SHIVAMOGGA LIVE NEWS | 5 FEBRUARY 2023
SHIMOGA JOBS : ಶಿವಮೊಗ್ಗದ ವಿವಿಧೆಡೆ ಉದ್ಯೋಗವಕಾಶವಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಆಯಾ ಜಾಹೀರಾತಿನ ಕೆಳಗಿರುವ ಮೊಬೈಲ್ ನಂಬರ್ ಗಳಿಗೆ ಕರೆ ಮಾಡಿ.
ಫೀಲ್ಡ್ ಸೇಲ್ಸ್
ವೆರಿಟಾಸ್ ಫೈನಾನ್ಸ್ ಸಂಸ್ಥೆಯಲ್ಲಿ ಫೀಲ್ಡ್ ಸೇಲ್ಸ್ ಹುದ್ದೆ ಖಾಲಿ ಇದೆ. ಶಿವಮೊಗ್ಗ, ಅರಸಿಕೆರೆ, ಹಾಸನ, ಕಡೂರು, ತಿಪಟೂರಿನಲ್ಲಿ ಉದ್ಯೋಗವಕಾಶವಿದೆ. ಹೆಚ್ಚಿನ ಮಾಹಿತಿಗೆ ಕೆಳಗಿರುವ ಪೋಸ್ಟರ್ ಗಮನಿಸಿ.
ವೇದಾ ನೀಟ್ ಅಕಾಡೆಮಿ
ಶಿವಮೊಗ್ಗದ ವೇದಾ ನೀಟ್ ಅಕಾಡೆಮಿಯಲ್ಲಿ ಹಲವು ಉದ್ಯೋಗಗಳು ಖಾಲಿ ಇದೆ.
ಆಫೀಸ್ ಅಸಿಸ್ಟೆಂಟ್ – 2 ಹುದ್ದೆ – ಯಾವುದೆ ಪದವಿ
ಮಾರ್ಕೆಟಿಂಗ್ ಎಗ್ಸಿಕ್ಯೂಟಿವ್ – 2 ಹುದ್ದೆ – ಬಿಬಿಎ / ಎಂಬಿಎ
ವಾರ್ಡನ್ – 4 ಹುದ್ದೆ – ಯಾವುದೆ ಪದವಿ
ಅಡ್ಮಿನಿಸ್ಟ್ರೇಟರ್ – 2 ಹುದ್ದೆ – ಎಂಬಿಎ / ಎಂ.ಕಾಂ / ಬಿಇ
ಮ್ಯಾನೇಜರ್ – 1 ಹುದ್ದೆ – ಎಂಬಿಎ / ಎಂ.ಕಾಂ / ಬಿಇ
ಹೆಚ್ಚಿನ ಮಾಹಿತಿಗೆ 9353837425 ಅಥವಾ 9449123850 ಸಂಪರ್ಕಿಸಬಹುದು.
ಗ್ರಾಮೀಣ ಅಂಚೆ ಸೇವಕರು
ಗ್ರಾಮೀಣ ಅಂಚೆ ಸೇವಕರ ನೇಮಕಾತಿ ಸಂಬಂಧ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಶಾಖಾ ಅಂಚೆ ಪಾಲಕ, ಸಹಾಯಕ ಶಾಖಾ ಅಂಚೆ ಪಾಲಕ ಮತ್ತು ಡಾಕ್ ಸೇವಕ್ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಫೆ. 16 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಆಸಕ್ತ ಅಭ್ಯರ್ಥಿಗಳು www.Indiapostgdsonline.gov.in ವೆಬ್ಸೈಟ್ ಮೂಲಕವೇ ಅರ್ಜಿ ಸಲ್ಲಿಸಬೇಕು.
ವಯೋಮಿತಿ 18 ರಿಂದ 40 ವರ್ಷ. ಎಲ್ಲಾ ಹುದ್ದೆಗಳಿಗೆ 10 ನೇ ತರಗತಿ ತೇರ್ಗಡೆ ಕಡ್ಡಾಯ. ಗಣಿತ ಮತ್ತು ಇಂಗ್ಲೀಷ್ನಲ್ಲಿ ಕನಿಷ್ಠ ತೇರ್ಗಡೆ ಅಂಕ ಹೊಂದಿರಬೇಕು. ಕನ್ನಡವನ್ನು 10 ನೇ ತರಗತಿಯಲ್ಲಿ ಒಂದು ಭಾಷೆಯಾಗಿ ಅಧ್ಯಯನ ಮಾಡಿರಬೇಕು.ಅಂಕಗಳ ಆಧಾರದ ಮೇಲೆ ಆನ್ಲೈನ್ ಮೂಲಕವೇ ನೇಮಕಾತಿ ನಡೆಯುತ್ತದೆ.
ಇದೇ ಮೊದಲ ಬಾರಿಗೆ ಗ್ರಾಮೀಣ ಅಂಚೆ ಸೇವಕರ ನೇಮಕಾತಿ ಅಖಿಲ ಭಾರತ ಮಟ್ಟದಲ್ಲಿ ಏಕ ಕಾಲಕ್ಕೆ ನಡೆಯುತ್ತಿದೆ. ದೇಶಾದ್ಯಂತ ಒಟ್ಟು 40,889 ಹುದ್ದೆಗಳು ಖಾಲಿ ಇವೆ. ರಾಜ್ಯದಲ್ಲಿ 3,036 ಹುದ್ದೆಗಳು ಖಾಲಿ ಇದ್ದು, ಶಿವಮೊಗ್ಗ ಅಂಚೆ ವಿಭಾಗದಲ್ಲಿ 149 ಹುದ್ದೆಗಳು ಖಾಲಿ ಇದೆ. ಹೆಚ್ಚಿನ ಮಾಹಿತಿಗಾಗಿ ಆಯಾ ವಿಭಾಗದ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದು. ಶಿವಮೊಗ್ಗ ಅಂಚೆ ವಿಭಾಗದ ಸಂಪರ್ಕ ಸಂಖ್ಯೆ 08182-222516 ಆಗಿರುತ್ತದೆ ಎಂದು ಶಿವಮೊಗ್ಗ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ. SHIMOGA JOBS
ಇದನ್ನೂ ಓದಿ – ಶಿವಮೊಗ್ಗದಲ್ಲಿ ಐಟಿ ಕಂಪನಿಗಳ ಸಂದರ್ಶನಕ್ಕೆ ಮುಗಿಬಿದ್ದ ಉದ್ಯೋಗಾಕಾಂಕ್ಷಿಗಳು, ಹೇಗಿತ್ತು JOB FAIR?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200