ಶಿವಮೊಗ್ಗ ಲೈವ್.ಕಾಂ | SHIMOGA | 11 ಜನವರಿ 2020

ರಸ್ತೆಯಲ್ಲಿರುವ ಸಾಲು ಸಾಲು ಗುಂಡಿಗಳಿಗೆ ಟ್ರಾಕ್ಟರ್ ಪಲ್ಟಿಯಾಗಿದೆ. ಅದೃಷ್ಟವಶಾತ್ ಯಾವುದೆ ಪ್ರಾಣ ಹಾನಿ ಸಂಭವಿಸಿಲ್ಲ. ಆದರೆ ತೋಟದಿಂದ ಸಾಗಿಸುತ್ತಿದ್ದ ಅಡಕೆ ರಸ್ತೆ ಪಾಲಾಗಿದೆ.

ಲಕ್ಕಿನಕೊಪ್ಪ ಸರ್ಕಲ್ ಬಳಿ ಘಟನೆ ನಡೆದಿದೆ. ರಸ್ತೆ ಗುಂಡಿಗಳಿಂದಾಗಿಯೇ ಟ್ರಾಕ್ಟರ್ ಪಲ್ಟಿ ಹೊಡೆದಿದೆ. ಚಾಲಕ ಮಂಜುನಾಥ್ ಅದೃಷ್ಟವಶಾತ್ ಪರಾಗಿದ್ದಾರೆ.
ಶಿವಮೊಗ್ಗ ಎನ್.ಆರ್.ಪುರ ರಸ್ತೆ ಸಂಪೂರ್ಣ ಗುಂಡಿಮಯವಾಗಿದೆ. ಪ್ರತಿ ದಿನ ಈ ರಸ್ತೆಯಲ್ಲಿ ನೂರಾರು ಬಸ್ಸುಗಳು ಓಡಾಡುತ್ತವೆ. ಉಂಬ್ಳೆಬೈಲು ಗ್ರಾಮದ ಸಮೀಪದಲ್ಲಿ ಭಾರಿ ಗಾತ್ರದ ಗುಂಡಿಗಳಿದ್ದು, ವಾಹನ ಸವಾರರು ಜೀವ ಭಯದಲ್ಲಿ ಸಂಚರಿಸಬೇಕಾಗುತ್ತಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
