SHIVAMOGGA LIVE NEWS | 11 DECEMBER 2023
ಮೇಷ
ತೀಕ್ಷ್ಣ ಮಾತು ಬೇರೆಯವರ ದುಃಖಕ್ಕೆ ಕಾರಣವಾಗಲಿದೆ. ಸ್ನೇಹ, ಪರೋಪಕಾರಿ ಸ್ವಭಾವದಿಂದ ಸ್ಥಾನಮಾನ ಲಭ್ಯ.
ವೃಷಭ
ವಸ್ತ್ರ ವಿನ್ಯಾಸಕರಿಗೆ ಉದ್ಯೋಗ ದೊರೆಯಲಿದೆ. ಹಣ ಉಳಿತಾಯ. ಹೂಡಿಕೆ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು.
ಮಿಥುನ
ಸಂಗಾತಿ ಜೊತೆಗಿನ ಬಹುಕಾಲದ ಸಮಸ್ಯೆ ಪರಿಹರ. ಕಾಲು ನೋವು ಬಾಧಿಸಲಿದೆ. ನಿತ್ಯ ವ್ಯಾಯಾಮದಿಂದ ಆರೋಗ್ಯ ಸುಧಾರಣೆ.
ಕರ್ಕಾಟಕ
ಗುತ್ತಿಗೆದಾರರಿಗೆ ಉತ್ತಮ ಅವಕಾಶ. ವ್ಯಾಪಾರದ ಸ್ಥಳದಲ್ಲಿ ಗ್ರಾಹಕರಿಂದ ದೂರು ಸಂಭವ. ದೂರ ಪ್ರಯಾಣದಿಂದ ಕಾರ್ಯಾನುಕೂಲ. ನೆಮ್ಮದಿ.
ಸಿಂಹ
ಪ್ರಮುಖ ಕೆಲಸದ ಮುಂದಾಳುವಾಗಿ ಯಶಸ್ವಿಯಾಗುತ್ತೀರ. ಮನಸ್ಸಿನ ನೆಮ್ಮದಿ ಕೆಡಿಸುವ ಹಲವು ಘಟನೆ ನಡೆಯಲಿದೆ.
ಕನ್ಯಾ
ಮರಗೆಲಸದವರಿಗೆ ಅವಕಾಶಗಳು ಸಿಗಲಿದೆ. ಆದರೆ ಹಲವು ಅಡ್ಡಿ ಆತಂಕ ಎದುರಾಗಲಿವೆ. ಸಾಕು ಪ್ರಾಣಿಗಳ ಆರೋಗ್ಯ ಏರುಪೇರಿನಿಂದ ಚಿಂತೆ ಉಂಟಾಗಲಿದೆ.
ತುಲಾ
ಆಸ್ತಿ ಪಾಲುದಾರಿಕೆ ವಿಚಾರದಲ್ಲಿ ಬದಲಾವಣೆ ಮಾಡಬೇಕಾದ ಪರಿಸ್ಥಿತಿ ಎದುರಾಗಲಿದೆ. ಯಾರನ್ನೂ ತಿರಸ್ಕಾರ ಭಾವದಿಂದ ನೋಡುವುದು ಉಚಿತವಲ್ಲ.
ವೃಶ್ಚಿಕ
ಕುಟುಂಬದೊಂದಿಗೆ ಖುಷಿಯ ಸಮಯ ಕಳೆಯಲಿದ್ದೀರ. ಮೊಮ್ಮಕ್ಕಳ ಭೇಟಿ ಸಂತಸ ತರುತ್ತದೆ.
ಧನು
ಪರಿಸ್ಥಿತಿಗೆ ಅನುಗುಣವಾಗಿ ಹೆಜ್ಜೆ ಹಾಕಬೇಕಿದೆ. ಮೇಲಧಿಕಾರಿಯ ಮೃಧು ಧೋರಣೆ ಕೆಲಸದಲ್ಲಿ ತೃಪ್ತಿಯ ತರಿಸಲಿದೆ.
ಮಕರ
ಸಹೋದ್ಯೋಗಿಗಳ ಮೇಲೆ ನಂಬಿಕೆ ಮೂಡುವುದಿಲ್ಲ. ಕೆಲಸದ ಒತ್ತಡ ಇರುವುದಿಲ್ಲ. ಸಂಗಡಿಗರ ಜೊತೆ ಸಂತೋಷದ ಕ್ಷಣ ಕಳೆಯುವಿರಿ.
ಕುಂಭ
ಅನಾವಶ್ಯಕ ಆಲೋಚನೆಯಿಂದ ಆರೋಗ್ಯ ಸಮಸ್ಯೆ ವೃದ್ಧಿ. ಧನ ಲಾಭ ಉಂಟಾಗಲಿದೆ.
ಮೀನ
ವೃತ್ತಿಯಲ್ಲಿ ಪೈಪೋಟಿಯಿಂದ ಒತ್ತಡ. ದೊಡ್ಡ ಸಂಸ್ಥೆಯಲ್ಲಿ ಉದ್ಯೋಗ ಲಭಿಸುವ ಸಾಧ್ಯತೆ.
ಇದನ್ನೂ ಓದಿ – ಜನ ಶತಾಬ್ದಿ, ಇಂಟರ್‌ಸಿಟಿ ವಿರುದ್ಧ ದೂರು, ಬಳಕೆದಾರರ ಸಭೆಯಲ್ಲಿ ಏನೇನೆಲ್ಲ ಚರ್ಚೆಯಾಯ್ತು? ಇಲ್ಲಿದೆ 7 ಪಾಯಿಂಟ್
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200