ಶಿವಮೊಗ್ಗ ಲೈವ್.ಕಾಂ | BHADRAVATHI | 14 ಅಕ್ಟೋಬರ್ 2019

ಖಿನ್ನತೆಗೆ ಒಳಗಾಗಿ ಭೂಮಿ ಹುಣ್ಣಿಮೆಯಂದು ದಂಪತಿ ನೇಣಿಗೆ ಶರಣಾಗಿದ್ದಾರೆ. ಮನೆಯವರನ್ನು ಪೂಜೆ ಕಳುಹಿಸಿ, ಒಂದೆ ಸೀರಿಗೆ ನೇಣು ಬಿಗಿದುಕೊಂಡು ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಂತೋಷ್ (32) ಮತ್ತು ಪಾರ್ವತಿ (27) ಮೃತ ದಂಪತಿ. ಭದ್ರಾವತಿ ತಾಲೂಕು ಅಗರದಳ್ಳಿ ಕ್ಯಾಂಪ್’ನಲ್ಲಿ ಭಾನುವಾರ ಮಧ್ಯಾಹ್ನ ಘಟನೆ ನಡೆದಿದೆ. ಭೂಮಿ ಹುಣ್ಣಿಮೆ ಪೂಜೆಗಾಗಿ ಮನೆಯಲ್ಲಿ ಅಡುಗೆ ಸಿದ್ಧಪಡಿಸಿ, ಕುಟುಂಬದವರನ್ನು ಪೂಜೆ ಕಳುಹಿಸಿದ್ದರು. ಆ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಂತೋಷ್, ಪಾರ್ವತಿ ಒಂದೂವರೆ ವರ್ಷದ ಹಿಂದೆಯಷ್ಟೆ ಮದುವೆಯಾಗಿದ್ದರು. ಆತ್ಮಹತ್ಯೆ ಸಂಬಂಧ ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]