ಮೇಷ
ಕುಟುಂಬದಲ್ಲಿ ಅಸಮಾಧಾನ ಉಂಟಾಗಬಹುದು. ತಾಳ್ಮೆ ಇದ್ದರೆ ಪರಿಸ್ಥಿತಿ ಬದಲಾಗಬಹುದು. ಕಾನೂನು ಬಾಹಿರ ಚಟುವಟಿಕೆಯಿಂದ ದೂರವಿರಿ.
ವೃಷಭ
ಬಿಡುವಿಲ್ಲದ ದಿನಚರಿ ಇರುತ್ತದೆ. ನಿಮ್ಮ ಸಾಮರ್ಥ್ಯದಿಂದ ಯಾವುದೆ ಸಾಧನೆ ಸಾಧಿಸುವಿರಿ.
![]() |
ಮಿಥುನ
ನಿಮ್ಮ ಭಾವನೆಯನ್ನು ನಿಯಂತ್ರಣದಲ್ಲಿ ಇಡಿ. ನಿಮ್ಮ ನಿರ್ಧಾರ ಪದೇ ಪದೆ ಬದಲಾಗಬಹುದು. ಚಡಪಡಿಕೆ ಹೆಚ್ಚಾಗುತ್ತದೆ.
ಕರ್ಕಾಟಕ
ನಿಮ್ಮ ಗೌರವ ಮತ್ತು ಮನ್ನಣೆ ಹೆಚ್ಚಾಗುತ್ತದೆ. ಸ್ನೇಹಿತರೊಂದಿಗೆ ವಾದ ಮಾಡಬೇಡಿ. ಪರಿಸ್ಥಿತಿ ನಿಮ್ಮ ಮನಸ್ಸಿನ ವಿರುದ್ಧವಾಗಿರುತ್ತದೆ.
ಸಿಂಹ
ಇಂದು ಪರಿಸ್ಥಿತಿಯನ್ನು ಸಕಾರಾತ್ಮಕವಾಗಿ ಪ್ರಯತ್ನಿಸಿ. ನಿಮ್ಮ ಸಾಮರ್ಥ್ಯಕ್ಕಿಂತಲು ಹೆಚ್ಚಿನ ಕೆಲಸ ತೆಗೆದುಕೊಳ್ಳಲು ಆಯಾಸ ಉಂಟಾಗುತ್ತದೆ. ನಿಮ್ಮ ಆಲೋಚನೆ ಮೇಲೆ ಪರಿಣಾಮ ಉಂಟಾಗುತ್ತದೆ.
ಕನ್ಯಾ
ಇವತ್ತಿನ ದಿನಚರಿ ನಿಮ್ಮ ಮನಸ್ಸಿನ ಪ್ರಕಾರ ನಡೆಯುತ್ತದೆ. ರಾಜಕೀಯ ಅಥವಾ ಸಾಮಾಜಿಕ ಕಾರ್ಯದಲ್ಲಿ ಆಸಕ್ತಿ ಹೆಚ್ಚಾಗುತ್ತದೆ.
ತುಲಾ
ಅನುಕೂಲಕರ ಗ್ರಹಸ್ಥಾನ. ನೀವು ನಿಮ್ಮ ಗುರಿಯನ್ನು ಯೋಚಿಸಿ ಮತ್ತು ಶ್ರಮಿಸಿದರೆ ಯಶಸ್ಸಾಗುತ್ತದೆ. ಆರ್ಥಿಕ ಪರಿಸ್ಥಿತಿ ಸಮತೋಲನದಲ್ಲಿ ಇರುತ್ತದೆ.
ವೃಶ್ಚಿಕ
ತಾಳ್ಮೆಯಿಂದ ನಿಮ್ಮ ಕೆಲಸವನ್ನು ಮಾಡಿ. ಪ್ರತಿಕೂಲ ಪರಿಸ್ಥತಿಗಳಿಗೆ ಹೆದರುವ ಬದಲು ವಾಸ್ತವವನ್ನು ಎದುರಿಸಿ.
ಧನಸ್ಸು
ನಿಕಟ ಸಂಬಂಧಿಯೊಂದಿಗೆ ವಾದದ ಸಾಧ್ಯತೆ ಇದೆ. ಆದರೆ ಸಂಯಮವನ್ನು ಕಾಪಾಡಿಕೊಳ್ಳಿ. ವ್ಯಾಪಾರ ಚಟುವಟಿಕೆಯಲ್ಲಿ ಸಮಸ್ಯೆ ಇರುತ್ತದೆ.
ಮಕರ
ನಕಾರಾತ್ಮಕ ವಿಷಯಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಬಿಡಬೇಡಿ. ಬುದ್ದಿವಂತಿಕೆಯಿಂದ ಶಾಂತವಾಗಿ ವರ್ತಿಸಿ. ಮಕ್ಕಳೊಂದಿಗೆ ಸ್ವಲ್ಪ ಸಮಯ ಕಳೆಯಿರಿ.
ಕುಂಭ
ಅಪರಿಚಿತರನ್ನು ನಂಬಬೇಡಿ. ನಿಮ್ಮ ಸರಳ ಸ್ವಭಾವದ ಲಾಭವನ್ನು ಕೆಲವರು ಪಡೆಯಬಹುದು. ಹಣ ಸಹಾಯ ಮಾಡುವ ಮೊದಲು ಯೋಚಿಸಿ.
ಮೀನ
ಕ್ರಮಬದ್ಧ ದಿನಚರಿ ಇರುತ್ತದೆ. ಮಕ್ಕಳಿಂದ ಕೆಲವು ಶುಭ ಸಮಾಚಾರಗಳು ಸಿಗಬಹುದು.

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200