ದಿನ ಭವಿಷ್ಯ | 2 ಅಕ್ಟೋಬರ್ 2024 | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

DINA BHAVISHYA, 2 OCTOBER 2024

ಮೇಷ : ಆರೋಗ್ಯದ ಬಗ್ಗೆ ಗಮನ ಅಗತ್ಯ. ಅನಗತ್ಯ ಖರ್ಚಿಗೆ ದಾರಿ ಇದೆ. ಮನೆಯಲ್ಲಿ ಸ್ವಲ್ಪ ನೆಮ್ಮದಿ. ಗಣೇಶನಿಗೆ ಪಂಚಾಮೃತ ಅಭಿಷೇಕ ಮಾಡಿಸಿ.

ಶುಭ ಸಂಖ್ಯೆ: 1-5-8-9 ಬಣ್ಣ : ಕೆಂಪು-ಬಿಳಿ-ಹಳದಿ

ವೃಷಭ : ಬುದ್ದಿ ಬಲೋ ಯಶೋ ಧೈರ್ಯಃ. ನಿಮ್ಮ ಬುದ್ಧಿಯಿಂದ ಧೈರ್ಯದಿಂದ ಒಳ್ಳೆಯದಿದೆ. ಪಂಚಮದ ಕಾಟ. ಮಕ್ಕಳು ಕಿರಿಕಿರಿ ಮಾಡಿಯಾರು. ಆಲಸ್ಯದಿಂದ ಉದ್ಯೋಗ ತೊಂದರೆ. ಆಂಜನೇಯನಿಗೆ ಪೂಜೆ ಮಾಡಿಸಿ.

ಶುಭ ಸಂಖ್ಯೆ : 2-7-10-11 ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು

ಮಿಥುನ : ಮಾತಿನಿಂದ ಕೆಲಸವಾಗುವುದಿಲ್ಲ. ಅಂಗಾರಕನ ಅಡಚಣೆ. ಕೈಗೆ ಬಂದ ತುತ್ತು ಬಾಯಿಗೆ ಬರುವುದು ಕಷ್ಟ. ಏಳಿಗೆಗಾಗಿ ನಾಗನಿಗೆ ಹರಿದ್ರಾಭಿಷೇಕ ಮಾಡಿಸಿ.

ಶುಭ ಸಂಖ್ಯೆ : 5-6-10 ಬಣ್ಣ : ಹಳದಿ-ಕೆಂಪು-ಹಸಿರು

ಕರ್ಕ : ಚಂದ್ರ ಮಿತ್ರನೊಂದಿಗೂ ಶತೃವೊಂದಿಗೂ ಇದ್ದಾನೆ. ಯೋಚಿಸಿ. ಎದುರು ಇದ್ದವರು ಮಿತ್ರರೂ ಹೌದು ಶತೃವೂ ಹೌದು. ಮಾತು ಕಡಿಮೆ ಇರಲಿ. ಆರೋಗ್ಯ ಉತ್ತಮವಿದೆ. ನಾಗನ ಆರಾಧನೆ ಮಾಡಿ.

ಶುಭ ಸಂಖ್ಯೆ 4-5-1 ಬಣ್ಣ : ಬಿಳಿ-ಕೆಂಪು-ಕೇಸರಿ

ಸಿಂಹ : ದೇಹಾರೋಗ್ಯ ಕಡಿಮೆ. ಕೆಲಸದ ಒತ್ತಡ. ರಾಹು ಕಿರಿಕಿರಿ ಮಾಡುತ್ತಾನೆ. ಯೋಚನಾ ಶಕ್ತಿ ಕಡಿಮೆ. ನಾಗನಿಗೆ ಪೂಜೆ ಮಾಡಿ.

ಶುಭ ಸಂಖ್ಯೆ : 5-6-9-11 ಬಣ್ಣ : ಕೆಂಪು-ಬಿಳಿ

SANDESH-UPADHYA-DINA-BHAVISHYA-SHIMOGA

ಕನ್ಯಾ : ಒತ್ತಡ ಬಹಳವಿದೆ. ಅಮಾವಾಸ್ಯೆ ಬೇರೆ. ಗಣೇಶನಿಗೆ ಪಂಚಾಮೃತ ಮಾಡಿಸಿ. ಕುಲದೇವರ ಪೂಜೆ ಮಾಡಿ. ಮನಸ್ಸಿಗೆ ನೋವು. ಆತಂಕ. ಎಲ್ಲಾ ಕಡಿಮೆ ಆಗುತ್ತದೆ.

