DINA BHAVISHYA, 20 AUGUST 2024
ಮೇಷ : ಮನಸ್ಸಿನ ಹಿಡಿತವಿರಲಿ. ಆರೋಗ್ಯದ ಬಗ್ಗೆ ಗಮನ ಅಗತ್ಯ. ಆರ್ಥಿಕ ಪರಿಸ್ಥಿತಿ ಉತ್ತಮ. ಗಣೇಶನನ್ನು ನೆನಯಿರಿ. ಶುಭ ಸಂಖ್ಯೆ:- 1-5-8-9
![]() |
ವೃಷಭ : ಬುದ್ಧಿವಂತಿಕೆಯಿಂದ ಕೆಲಸ ನಿರ್ವಹಿಸಿ. ಬಂಧುಗಳಿಂದ ತೊಂದರೆ. ಉದ್ಯೋಗದಲ್ಲಿ ಹೆಚ್ಚಿನ ಗಮನ ನೀಡಿ. ಲಾಭದ ರಾಹು ಪ್ರಯೋಜನವಿಲ್ಲ. ಗುರು ಆರಾಧನೆಯಿಂದ ನೆಮ್ಮದಿ. ಸುಬ್ರಹ್ಮಣ್ಯ ಸ್ತೋತ್ರ ಪಠಿಸಿ. ಶುಭ ಸಂಖ್ಯೆ 2-7-10-11
ಮಿಥುನ : ರಾಶಿಯ ಮಂಗಳ ಶುಭಕರನಾಗಿದ್ದರೂ ಹಣ ವ್ಯಯ ಹೆಚ್ಚಾಗಲಿದೆ. ಭಾಗ್ಯೋದಯ ಕಣ್ಣಿಗೆ ಕಾಣ ಸಿಗದು. ಹತ್ತರ ರಾಹುವಿನಿಂದ ಖರ್ಚು. ಕೆಲಸದ ಕಡೆ ಬೇಸರ ಉಂಟಾದಿತು. ಈದಿನ ನಾಗನಿಗೆ ಪೂಜೆ ಅಗತ್ಯಮಾಡಿ. ಶುಭವಾಗಲಿದೆ. ಶುಭ ಸಂಖ್ಯೆ : 5-6-10
ಕರ್ಕ : ಅನಗತ್ಯ ಮಾತಿನಿಂದ ಮನಸ್ತಾಪ. ಎಂಟರ ಶನಿ ಒಂಬತ್ತರ ರಾಹುವಿನಿಂದ ಬಹಳನೇ ತೊಂದರೆ. ಆದರೆ ಎರಡರ ರವಿ ಚಂದ್ರರಿಂದ ಆರ್ಥಿಕ ನೆಮ್ಮದಿ. ಈಶ್ವರನನ್ನು ನೆನಯಿರಿ. ಶುಭ ಸಂಖ್ಯೇ 4-5-1
ಸಿಂಹ : ರಾಶಿ ಪ್ರಭಲದಿಂದ ಅಂದುಕೊಂಡ ಕಾರ್ಯದಲ್ಲಿ ಸಫಲತೆ. ಆದರೆ ಹನ್ನೆರಡರ ಬುಧನಿಂದ ಧನ ವ್ಯಯ ಹೆಚ್ಚಾಗಲಿದೆ. ವಿಷ್ಣು ಸಹಸ್ರನಾಮ ಪಠಿಸಿ. ಕುಲದೇವರನ್ನು ಆರಾಧಿಸಿ. ಶುಭ ಸಂಖ್ಯೆ : 5-6-9-11
ಕನ್ಯಾ : ರಾಶಿಯ ಕೇತು ಸಪ್ತಮದ ರಾಹು ಹಿನ್ನಡೆ ಅನುಭವಿಸುವಂತೆ ಮಾಡುತ್ತಾನೆ. ಆದರೆ ವ್ಯಯದ ರವಿ ಸಮಾಧಾನ ನೀಡಿ ಆರೋಗ್ಯದಲ್ಲಿ ಉತ್ತಮ ಬೆಳವಣಿಗೆ. ಈದಿನ ಗಣೇಶ ಪೂಜೆಯಿಂದ ಯತ್ನ ಕಾರ್ಯ ಸಿದ್ಧಿ. ಶುಭ ಸಂಖ್ಯೆ : 7-10-11-03
ಇದನ್ನೂ ಓದಿ ⇒ ರೀಲ್ಸ್ ಮಾಡಿದರೆ ಅಂಗಡಿಗೆ ಹೆಚ್ಚಾಗ್ತಾರೆ ಗ್ರಾಹಕರು, ಇಲ್ಲಿದೆ ಶಿವಮೊಗ್ಗ ಜಿಲ್ಲೆಯ ಬೆಸ್ಟ್ ಉದಾಹರಣೆಗಳು
