ಶಿವಮೊಗ್ಗ ಲೈವ್.ಕಾಂ | SHIMOGA | 11 ಜನವರಿ 2020

ಕೋರ್ಪಲಯ್ಯ ಛತ್ರದ ಬಳಿ ತುಂಗಾ ನದಿಯಲ್ಲಿ ಶ್ರೀ ಸೀತಾರಾಮಾಂಜನೇಯ ಸ್ವಾಮಿ ತೆಪ್ಪೋತ್ಸವವು ವೈಭವದಿಂದ ನೆರವೇರಿತು. ದೊಡ್ಡ ಸಂಖ್ಯೆಯಲ್ಲಿ ಆಗಿಮಿಸಿದ್ದ ಭಕ್ತರು ತೆಪ್ಪೋತ್ಸವವನ್ನು ಕಂಡು ಪುನೀತರಾದರು.
ಸೀತಾ ಕಲ್ಯಾಣ ಮಹೋತ್ಸವದ ಅಂಗವಾಗಿ ತೆಪ್ಪೋತ್ಸವ ಆಯೋಜಿಸಲಾಗಿತ್ತು. ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದ ಆವರಣದಿಂದ ದೇವರ ಮೆರವಣಿಗೆ ನಡೆಸಲಾಯಿತು. ದೊಡ್ಡ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.
ಕೋರ್ಪಲಯ್ಯ ಛತ್ರದವರೆಗೆ ಮೆರವಣಿಗೆ ನಡೆಯಿತು. ಆ ಬಳಿಕ ದೇವರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ತೆಪ್ಪೋತ್ಸವ ನಡೆಯಿತು. ಆಕರ್ಷಕ ಬಿರುಸುಬಾಣ, ಪಟಾಕಿ ಸಿಡಿತ ಉತ್ಸವದ ಮೆರಗನ್ನು ಹೆಚ್ಚಿಸಿತು. ನದಿ ತೀರದಲ್ಲಿ ಸಂಜೆಯಿಂದಲೇ ಸಂಗೀತ ಕಾರ್ಯಕ್ರಮ, ದೇವಾಲಯ ಭಜನಾ ಮಂಡಳಿ ಸದಸ್ಯರಿಂದ ಭಜನೆ ನಡೆಯಿತು, ಉತ್ಸವದ ನಂತರ ಪ್ರಸಾದ ವಿತರಿಸಲಾಯಿತು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]