ಶಿವಮೊಗ್ಗ ಲೈವ್.ಕಾಂ | SHIMOGA | 5 ಫೆಬ್ರವರಿ 2020

ನವುಲೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಪಂದ್ಯದ ಎರಡನೇ ದಿನದ ಆಟದಲ್ಲಿ, ಕರ್ನಾಟಕ ತಂಡ ಆಲ್ ಔಟ್ ಆಗಿದೆ. ಊಟದ ಸೆಷನ್ ವೇಳೆಗೆ ಕರ್ನಾಟಕ 426 ರನ್ ಗಳಿಸಿ, ಎಲ್ಲ ವಿಕೆಟ್ ಕಳೆದುಕೊಂಡಿದೆ.
ಆರಂಭದಲ್ಲೇ ವಿಕೆಟ್ ಒಪ್ಪಿಸಿದ ಸಮರ್ಥ
ಮೊದಲ ದಿನವೇ ಶತಕ ಬಾರಿಸಿದ್ದ ರವಿಕುಮಾರ್ ಸಮರ್ಥ, ಇವತ್ತು ಆರಂಭದಲ್ಲೇ ಔಟ್ ಆದರು. ನಿನ್ನೆ ಸಮರ್ಥ 105 ರನ್ ಬಾರಿಸಿದ್ದರು. ಇವತ್ತು ಬೆಳಗ್ಗೆ ಮೂರು ರನ್ ಹೊಡೆಯುತ್ತಿದ್ದಂತೆ, ರವಿ ಯಾದವ್ ಬೌಲಿಂಗ್’ನಲ್ಲಿ ಎಲ್’ಬಿಡಬ್ಲು ಆದರು. ಇದು ಕರ್ನಾಟಕ ಟೀಂಗೆ ಭಾರೀ ನಿರಾಸೆ ಮೂಡಿಸಿತು.
ಯಾವ್ಯಾವ ಬ್ಯಾಟ್ಸಮನ್ ಎಷ್ಟು ಸ್ಕೋರ್ ಮಾಡಿದ್ದಾರೆ?
ಇವತ್ತು ಕರ್ನಾಟಕ ತಂಡದ ಕೃಷ್ಣಮೂರ್ತಿ ಸಿದ್ಧಾರ್ಥ್ 62, ಶ್ರೀನಿವಾಸ್ ಶರತ್ 15, ಶ್ರೇಯಸ್ ಗೋಪಾಲ್ 50, ಕೃಷ್ಣಪ್ಪ ಗೌತಮ್ 82, ಅಭಿಮನ್ಯು ಮಿಥುನ್ 1, ಪ್ರತೀಕ್ ಜೈನ್ 2, ರೋನಿತ್ ಮೋರೆ 2 ರನ್ ಸ್ಕೋರ್ ಮಾಡಿದ್ದಾರೆ.
ಮಧ್ಯಪ್ರದೇಶದ ಬಿಗಿ ಫೀಲ್ಡಿಂಗ್
ಕರ್ನಾಟಕ ತಂಡವನ್ನು ಬೆಳಗ್ಗೆಯಿಂದಲೇ ಕಟ್ಟಿಹಾಕುವಲ್ಲಿ ಮಧ್ಯಪ್ರದೇಶ ತಂಡ ಸಫಲವಾಯಿತು. ಬಿಗಿ ಫೀಲ್ಡಿಂಗ್ ಕಾಯ್ದುಕೊಂಡಿತ್ತು. ಮೊದಲ ಇನ್ನಿಂಗ್ಸ್’ನಲ್ಲಿ ಮಧ್ಯಪ್ರದೇಶದ ಬೌಲರ್’ಗಳಾದ ಗೌರವ್ ಯಾದವ್ 31 ಓವರ್’ನಲ್ಲಿ 72 ರನ್ ನೀಡಿ ಎರಡು ವಿಕೆಟ್ ಪಡೆದಿದ್ದಾರೆ. ರವಿ ಯಾದವ್ 24 ಓವರ್, 61 ರನ್, 3 ವಿಕೆಟ್, ಕುಲ್ದೀಪ್ ಸೆನ್ 29 ಓವರ್, 86 ರನ್, 2 ವಿಕೆಟ್, ವೆಂಕಟೇಶ್ ಐಯ್ಯರ್ 14 ಓವರ್ 24 ರನ್, ಕುಮಾರ್ ಕಾರ್ತಿಕೇಯ 30 ಓವರ್, 99 ರನ್, 3 ವಿಕೆಟ್, ಶುಭಂ ಶರ್ಮಾ 3 ಓವರ್, 12 ರನ್, ರಮ್ಜೀನ್ ಖಾನ್ 1 ಓವರ್’ಗೆ 9 ರನ್ ನೀಡಿದ್ದಾರೆ.
- ಅಡಿಕೆ ಧಾರಣೆ | 30 ಸೆಪ್ಟೆಂಬರ್ 2023 | ಎಲ್ಲೆಲ್ಲಿ ಎಷ್ಟಿದೆ ಇವತ್ತಿನ ಅಡಿಕೆ ರೇಟ್?
- ಅಮೀರ್ ಅಹಮದ್ ಸರ್ಕಲ್ನಲ್ಲಿ ಅಲಂಕಾರದ ವಿಚಾರದಲ್ಲಿ ಗೊಂದಲ, ಜಮಾವಣೆಯಾದ ಜನ, ಸದ್ಯ ಪರಿಸ್ಥಿತಿ ಶಾಂತ
- 314 ರೈಲು ವೇಳಾಪಟ್ಟಿ ಬದಲು, ಶಿವಮೊಗ್ಗದ ಯಾವ್ಯಾವ ರೈಲುಗಳ ಸಮಯ ಬದಲು?
- JOBS – ಶಿವಮೊಗ್ಗದ ಎರಡು ಕಡೆ ಕೆಲಸ ಖಾಲಿ ಇದೆ
- ಶಿವಮೊಗ್ಗದಲ್ಲಿ ಪ್ರತಿಭಟನೆಗಷ್ಟೆ ಸೀಮಿತವಾಯ್ತು ಬಂದ್, ನೆಹರು ರಸ್ತೆಯಲ್ಲಿ ಮಾತಿನ ಚಕಮಕಿ
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]