ಜಿಂಕೆ ಪ್ರತಿಮೆ ಬಿದ್ದು ಬಾಲಕಿ ಸಾವು
ಶಿವಮೊಗ್ಗ : ಮುದ್ದಿನಕೊಪ್ಪದ ಟ್ರೀ ಪಾರ್ಕ್ನಲ್ಲಿ ಸಿಮೆಂಟ್ ಜಿಂಕೆ ಪ್ರತಿಮೆ ಬಿದ್ದು ಆರು ವರ್ಷ ಬಾಲಕಿ ಸಾವು. ಶಿವಮೊಗ್ಗದ ನಿವಾಸಿ ಸಮೀಕ್ಷಾ (6) ಮೃತ ಬಾಲಕಿ. ಪೋಷಕರ ಜೊತೆಗೆ ಸಮೀಕ್ಷಾ ಟ್ರೀ ಪಾರ್ಕ್ಗೆ ಆಗಮಿಸಿದ್ದಳು. ಜಿಂಕೆ ಪ್ರತಿಮೆ ಬಳಿ ಆಟವಾಡುವಾಗ ಘಟನೆ ಸಂಭವಿಸಿದೆ. ಕೂಡಲೆ ಸಮೀಕ್ಷಾಳನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆತರಲಾಗಿತ್ತು. ಘಟನೆ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂದಿನ ಸುದ್ದಿ ಓದಲು ಕೆಳಗಿರುವ NEXT ಬಟನ್ ಕ್ಲಿಕ್ ಮಾಡಿ.