ಶಿವಮೊಗ್ಗ ಲೈವ್.ಕಾಂ | 5 ಜನವರಿ 2019
ಭದ್ರಾವತಿಯ ಕೂಡ್ಲಿಗೆರೆ ಗ್ರಾಮದ ಖಾಸಗಿ ಬಸ್ ನಿಲ್ದಾಣದ ಬಳಿ ಮಟ್ಕಾ ಜೂಜಾಟ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ನಾಲ್ವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧನದ ಸಂದರ್ಭ ಹಣವನ್ನು ವಶಕ್ಕೆ ಪಡೆಯಲಾಗಿದೆ. ಕೂಡ್ಲಿಗೆರೆಯ ಚಿನ್ನಪ್ಪಯ್ಯ, ಅಶೋಕ್, ತಿಲಕ್’ನಗರದ ಶಿವಣ್ಣ, ಕಾಗದ ನಗರದ ಪ್ರಸನ್ನ ಬಂಧಿತರು. ಇವರಿಂದ 2915 ರೂ. ನಗದು ವಶಕ್ಕೆ ಪಡೆಯಲಾಗಿದೆ. ಸಿಪಿಐ ಯೋಗೇಶ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಕೃಷ್ಣಮೂರ್ತಿ, ನಟರಾಜ್, ಯೋಗೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಕರೆ ಮಾಡಿ | 9964634494
ಈ ಮೇಲ್ | [email protected]