ಶಿವಮೊಗ್ಗ ಲೈವ್.ಕಾಂ | 17 ಡಿಸೆಂಬರ್ 2018
ಭದ್ರಾವತಿ ಉದ್ಧಾಮ ಕ್ಷೇತ್ರದ ಬಳಿ ಚಿರತೆ ಕಾಣಿಸಿಕೊಂಡಿದೆ..! ಗಂಗೂರು ರಸ್ತೆಯಲ್ಲಿ ಚಿರತೆ ನೋಡಿ ಬೆಚ್ಚಿಬಿದ್ದ ಜನ..! ಬೈಕ್’ನಲ್ಲಿ ಓಡಾಡುತ್ತಿದ್ದವರು, ಜೀವ ರಕ್ಷಣೆಗಾಗಿ ಮರ ಹತ್ತಿ ತಪ್ಪಿಸಿಕೊಂಡರು..! ಹೀಗಂತಾ ಎರಡು ದಿನದಿಂದ ವಾಟ್ಸಪ್, ಫೇಸ್’ಬುಕ್’ನಲ್ಲಿ ಮೆಸೇಜ್’ಗಳು ಹರಿದಾಡುತ್ತಿವೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಭದ್ರಾವತಿಯ ಗಂಗೂರು ಗ್ರಾಮದ ಉದ್ಧಾಮ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಪ್ರತೀ ದಿನ ಭಕ್ತರು ತಂಡೋಪ ತಂಡವಾಗಿ ಹೋಗಿ ಬರುತ್ತಾರೆ. ದಟ್ಟ ಅರಣ್ಯದ ನಡುವೆ, ಪ್ರಶಾಂತ ವಾತಾವರಣದಲ್ಲಿರುವ ದೇಗುಲದಲ್ಲಿ, ಹುಣ್ಣಿಮೆ ದಿನ ವಿಶೇಷ ಪೂಜೆ, ಹೋಮಗಳಿರುತ್ತವೆ. ಅವತ್ತು ಭಾರೀ ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ. ಇದೇ ದೇವಸ್ಥಾನದ ಬಳಿಯೇ ಚಿರತೆ ಕಾಣಿಸಿಕೊಂಡಿದೆ ಅಂತಾ ವಾಟ್ಸಪ್’ನಲ್ಲಿ ಈಗ ಮೆಸೇಜುಗಳ ಫಾರ್ವರ್ಡ್ ಆಗುತ್ತಿವೆ.
ಆದರೆ ಅಸಲಿ ವಿಚಾರವೇ ಬೇರೆ..!
ಚಿರತೆ ಕಾಣಿಸಿಕೊಂಡಿರುವುದು ಉದ್ಧಾಮ ಆಂಜನೇಯ ದೇವಸ್ಥಾನದ ಬಳಿಯಲ್ಲ. ಅಸಲಿಗೆ, ಈ ಫೋಟೊ ಶಿವಮೊಗ್ಗ ಜಿಲ್ಲೆಯದ್ದೇ ಅಲ್ಲ. ಇದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಖಚಿತಪಡಿಸಿದ್ದಾರೆ.
ಅಂದಹಾಗೆ, ಚಿರತೆ ಪ್ರತ್ಯಕ್ಷವಾಗಿ, ಜನರು ಭಯಭೀತಿಗೊಂಡು ಮರ ಹತ್ತಿದ್ದ ಫೋಟೊ ಉತ್ತರ ಕರ್ನಾಟಕ ಭಾಗದ್ದು. ಬೆಳಗಾವಿ ಜಿಲ್ಲೆಯಲ್ಲಿ ಗ್ರಾಮವೊಂದರಲ್ಲಿ ನಡೆದ ಘಟನೆ ಎಂದು ಹೇಳಲಾಗುತ್ತಿದೆ. ಆದರೆ ಭದ್ರಾವತಿ ಉದ್ಧಾಮ ಕ್ಷೇತ್ರದ ರಸ್ತೆಯೆಂದು ವಾಟ್ಸಪ್’ನಲ್ಲಿ ಹರಿದಾಡುತ್ತಿರುವುದರಿಂದ, ಜನ ಆತಂಕಗೊಂಡಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಕರೆ ಮಾಡಿ | 9964634494
ಈ ಮೇಲ್ | [email protected]