ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗ ಲೈವ್.ಕಾಂ | 26 ಡಿಸೆಂಬರ್ 2018
ಎಲ್ಲೆಂದರಲ್ಲಿ ಬಿದ್ದಿದ್ದ ಕಸ. ಇಲ್ಲಿಗೆ ಬಂದವರಿಗೆ ಕಾಡುತ್ತಿತ್ತು ಸಾಂಕ್ರಾಮಿಕ ರೋಗದ ಆತಂಕ. ಆಸ್ಪತ್ರೆ ಎದುರಲ್ಲೇ ಇತ್ತು ಕಾಯಿಲೆಗಳ ಕಾರ್ಖಾನೆ..!
ಇದು ಭದ್ರಾವತಿಯ ವಿಐಎಸ್ಎಲ್ ಆಸ್ಪತ್ರೆ ಮುಂಭಾಗದ ಬಸ್ ತಂಗುದಾಣದ ದುಸ್ಥಿತಿ. ಎಲ್ಲೆಂದರಲ್ಲಿ ಕಸದ ರಾಶಿ, ಸುತ್ತಲು ಬೆಳೆದಿದ್ದ ಗಿಡಗಂಟಿಯಿಂದಾಗಿ, ಹಂದಿಗಳ ವಾಸ ಸ್ಥಾನವಾಗಿತ್ತು. ಅಕ್ರಮ ಚಟುವಟಿಕೆಗೆ ಈ ತಂಗುದಾಣ ಆಶ್ರಯ ತಾಣದಂತಾಗಿತ್ತು. ಇದೇ ಕಾರಣಕ್ಕೆ, ಈ ಬಸ್ ತಂಗುದಾಣದ ಬಳಿಗೆ ಬರಲು ಜನರು ಹೆದರುತ್ತಿದ್ದರು. ಆದರೆ ಕಳೆದೆರಡು ದಿನದಿಂದ, ಜನರು ನೆಮ್ಮದಿಯಿಂದ ತಂಗುದಾಣಕ್ಕೆ ಬಂದು ನಿಲ್ಲುತ್ತಿದ್ದಾರೆ. ಸ್ಕೂಲ್ ಮಕ್ಕಳು ಬಸಿಗೆ ಕಾಯಲು ಈ ತಂಗುದಾಣ ಬಳಸುತ್ತಿದ್ದಾರೆ.

ದಿಢೀರ್ ಹೊಸ ರೂಪ ಪಡೆಯಿತು ತಂಗುದಾಣ
ವಿಐಎಸ್ಎಲ್ ಆಸ್ಪತ್ರೆ ಮುಂಭಾಗದ ಬಸ್ ನಿಲ್ದಾಣಕ್ಕೆ ಈಗ ಹೊಸ ರೂಪ ಬಂದಿದೆ. ಕಸದ ರಾಶಿ ಮಾಯವಾಗಿದೆ. ಹಂದಿ, ಬೀದಿ ನಾಯಿಗಳ ಉಪಟಳವಿಲ್ಲ. ಗಿಡಿಗಂಟಿ ಕಣ್ಮರೆಯಾಗಿದ್ದು, ಶಿಥಿಲವಾಗಿದ್ದ ಬಸ್ ನಿಲ್ದಾಣ ಸುಣ್ಣ, ಬಣ್ಣ ಬಳಿದುಕೊಂಡು ಕಂಗೊಳಿಸುತ್ತಿದೆ. ಈ ಬಸ್ ನಿಲ್ದಾಣಕ್ಕೆ ಹೊಸ ರೂಪ ಕೊಟ್ಟಿದ್ದು, ಭದ್ರಾವತಿಯ ಯುವ ಬ್ರಿಗೇಡ್’ನ ಕಾರ್ಯಕರ್ತರು.
ನಿತ್ಯ ಇಲ್ಲಿ ನೂರಾರು ಜನರು ಬಸ್’ಗೆ ಕಾಯುತ್ತಾರೆ. ಬಸ್ ಸ್ಟಾಪ್ ಇದ್ದರೂ ಬಳಸಲು ಯೋಗ್ಯವಾಗಿರಲಿಲ್ಲ. ಯುವ ಬ್ರಿಗೇಡ್ ಕಾರ್ಯಕರ್ತರ ಶ್ರಮದಾನ, ಜನರು ನಿರಮ್ಮಳವಾಗಿ ಈ ಬಸ್ ಸ್ಟಾಪ್ ಬಳಕೆಗೆ ಅವಕಾಶ ಕಲ್ಪಿಸಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಕರೆ ಮಾಡಿ | 9964634494
ಈ ಮೇಲ್ | shivamoggalive@gmail.com






