ಮೇಷ
ನೀವು ಬಯಸಿದ್ದು ನಡೆಯಲಿದೆ. ವೃತ್ತಿಯಲ್ಲಿ ಯಶಸ್ಸು. ಖಾಸಗಿ ಸಂಬಂಧ ಸುಮಧುರ. ಇಂದು ನಡೆಸುವ ಹೂಡಿಕೆ ಫಲ ನೀಡಲಿದೆ.
![]() |
ವೃಷಭ
ಹೊಸ ಗುರಿ ಇರಿಸಿಕೊಂಡಿದ್ದರೆ ಅದನ್ನು ಸಾಧಿಸುವಿರಿ. ಸಮಸ್ಯೆಯೊಂದು ಪರಿಹಾರವಾದ ನಿರಾಳತೆ. ಕೌಟುಂಬಿಕ ಸಾಮರಸ್ಯ.
ಮಿಥುನ
ಆಶಾವಾದದಿಂದ ಕಾರ್ಯ ನಿರ್ವಹಿಸುವ ಅವಕಾಶ. ನೆಗೆಟಿವ್ ಚಿಂತನೆ ನಿವಾರಣೆ. ಆತ್ಮೀಯ ವ್ಯಕ್ತಿಯ ಕುರಿತ ತಪ್ಪುಭಾವ ನೀಗುವುದು.
ಕಟಕ
ಹುರಿದುಂಬಿಸುವ ವ್ಯಕ್ತಿಗಳ ಜತೆ ಸೇರಿ. ನೆಗೆಟಿವ್ ಚಿಂತನೆ ಹರಡುವವರನ್ನು ದೂರವಿಡಿ. ಧನಲಾಭ. ಸಾಂಸಾರಿಕ ನೆಮ್ಮದಿ.
ಸಿಂಹ
ಯಾವುದೇ ಕೆಲಸ ಉತ್ಸಾಹದಿಂದ ಮಾಡುವಿರಿ. ಇಂದು ನಿಮ್ಮ ಬಳಿಗೆ ಬೇಸರ, ನಿರುತ್ಸಾಹ ಸುಳಿಯದು. ಸಂಗಾತಿಯ ಸಾಂಗತ್ಯದಿಂದ ಖುಷಿ.
ಕನ್ಯಾ
ವೇತನದಲ್ಲಿ ಹೆಚ್ಚಳ ಸಂಭವ. ಹಣದ ಹರಿವು ಹೆಚ್ಚಳ. ಕೌಟುಂಬಿಕ ಬೇಡಿಕೆ ಈಡೇರಿಸಿ. ಆಪ್ತರ ಜತೆಗಿನ ಭಿನ್ನಮತ ನಿವಾರಣೆ.
ತುಲಾ
ಸುಲಭ ಯಶಸ್ಸು. ಸಣ್ಣ ವಿಷಯವನ್ನು ದೊಡ್ಡದಾಗಿ ಹಿಗ್ಗಿಸಬೇಡಿ. ನೀವಾಗಿ ಸಮಸ್ಯೆ ತಂದುಕೊಳ್ಳದಿರಿ. ಬಂಧು ಸಹಕಾರ.
ವೃಶ್ಚಿಕ
ಕೆಟ್ಟಿರುವ ಸಂಬಂಧ ಮತ್ತೆ ಚಿಗುರಲಿದೆ. ವೃತ್ತಿಯಲ್ಲಿ ಪ್ರಗತಿ. ಆಪ್ತರ ಜತೆ ವಾಗ್ವಾದಕ್ಕೆ ಅವಕಾಶ ನೀಡದಿರಿ. ಅನವಶ್ಯ ಖರ್ಚು ಒದಗುವುದು.
ಧನು
ಸಂತೋಷ, ಬೇಸರ ಎರಡೂ ಸೇರಿದ ದಿನ. ದುಡುಕಿನ ನಿರ್ಧಾರ ಹಾನಿ ತಂದೀತು. ಕೌಟುಂಬಿಕ ವಾಗ್ವಾದ. ಸಂಜೆ ವೇಳೆಗೆ ಹರ್ಷೋಲ್ಲಾಸ.
ಮಕರ
ಬಯಸಿದ ಗುರಿ ಸಾಧಿಸಲು ಬುದ್ಧಿಮತ್ತೆ ಉಪಯೋಗಿಸಿ. ಪ್ರಯತ್ನ ಮಾಡದೇ ಪ್ರತಿಫಲ ನಿರೀಕ್ಷಿಸಬೇಡಿ. ಕೌಟುಂಬಿಕ ಉದ್ವಿಗ್ನತೆ ಸಂಭವ.
ಕುಂಭ
ಈ ದಿನ ನಿಮ್ಮ ಬದುಕಲ್ಲಿ ಕೆಲವು ಬದಲಾವಣೆ ತಂದೀತು. ಸಂತೋಷ ಕೆಡಿಸುವ ಬೆಳವಣಿಗೆ. ಅಭದ್ರತೆಯ ಭಾವನೆ ಕಾಡಲಿದೆ.

ಮೀನ
ಇಷ್ಟವಿಲ್ಲದ ಕಾರ್ಯ ಮಾಡಲು ಹೋಗದಿರಿ. ಮತ್ತೆ ಪಶ್ಚಾತ್ತಾಪ ಪಡಬೇಕಾದೀತು. ಆಹಾರ ಕ್ಲಪ್ತ ಕಾಲದಲ್ಲಿ ಸ್ವೀಕರಿಸಿ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಬಿಗಿ ಬಂದೋಬಸ್ತ್‌ನಲ್ಲಿ ವಿವಾದಿತ ಬೇಲಿ ತೆರವು, ಅಂಗಡಿ ಮುಂಗಟ್ಟು ಬಂದ್
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200