ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 25 APRIL 2021
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ವೀಕೆಂಡ್ ಕರ್ಫ್ಯೂ ಎರಡನೆ ದಿನದ ರಿಲ್ಯಾಕ್ಸ್ ಅವಧಿಯಲ್ಲಿ ಮೀನು ಮಾರುಕಟ್ಟೆಯಲ್ಲಿ ಭಾರಿ ಜನ ಸಂದಣಿ ಸೇರಿದೆ. ಸಾಮಾಜಿಕ ಅಂತರವಿಲ್ಲದೆ, ಮಾಸ್ಕ್ ಧರಿಸದೆ ಹಲವರು ಖರೀದಿಯಲ್ಲಿ ತೊಡಗಿದ್ದಾರೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆಯಲ್ಲಿ ಬೆಳಗ್ಗೆಯಿಂದಲೆ ಜನ ಸಂದಣಿ ಇದೆ. ಮೀನು ಖರೀದಿಗೆ ಭಾರಿ ಸಂಖ್ಯೆಯ ಜನರು ಸೇರಿದ್ದಾರೆ.
ಚಿಕನ್, ಮಟನ್ ಇಲ್ಲ
ಮಹಾವೀರ ಜಯಂತಿ ಹಿನ್ನೆಲೆ ಮಾಂಸ ಮಾರಾಟ ನಿಷೇಧಿಸಲಾಗಿದೆ. ನಗರದ ಬಹುತೇಕ ಕಡೆ ಚಿಕನ್ ಮತ್ತು ಮಟನ್ ಸ್ಟಾಲ್ಗಳು ಬಂದ್ ಆಗಿವೆ. ಹೊರ ವಲಯದಲ್ಲಿ ಕದ್ದು ಮುಚ್ಚಿ ವ್ಯಾಪಾರ ನಡೆಯುತ್ತಿದೆ. ಆದರೆ ಮೀನು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದೇ ಕಾರಣಕ್ಕೆ ಮೀನು ಮಾರುಕಟ್ಟೆಯಲ್ಲಿ ಹೆಚ್ಚು ಜನ ಸೇರಿದ್ದಾರೆ.
ಇವತ್ತು ದುಬಾರಿ ರೇಟು
ವೀಕೆಂಡ್ ಕರ್ಫ್ಯೂ ಹಿನ್ನೆಲೆ ಮಾರಾಟಗಾರರಿಗೆ ತಮ್ಮ ಬಳಿ ಇರುವ ಮೀನು ಮಾರಾಟವಾಗಬೇಕಿದೆ. ಮಾರುಕಟ್ಟೆಗೆ ಬಂದವರು ಕರ್ಫ್ಯೂ ಜಾರಿಗೆ ಮುನ್ನ ಖರೀದಿ ಮುಗಿಸಬೇಕಿದೆ. ಹಾಗಾಗಿ ಮಾರಾಟಗಾರರು ಕೇಳಿದಷ್ಟು ರೇಟಿಗೆ ಮೀನು ಖರೀದಿಸುತ್ತಿದ್ದಾರೆ. ಸಾಮಾನ್ಯ ದಿನಕ್ಕಿಂತಲೂ ಇವತ್ತು ಪ್ರತಿ ಕೆಜಿಗೆ ಐವತ್ತು, ನೂರು ನೂರು ಹೆಚ್ಚಿಗೆ ರೇಟಿದೆ ಎಂದು ಗ್ರಾಹಕರು ಆರೋಪಿಸುತ್ತಾರೆ.
ತರಕಾರಿ ಮಾರುಕಟ್ಟೆಯಲ್ಲೂ ಜನ ಜಂಗುಳಿ
ಗಾಂಧಿ ಬಜಾರ್ನ ತರಕಾರಿ ಮಾರುಕಟ್ಟೆಯಲ್ಲೂ ಜನ ಜಂಗುಳಿ ಇದೆ. ಬೆಳಗ್ಗೆಯಿಂದಲೇ ಖರೀದಿಗೆ ಜನ ಸೇರಿದ್ದಾರೆ. ಕರ್ಫ್ಯೂ ಹಿನ್ನೆಲೆ ತರಕಾರಿ ದರವು ದುಬಾರಿಯಾಗಿದೆ.
ಸಾಮಾಜಿಕ ಅಂತರದ ಪ್ರಶ್ನೆಯೇ ಇಲ್ಲ
ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರವಿಲ್ಲ. ಕೆಲವರು ಮಾಸ್ಕ್ ಧರಿಸಿಲ್ಲ. ಇದನ್ನು ಪ್ರಶ್ನಿಸಲು ಪಾಲಿಕೆ ಅಧಿಕಾರಿಗಳು ಸ್ಥಳದಲ್ಲಿಲ್ಲ. ಹತ್ತು ಗಂಟೆ ಬಳಿಕ ಕರ್ಫ್ಯೂ ಜಾರಿಯಾಗುವುದರಿಂದ ಜನರು ಗಡಿಬಿಡಿಯಲ್ಲಿ ಅಂತರ, ಮಾಸ್ಕ್ ವಿಚಾರವನ್ನೇ ಮರೆತಂತಿದೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]