಓಕಳಿಯಲ್ಲಿ ಮಿಂದೆದ್ದ ಭಕ್ತರು

ಹೊಂಬುಜದಲ್ಲಿ ಕುಂಕುಮೋತ್ಸವದ ಓಕಳಿಯಲ್ಲಿ ಮಿಂದೆದ್ದ ಭಕ್ತರು

ರೈಲಿಗೆ ಸಿಲುಕಿ 74 ವರ್ಷದ ವ್ಯಕ್ತಿ ಸಾವು, ಹೇಗಾಯ್ತು ಘಟನೆ?

ರೈಲಿಗೆ ಸಿಲುಕಿ 74 ವರ್ಷದ ವ್ಯಕ್ತಿ ಸಾವು, ಹೇಗಾಯ್ತು ಘಟನೆ?

ದ್ವಿತೀಯ ಪಿಯುಸಿ ಉತ್ತರಪತ್ರಿಕೆ ಮೌಲ್ಯಮಾಪನ ಬಹಿಷ್ಕರಿಸುವ ಎಚ್ಚರಿಕೆ, ಕಾರಣವೇನು?

ದ್ವಿತೀಯ ಪಿಯುಸಿ ಉತ್ತರಪತ್ರಿಕೆ ಮೌಲ್ಯಮಾಪನ ಬಹಿಷ್ಕರಿಸುವ ಎಚ್ಚರಿಕೆ, ಕಾರಣವೇನು?

ನಿಧಿ ಆಪ್ಕೆ ನಿಕಟ್ 2.0, ತೀರ್ಥಹಳ್ಳಿ ಮತ್ತು ದಾವಣಗೆರೆಯಲ್ಲಿ ಮಹತ್ವದ ಕಾರ್ಯಕ್ರಮ

ನಿಧಿ ಆಪ್ಕೆ ನಿಕಟ್ 2.0, ತೀರ್ಥಹಳ್ಳಿ ಮತ್ತು ದಾವಣಗೆರೆಯಲ್ಲಿ ಮಹತ್ವದ ಕಾರ್ಯಕ್ರಮ

ಶಿವಮೊಗ್ಗದಲ್ಲಿ ಸಾಕು ನಾಯಿ ವಿಚಾರಕ್ಕೆ ಶುರುವಾದ ಕಿರಿಕ್, ಹಲ್ಲು ಮುರಿಯುವ ಹಂತಕ್ಕೆ ಹೋಯ್ತು

ಶಿವಮೊಗ್ಗದಲ್ಲಿ ಸಾಕು ನಾಯಿ ವಿಚಾರಕ್ಕೆ ಶುರುವಾದ ಕಿರಿಕ್, ಹಲ್ಲು ಮುರಿಯುವ ಹಂತಕ್ಕೆ ಹೋಯ್ತು

ಸಿಲಿಂಡರ್ ಬುಕ್ಕಿಂಗ್, ಶಿವಮೊಗ್ಗದಲ್ಲಿ ಸಹಾಯವಾಣಿ ಆರಂಭ, ಇಲ್ಲಿವೆ ಎರಡು ನಂಬರ್‌

ಸಿಲಿಂಡರ್ ಬುಕ್ಕಿಂಗ್, ಶಿವಮೊಗ್ಗದಲ್ಲಿ ಸಹಾಯವಾಣಿ ಆರಂಭ, ಇಲ್ಲಿವೆ ಎರಡು ನಂಬರ್‌

ಶಿವಮೊಗ್ಗದಲ್ಲಿ ಅಬಕಾರಿ ಇಲಾಖೆಯಿಂದ ವಾಹನಗಳ ಹರಾಜು, ಯಾವಾಗ?

ಶಿವಮೊಗ್ಗದಲ್ಲಿ ಅಬಕಾರಿ ಇಲಾಖೆಯಿಂದ ವಾಹನಗಳ ಹರಾಜು, ಯಾವಾಗ?

Leave a Comment