ಇನ್ನೊಬ್ಬರ ತಪ್ಪು ಹುಡುಕಲು ತುಂಬಾ ಬುದ್ದಿವಂತಿಕೆ ಬೇಕಾಗಿಲ್ಲ. ಇನ್ನೊಬ್ಬರ ಒಳ್ಳೆಯತನ ಮೆಚ್ಚಿಕೊಳ್ಳಲು ದೊಡ್ಡ ಹೃದಯ ಬೇಕು.
ಮೇಷ
ದಿನಚರಿ ಬದಲಾವಣೆ ಮಾಡಿಕೊಳ್ಳಬೇಕು. ಕಷ್ಟವಾದರೂ ಅದಕ್ಕೆ ಹೊಂದಿಕೊಳ್ಳಬೇಕು. ಗುರು ಹಿರಿಯರಲ್ಲಿ ಗೌರವ ತೋರಿಸಿ. ವ್ಯವಹಾರದ ಸಂದರ್ಭ ಎಚ್ಚರ ವಹಿಸಿ.
![]() |
ವೃಷಭ
ಮುಜುಗರದ ಕಾರಣಕ್ಕೆ ಉತ್ತಮ ಅವಕಾಶ ಕೈತಪ್ಪಲಿದೆ. ಪರರನ್ನು ಪೀಡಿಸುವ ಜನರ ಜೊತೆಗಿನ ಸಂಭಾಷಣೆಯಿಂದ ಪ್ರಯೋಜನ ಆಗುವುದಿಲ್ಲ.
ಮಿಥುನ
ಮಾಡಿದ ಕೆಲಸದಲ್ಲಿ ಗುಣಮಟ್ಟದ ಕೊರತೆಯಿಂದ ಮನಸಿಗೆ ಸಮಾಧನ ಅನಿಸುವುದಿಲ್ಲ. ಪ್ರಚೋದನೆಗೆ ಒಳಗಾಗದೆ ಉತ್ತಮವಾಗಿ ಕೆಲಸ ಮಾಡಿ.
ಕರ್ಕಾಟಕ
ಕನಸನ್ನು ನನಸು ಮಾಡಿಕೊಳ್ಳುವ ಭರದಲ್ಲಿ ಹಣ ವ್ಯಯ ಮಾಡದಿರಿ. ವ್ಯವಸಾಯದಿಂದ ಹೆಚ್ಚು ಆದಾಯ ಕಂಡುಕೊಳ್ಳುವಿರಿ.
ಸಿಂಹ
ಸಿಹಿ ತಿಂಡಿ, ತಿನುಸುಗಳಿಂದ ದೂರವಿರಿ. ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿರುವವರಿಗೆ ಉತ್ತಮ ಅವಕಾಶವಿದೆ.
ಕನ್ಯಾ
ಮನೆ ಕಾರ್ಯಕ್ರಮದ ಕಾರಣಕ್ಕೆ ನಿತ್ಯದ ವೇಳಾಪಟ್ಟಿ ಬದಲಾಗಲಿದೆ. ನಿದ್ರಾಹೀನತೆ ಸಮಸ್ಯೆಯಿಂದ ಕೆಲಸದ ಸ್ಥಳದಲ್ಲಿ ಸಮಸ್ಯೆಯಾಗಲಿದೆ.
ತುಲಾ
ಉದ್ಯೋಗದಲ್ಲಿ ನಿರೀಕ್ಷಿತ ಫಲಿತಾಂಶಕ್ಕಾಗಿ ಹರಸಾಹಸ ಪಡಬೇಕಾಗುತ್ತದೆ. ಯಾವುದೆ ವಿಷಯದಲ್ಲಿ ಅಸಮರ್ಪಕ ನಿರ್ಧಾರಗಳನ್ನು ಕೈಗೊಳ್ಳದಿರಿ.
ವೃಶ್ಚಿಕ
ದೇವರ ಅನುಗ್ರಹದಿಂದ ಜನ ಮತ್ತು ಧನ ಸಹಾಯ ದೊರೆಯಲಿದೆ. ಸ್ವ ಉದ್ಯೋಗಿಗಳಿಗೆ ಅನುಕೂಲ.
ಧನು
ವಿದ್ಯಾಭ್ಯಾಸದ ಖರ್ಚು, ವೆಚ್ಚ ಹೆಚ್ಚಲಿದೆ. ಕುಟುಂಬದಲ್ಲಿ ಆರ್ಥಿಕ ಸಮಸ್ಯೆ. ಸಂಜೆ ವೇಳೆಗೆ ಸಂತೋಷದ ಸುದ್ದಿ ದೊರೆಯಲಿದೆ.
ಮಕರ
ಮಕ್ಕಳಿಗಾಗಿ ತ್ಯಾಗ ಮಾಡಬೇಕು. ನಾನಾ ಕಾರಣಕ್ಕೆ ಮನಸಿನ ನೆಮ್ಮದಿ ಹಾಳಾಗಲಿದೆ. ಸಹೋದರ ಸಂಬಂಧಿಯ ದುಃಖಕ್ಕೆ ಹೆಗಲಾಗುವಿರಿ.
ಕುಂಭ
ಇತರರ ಸಂತೋಷಕ್ಕಾಗಿ ನಿಮ್ಮ ಶಕ್ತಿ ವ್ಯಯಿಸಬೇಡಿ. ವಿದ್ಯುತ್ ಉಪಕರಣ ಮಾರಾಟದಿಂದ ಲಾಭ. ನೈಸರ್ಗಿಕ ಸಂಪನ್ಮೂಲ ಸದ್ಬಳಕೆ ಮಾಡಿಕೊಳ್ಳಿ.
ಮೀನ
ಮನಸ್ಸಿಗೆ ಬಂದ ಹಾಗೆ ಹಣ ಖರ್ಚು ಮಾಡಬೇಡಿ. ಪುಸ್ತಕಗಳ ಓದಿನಿಂದ ಉತ್ತಮ ಭವಿಷ್ಯವಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200