ತುಲಾ : ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ ನಿಮ್ಮ ನಿರ್ಧಾರದಂತೆ ಪಂಚಮದ ಶನಿಯಿಂದ ಅನುಕೂಲ. ಲಾಭದ ರವಿ ಹಿತ ನೀಡುತ್ತಾನೆ. ಈದಿನ ಆದಿತ್ಯ ಹೃದಯ ಓದಿ. ಶುಭ ಸಂಖ್ಯೆ : 8-9-4
ವೃಶ್ಚಿಕ : ಕುಟುಂಬದ ಕೆಲಸದಲ್ಲಿ ಸ್ಥಿರತೆ ಐದರ ರಾಹು ಅನಾನುಕೂಲ ನೀಡಲಿದ್ದು. ಕೆಲಸದಲ್ಲಿ ಉತ್ತಮ ಬೆಳವಣಿಗೆ ನೀಡಲಿದೆ. ನವಗ್ರಹ ಪೂಜಿಸಿ ಉತ್ತಮವಾಗುತ್ತದೆ. ಶುಭ ಸಂಖ್ಯೆ : 8-1-5
ಇದನ್ನೂ ಓದಿ ⇒ ಶಿವಮೊಗ್ಗ ಸಿಟಿಯ 15 ಕಿ.ಮೀ ವ್ಯಾಪ್ತಿಯಲ್ಲಿವೆ 10 ಪ್ರಮುಖ ಪಿಕ್ನಿಕ್ ತಾಣಗಳು, ಇಲ್ಲಿದೆ ಲಿಸ್ಟ್
ಧನು : ನಿಮ್ಮ ಸೋಮಾರಿತನ ನಿಮಗೆ ತೊಂದರೆ. ಬುದ್ಧಿವಂತರಾದ ನೀವು ಆಲಸ್ಯ ಬಿಡಿ. ದೇವರು ನಿಮ್ಮ ಕಡೆ ಇದ್ದಾನೆ. ಯತ್ನ ಕಾರ್ಯದಲ್ಲಿ ಫಲ ಉತ್ತಮ. ಈದಿನ ಗುರು ಆರಾಧನೆ ಮಾಡಿ. ಶುಭ ಸಂಖ್ಯೆ : 9-12-04
ಮಕರ : ರಾಶಿಯ ಶನಿ ಮನೆಯಲ್ಲೇ ಇದ್ದು ಆರ್ಥಿಕ ಚೇತರಿಕೆ ನೀಡಿದ್ದಾನೆ. ಸಂಗಾತಿಯಿಂದ ಬೇಸರ. ಭಾಗ್ಯೋದಯ ಬೇಕಾದರೆ ಈದಿನ ಗಣೇಶನ್ನು ಪೂಜಿಸಿ. ಶುಭ ಸಂಖ್ಯೆ : 10-11-02
ಇದನ್ನೂ ಓದಿ ⇒ ಶಿವಮೊಗ್ಗದ ಶಿವಪ್ಪನಾಯಕ ಪ್ರತಿಮೆ ಮುಂದೆ ರಾತ್ರೋರಾತ್ರಿ ಪ್ರತ್ಯಕ್ಷವಾಗುತ್ತೆ ಫಲಕ, ಇದನ್ನು ಹಾಕೋದ್ಯಾರು ಗೊತ್ತಾ?
ಕುಂಭ : ಮಾಡಿದ ಕೆಲಸ ಪೂರ್ಣ ಆಗುವುದು ಕಷ್ಟ. ಹಣದ ಅಡಚಣೆ ಬರಬಹುದು. ವೈರಿಗಳ ಕಾಟ. ಖರ್ಚು ಕಡಿಮೆ. ಈಶ್ವರನ ಪೂಜೆಯಿಂದ ಫಲ ಜಾಸ್ತಿ. ಶುಭ ಸಂಖ್ಯೆ : 11-03-06
ಮೀನ : ಲಗ್ನದ ರಾಹು ನೆಮ್ಮದಿ ತೆಗೆದುಕೂಂಡಿದ್ದಾನೆ. ಆದರೆ ಆರೋಗ್ಯ ಉತ್ತಮ. ಅನ್ನದಾನ ಮಾಡಿ. ಫಲಪ್ರದವಾಗುತ್ತದೆ. ಶುಭ ಸಂಖ್ಯೆ : 12-1-8-5
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200