ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಜುಲೈ 2020
ಶಿವಮೊಗ್ಗದಲ್ಲಿ ಇವತ್ತು ಒಂದೇ ದಿನ 58 ಮಂದಿಗೆ ಕರೋನ ಪಾಸಿಟಿವ್ ಬಂದಿದೆ. ಇದರಿಂದ ಒಟ್ಟು ಪಾಸಿಟಿವ್ ಸಂಖ್ಯೆ ಏಳುನೂರರ ಗಡಿ ದಾಟಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 702ಕ್ಕೆ ಏರಿಕೆಯಾಗಿದೆ. ಇದರು ಜನರಲ್ಲಿ ಆತಂಕ ಮೂಡಿಸಿದೆ.
381 ಟೆಸ್ಟ್, 605 ನೆಗೆಟಿವ್
ಇವತ್ತು 381 ಮಂದಿಯನ್ನು ಕರೋನ ಪರೀಕ್ಷೆಗೆ ಒಳಪಡಿಸಲಾಗಿದೆ. 605 ಸ್ಯಾಂಪಲ್‍ಗಳು ಇವತ್ತು ನೆಗೆಟಿವ್ ಬಂದಿದೆ. ಜಿಲ್ಲೆಯಲ್ಲಿ 22,601 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. 21,116 ಮಂದಿಗೆ ನೆಗೆಟಿವ್ ಬಂದಿದೆ.
ಯಾವ್ಯಾವ ತಾಲೂಕಲ್ಲಿ ಎಷ್ಟು ಸೋಂಕಿತರು?
ಇವತ್ತಿನ 58 ಸೋಂಕಿತರ ಪೈಕಿ ಶಿವಮೊಗ್ಗ ತಾಲೂಕಿನ 37, ಭದ್ರಾವತಿಯ 3, ಸಾಗರದ 4, ಶಿಕಾರಿಪುರದ 3, ಹೊಸನಗರದ 2, ತೀರ್ಥಹಳ್ಳಿಯ 1, ಸೊರಬದ 1 ಪ್ರಕರಣಗಳಿವೆ. ಬೆಂಗಳೂರಿನಿಂದ ಬಂದ 2, ದಾವಣಗೆರೆಯಂದ 3, ಚಿಕ್ಕಮಗಳೂರಿನಿಂದ ಬಂದ 2 ಪ್ರಕರಣಗಳಿವೆ.
ಒಂದೇ ದಿನ 36 ಮಂದಿ ಡಿಸ್ಚಾರ್ಜ್
ಕೋವಿಡ್ ಚಿಕಿತ್ಸೆಗೆ ಒಳಗಾಗಿದ್ದ 36 ಮಂದಿ ಇವತ್ತು ಗುಣವಾಗಿದ್ದಾರೆ. ಅವರನ್ನು ಪ್ರತ್ಯೇಕವಾಗಿ ಆಂಬುಲೆನ್ಸ್ ಮೂಲಕ ಮನೆಗೆ ಕಳುಹಿಸಲಾಗಿದೆ. ಈವರೆಗೂ ಜಿಲ್ಲೆಯಲ್ಲಿ ಒಟ್ಟು ಗುಣವಾದವರ ಸಂಖ್ಯೆ 280ಕ್ಕೆ ಏರಿಕೆಯಾಗಿದೆ.
ಮತ್ತೊಬ್ಬ ವ್ಯಕ್ತಿ ಸಾವು
ಜಿಲ್ಲೆಯಲ್ಲಿ ಇವತ್ತೂ ಕೂಡ ಮತ್ತೊಬ್ಬ ಕರೋನ ಸೋಂಕಿತ ವ್ಯಕ್ತಿ ಸಾವನ್ನಪ್ಪಿದ್ದಾರೆ. ಇದರಿಂದ ಒಟ್ಟು ಮೃತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.
ಇನ್ನೂ 409 ಮಂದಿಗೆ ಚಿಕಿತ್ಸೆ
ಜಿಲ್ಲೆಯಲ್ಲಿ ಈಗ 409 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 176 ಮಂದಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 219 ಮಂದಿಗೆ ಕೋವಿಡ್ ಕೇರ್ ಸೆಂಟರ್‍ನಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. 14 ಮಂದಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇನ್ನೂರರ ಗಡಿ ದಾಟಿದ ಕಂಟೈನ್ಮೆಂಟ್ ಜೋನ್
ಶಿವಮೊಗ್ಗ ಜಿಲ್ಲೆಯಲ್ಲಿ ಕಂಟೈನ್ಮೆಂಟ್ ಜೋನ್‍ಗಳ ಸಂಖ್ಯೆ ಹೆಚ್ಚಳವಾಗಿದೆ. ಈತನಕ 219 ಕಂಟೈನ್ಮೆಂಟ್ ಜೋನ್‍ಗಳನ್ನು ರಚಿಸಲಾಗಿದೆ. 34 ಕಂಟೈನ್ಮೆಂಟ್ ಜೋನ್‍ಗಳನ್ನು ಡಿನೋಟಿಫೈ ಮಾಡಲಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]