ಶುಭ ಸಂಖ್ಯೆ : 7-10-11-03 ಬಣ್ಣ : ಕೆಂಪು-ನೀಲಿ-ಬೂದು

ತುಲಾ : ಅಂದುಕೊಂಡ ಕೆಲಸ ಮುಗಿಯುತ್ತದೆ. ದೇವರ ದಯೆಯಿದೆ. ಆರರ ರಾಹು ನೋವು ನೀಡುತ್ತಾನೆ. ಅಧಿಕ ಖರ್ಚು.

ಶುಭ ಸಂಖ್ಯೆ : 8-9-4 ಬಣ್ಣ : ನೀಲಿ-ಬಿಳಿ-ಬೂದು

ವೃಶ್ಚಿಕ : ಎಂಟರಲ್ಲಿ ಕುಜ ಬಂಟನಂತೆ ಕೆಲಸ ಮಾಡಿಸುತ್ತಾನೆ. ಮಾತೇ ಬಂಡವಾಳ. ಲಾಭವಿಲ್ಲದಿದ್ದರೂ ಅರಾಮಾದ ಜೀವನ ಇಂದು. ಗಣೇಶನಿಗೆ 21 ನಮಸ್ಕಾರ ಮಾಡಿ.

ಶುಭ ಸಂಖ್ಯೆ : 8-1-5 ಬಣ್ಣ : ಕೆಂಪು-ಬಿಳಿ-ಕೇಸರಿ

ಧನು : ಸಹೋದರ ಸಮಾಗಮ. ಹಿತವಿದೆ. ತಾಯಿಯ ಆರೋಗ್ಯದ ಬಗ್ಗೆ ಗಮನವಿರಲಿ. ಅದೃಷ್ಟ ಸ್ವಲ್ಪ. ಸೂರ್ಯ ದೇವರ ಪ್ರಾರ್ಥನೆ ಮಾಡಿ.

ಶುಭಸಂಖ್ಯೆ : 9-12-04 ಬಣ್ಣ : ಕೇಸರಿ-ಬಿಳಿ

ಮಕರ : ಭಾಗ್ಯೋದಯ ನಷ್ಟ. ಆರೋಗ್ಯ ಉತ್ತಮ. ಮನೆಯಲ್ಲಿ ಅನುಕೂಲಕರ ವಾತಾವರಣ.. ಹುರಳಿ ದಾನ ಮಾಡಿ.

ಶುಭ ಸಂಖ್ಯೆ : 10-11-02 ಬಣ್ಣ : ನೀಲಿ-ಬೂದು-ಕಪ್ಪು

ಕುಂಭ : ಆರ್ಥಿಕ ಚೇತರಿಕೆ ಕಷ್ಟ. ಅಷ್ಟಮದ ಕೇತುವಿನಿಂದ ತೊಂದರೆ ಜೊತೆ ಮನಸ್ತಾಪ ಇದೆ. ಗುರು ದೃಷ್ಟಿ ಇದೆ. ಈಶ್ವರನ ಪ್ರಾರ್ಥನೆ ಮಾಡಿ.

ಶುಭ ಸಂಖ್ಯೆ : 11-03-06 ಬಣ್ಣ : ನೀಲಿ-ಬೂದು

ಮೀನ : ಯೋಚನೆ ದಾರಿ ತಪ್ಪಿಸುತ್ತದೆ. ಅನ್ಯರ ಸಹವಾಸ ಬೇಡ. ಮನೆಯೊಡತಿಯೊಂದಿಗೆ ವಾದ. ನಾಗನ ಆರಾಧನೆ ಮಾಡಿ.

ಶುಭ ಸಂಖ್ಯೆ : 12-1-8-5 ಬಣ್ಣ : ಕೇಸರಿ-ಬಿಳಿ-ಕೆಂಪು

ಇದನ್ನೂ ಓದಿ » ಶಿವಮೊಗ್ಗದಲ್ಲಿ ಬೆಳ್ಳುಳ್ಳಿಗಾಗಿ ಅಧಿಕಾರಿಗಳ ದಾಳಿ, ಸ್ಯಾಂಪಲ್‌ ಸಂಗ್ರಹ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment